ಭಾರತ ಸರಣಿಯಿಂದ ಟಾಮ್ ಲ್ಯಾಥಂ ಔಟ್
Team Udayavani, Jan 8, 2020, 11:08 PM IST
ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡಿನ ಇನ್ಫಾರ್ಮ್ ಆರಂಭಕಾರ ಹಾಗೂ ವಿಕೆಟ್ ಕೀಪರ್ ಟಾಮ್ ಲ್ಯಾಥಂ ಭಾರತದೆದುರಿನ ತವರಿನ ಸರಣಿಯಿಂದ ಹೊರಬಿದ್ದಿದ್ದಾರೆ.
ವೇಗಿ ಟ್ರೆಂಟ್ ಬೌಲ್ಟ್ ಲಭಿಸುವುದೂ ಅನುಮಾನವಾಗಿದೆ. ಇದು ಕಿವೀಸ್ಗೆ ಭಾರೀ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆ ಇದೆ.
ಆಸೀಸ್ ಎದುರಿನ ಸಿಡ್ನಿ ಟೆಸ್ಟ್ ವೇಳೆ ಲ್ಯಾಥಂ ಕೈ ಬೆರಳಿಗೆ ಏಟು ಬಿದ್ದಿತ್ತು. ಬೌಲ್ಟ್ ಬಲಗೈಗೆ ಗಾಯ ಮಾಡಿಕೊಂಡಿದ್ದರು. ಅವರು ಇನ್ನೂ ಚೇತರಿಸಿಲ್ಲ.