ವಿಂಬಲ್ಡನ್ ಟೆನಿಸ್: ಅಜರೆಂಕಾ, ಹಾಲೆಪ್ ಮುನ್ನಡೆ
Team Udayavani, Jul 4, 2019, 5:51 AM IST
ಲಂಡನ್: ಬೆಲರೂಸ್ ಆಟಗಾರ್ತಿ ವಿಕ್ಟೋರಿಯ ಅಜರೆಂಕಾ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಪಂದ್ಯದ ಎರಡನೇ ಸುತ್ತಿನ ಪಂದ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಜತೆಗೆ ಸಿಮೋನಾ ಹಾಲೆಪ್, ಎಲಿನಾ ಸ್ವಿಟೋಲಿನಾ ಕೂಡ ಮುನ್ನಡೆ ಸಾಧಿಸಿದ್ದಾರೆ.
ಬುಧವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯದ ಅಜ್ಲಾ ಟಾಮ್ಜಾನೊವಿಕ್ ವಿರುದ್ಧ ಅಜರೆಂಕಾ 6-2, 6-0 ಸೆಟ್ಗಳ ಸುಲಭ ಗೆಲುವು ಸಾಧಿಸಿದರು. ಆರಂಭದಿಂದಲೇ ಅಜರೆಂಕಾ ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸಿ ತನಗಿಂತ ಕೆಳ ಶ್ರೇಯಾಂಕದ ಆಟಗಾರ್ತಿಯನ್ನು ಸುಲಭದಲ್ಲಿ ಮಣಿಸಿದರು.
ಮಹಿಳಾ ವಿಭಾಗದ ಮತ್ತೂಂದು ಸಿಂಗಲ್ಸ್ ಪಂದ್ಯದಲ್ಲಿ ಪ್ರಚಂಡ ಗೆಲುವು ಸಾಧಿಸುವ ಮೂಲಕ ರೊಮೇನಿಯಾದ ಸಿಮೋನಾ ಹಾಲೆಪ್ ಮುನ್ನಡೆದಿದ್ದಾರೆ. ಅವರು ಎರಡನೇ ಸುತ್ತಿನ ಪಂದ್ಯದಲ್ಲಿ ತಮ್ಮದೇ ದೇಶದ ಆಟಗಾರ್ತಿ ಮಿಹೆಲಾ ಬುಜರ್ನೆಸ್ಕಾ ಅವರನ್ನು 6-3, 4-6, 6-2 ಸೆಟ್ಗಳ ಅಂತರದಿಂದ ಸೋಲಿಸಿದರು.
ಉಕ್ರೇನಿನ ತಾರಾ ಆಟಗಾರ್ತಿ ಎಲಿನಾ ಸ್ವಿಟೋಲಿನಾಗೆ ಸುಲಭ ಮುನ್ನಡೆ ಲಭಿಸಿತು. ರಶ್ಯದ ಆಟಗಾರ್ತಿ ಮಾರ್ಗರಿಟಾ ಪಂದ್ಯದ ವೇಳೆ ಗಾಯದಿಂದ ಹಿಂದೆ ಸರಿದುದರಿಂದ ಸ್ವಿಟೋಲಿನಾ ಮುಂದಿನ ಸುತ್ತಿಗೆ ಏರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್
Team India: ಟಿ20 ವಿಶ್ವಕಪ್ ತಂಡ ರಾಹುಲ್ಗೆ ಚಾನ್ಸ್, ಹಾರ್ದಿಕ್ ಪಾಂಡ್ಯಗೆ ಕೊಕ್?
Chess: ವಿಶ್ವ ಚೆಸ್ ಚಾಂಪಿಯನ್ಶಿಪ್: ಆತಿಥ್ಯ ಹಕ್ಕಿಗಾಗಿ ಭಾರತ ಬಿಡ್
Archery World Cup: ಆರ್ಚರಿ ವಿಶ್ವಕಪ್ ರಿಕರ್ವ್ ವಿಭಾಗದಲ್ಲೂ ಭಾರತ ಫೈನಲ್ಗೆ
IPL; ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ