ವಿಶ್ವ ಚಾಂಪಿಯನ್‌ಶಿಪ್: ಬೆಳ್ಳಿ ಗೆದ್ದ ಮೀರಾಬಾಯಿ ಚಾನು
Team Udayavani, Dec 7, 2022, 10:53 PM IST
ಬೊಗೋಟ (ಕೊಲಂಬಿಯ): ಮಣಿಗಂಟಿನ ನೋವಿನ ಹೊರತಾಗಿಯೂ ಭಾರತದ ಭರವಸೆಯ ಲಿಫ್ಟರ್ ಮೀರಾಬಾಯಿ ಚಾನು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಮಿನುಗಿದರು.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದ ಮೀರಾಬಾಯಿ, 49 ಕೆಜಿ ವಿಭಾಗದಲ್ಲಿ ಒಟ್ಟು 200 ಕೆಜಿ ಭಾರವೆತ್ತಿ ದ್ವಿತೀಯ ಸ್ಥಾನಿಯಾದರು. ಸ್ನ್ಯಾಚ್‌ನಲ್ಲಿ 87 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್ ನಲ್ಲಿ 113 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾದರು.
ಚೀನದ ಜಿಯಾಂಗ್ ಹ್ಯುವ ಚಿನ್ನ ಗೆದ್ದರು. ಇವರದು 206 ಕೆಜಿ ಸಾಧನೆ. (93 ಕೆಜಿ ಪ್ಲಸ್ 113 ಕೆಜಿ). ಟೋಕಿಯೊ ಒಲಿಂಪಿಕ್ಸ್ ಚಾಂಪಿಯನ್ ಹೌ ಜಿಹುವ ಇಲ್ಲಿ 198 ಕೆಜಿ ಭಾರವೆತ್ತಿ ಕಂಚಿಗೆ ಸಮಾ ಧಾನಪಟ್ಟರು (89 ಕೆಜಿ ಪ್ಲಸ್ 109 ಕೆಜಿ).
2017ರ ವಿಶ್ವ ಚಾಂಪಿಯನ್ ಆಗಿರುವ ಮೀರಾಬಾಯಿ ಚಾನು, ಸೆಪ್ಟಂಬರ್‌ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಮಣಿಗಂಟಿನ ನೋವಿಗೆ ಸಿಲುಕಿದ್ದರು. ಆದರೂ ನ್ಯಾಶನಲ್ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಮಿಸ್ಟರ್ ಬೀನ್ ಈಗ ಎಲ್ಲಿದ್ದಾರೆ? ಹೇಗಿದ್ದಾರೆ |ಯಾರು ಈ ಮಿಸ್ಟರ್ ಬೀನ್ ?
ಮಲ್ಪೆ ಮೀನಿನ ಮಾರುಕಟ್ಟೆ ಹೇಗೆದೆ ನೋಡಿ | ಯಾವ ಮೀನಿಗೆ ಎಷ್ಟು ಬೆಲೆ ?
ವಿದ್ಯಾರ್ಥಿ ಭವನ್ ವೈಟರ್ ಸಾಹಸಕ್ಕೆ ಆನಂದ್ ಮಹೀಂದ್ರ ಫುಲ್ ಖುಷ್; ಇಲ್ಲಿದೆ ವಿಡಿಯೋ
ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು
ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ
ಹೊಸ ಸೇರ್ಪಡೆ
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR
ಗುಪ್ತಚರ ಇಲಾಖೆ ನಿರ್ದೇಶಕರ ಮನೆಯಲ್ಲಿ ಸಿಆರ್ ಪಿಎಫ್ ಜವಾನ್ ಗುಂಡು ಹಾರಿಸಿಕೊಂಡು ಆತ್ಮಹತ್ಯೆ
ಅಡೆತಡೆಗಳ ದಾಟಿ ಗೆದ್ದ ‘ತನುಜಾ’
ಮೋದಿ ಉತ್ತರಾಧಿಕಾರಿಯಾಗುತ್ತಾರಾ ಯು.ಪಿ ಸಿಎಂ?: ಯೋಗಿ ಆದಿತ್ಯನಾಥ್ ಹೇಳುವುದೇನು?
ದೇಶದ ಮೊದಲ ಪ್ರಕರಣ: ಮಗುವಿನ ನಿರೀಕ್ಷೆಯಲ್ಲಿ ತೃತೀಯ ಲಿಂಗಿ ದಂಪತಿ