ವಿಶ್ವನಾಥನ್‌ ಆನಂದ್‌ ಆತ್ಮಚರಿತ್ರೆ “ಮೈಂಡ್‌ ಮಾಸ್ಟರ್‌’ ಬಿಡುಗಡೆ

Team Udayavani, Dec 14, 2019, 11:40 PM IST

ಚೆನ್ನೈ: ಚೆಸ್‌ ದಿಗ್ಗಜ ವಿಶ್ವನಾಥನ್‌ ಆನಂದ್‌ ಅವರ ಆತ್ಮಚರಿತ್ರೆ “ಮೈಂಡ್‌ ಮಾಸ್ಟರ್‌’ ಬಿಡುಗಡೆಗೊಂಡಿದೆ. ಚೆನ್ನೈಯ ಹೊಟೇಲ್‌ ತಾಜ್‌ ಕೋರಮಂಡಲ್‌ನಲ್ಲಿ ನಡೆದ ಸಮಾರಂಭದಲ್ಲಿ ಟಿಎಚ್‌ಜಿ ಪಬ್ಲಿಷಿಂಗ್‌ ಪ್ರೈವೇಟ್‌ ಲಿಮಿಟೆಡ್‌ನ‌ ಚೇರ್ಮನ್‌ ಎನ್‌. ರಾಮ್‌ ಬಿಡುಗಡೆಗೊಳಿಸಿದರು.

ಕ್ರೀಡಾ ಪತ್ರಕರ್ತ ಸುಶಾನ್‌ ನಿನಾಲ್‌ ಈ ಪುಸ್ತಕದ ಸಹ ಲೇಖಕರಾಗಿದ್ದಾರೆ. ಚೆಸ್‌ ಲೆಜೆಂಡ್‌ ಆನಂದ್‌ ಅವರು ಎನ್‌. ರಾಮ್‌ ಅವರೊಂದಿಗೆ ನಡೆಸಿದ ಸಂಭಾಷಣೆಯಲ್ಲಿ ಚೆಸ್‌ ಬಾಳ್ವೆಯ ಪಯಣದ ವೇಳೆ ಘಟಿಸಿದ ಅವಿಸ್ಮರಣೀಯ ನೆನಪುಗಳ ಸರಮಾಲೆಯನ್ನು ಇದರಲ್ಲಿ ತೆರೆದಿಟ್ಟಿದ್ದಾರೆ.

ಪುಸ್ತಕದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ರಾಮ್‌, “ಇದೊಂದು ಕ್ರೀಡೆಯ ಕ್ಲಾಸಿಕ್‌ ಪುಸ್ತಕವಾಗಿದೆ. ಉನ್ನತ ಚೆಸ್‌ ಆಟಗಾರರು, ಚೆಸ್‌ ಆಟ ತಿಳಿಯದವರು, ಉದಯೋನ್ಮುಖ ಚೆಸ್‌ ಓದುಗರು ಆಸಕ್ತಿಯಿಂದ ಓದಬಹುದಾದ ಉಪಯುಕ್ತ ಪುಸ್ತಕವಾಗಿದೆ’ ಎಂದರು.

ನೋಟ್‌ ಬರೆಯುವ ಹವ್ಯಾಸ
“ತಾಯಿ ಸುಶೀಲಾ ಅವರ ಸಲಹೆ ಮೇರೆಗೆ ಚಿಕ್ಕ ಪ್ರಾಯದಲ್ಲಿರುವಾಗಲೇ ಪುಸ್ತಕದಲ್ಲಿ ನೋಟ್‌ ಬರೆಯುವುದನ್ನು ಅಭ್ಯಾಸ ಮಾಡಿಕೊಂಡಿದ್ದೆ. ಒಮ್ಮೆ ಸೀನಿಯರ್‌ ಗ್ರ್ಯಾನ್‌ ಮಾಸ್ಟರ್‌ ಲುಬೊಮಿರ್‌ ಲುಬೊಜೆವಿಕ್‌ ದಿನಂಪ್ರತಿ ಡೈರಿ ಬರೆಯುವುದನ್ನು ರೂಢಿ ಮಾಡಿಕೊಳ್ಳಬೇಕೆಂದು ಹೇಳಿದ್ದರು. ಇದರ ಫ‌ಲವಾಗಿ ಈ ಮೈಂಡ್‌ ಮಾಸ್ಟರ್‌ ಹೊರಬಂದಿದೆ’ ಎಂದು ಆನಂದ್‌ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ