ವನಿತಾ ಹಾಕಿ ಸರಣಿ: ಕೊನೆಯ ಪಂದ್ಯ ಗೆದ್ದ ಕೊರಿಯಾ

Team Udayavani, May 25, 2019, 6:00 AM IST

ಹೊಸದಿಲ್ಲಿ: ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧ ಸತತ 2 ಹಾಕಿ ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡ ಭಾರತದ ವನಿತೆಯರು, ಕೊನೆಯ ಪಂದ್ಯದಲ್ಲಿ ಎಡವಿದ್ದಾರೆ. ಶುಕ್ರವಾರದ ಮುಖಾಮುಖೀಯಲ್ಲಿ ಕೊರಿಯಾ 4-0 ಅಂತರದಿಂದ ಗೆದ್ದು ಸಮಾಧಾನಪಟ್ಟಿತು.
ಭಾರತ‌ ಮೊದಲೆರಡು ಪಂದ್ಯಗಳಲ್ಲಿ 2-1 ಅಂತರದ ಗೆಲುವು ಸಾಧಿಸಿತ್ತು. ಆದರೆ ತೃತೀಯ ಪಂದ್ಯದಲ್ಲಿ ಈ ಮ್ಯಾಜಿಕ್‌ ನಡೆಯಲಿಲ್ಲ. ರಕ್ಷಣಾ ವಿಭಾಗ ತೀರಾ ದುರ್ಬಲವಾಗಿತ್ತು. ಆತಿಥೇಯ ತಂಡದ ಜಾಂಗ್‌ ಹೀಸಾನ್‌ (29ನೇ ನಿಮಿಷ), ಕಿಮ್‌ ಹ್ಯುಂಜಿ ಮತ್ತು ಕಾಂಗ್‌ ಜಿನಾ (ಎರಡೂ 41 ನಿಮಿಷಗಳಲ್ಲಿ), ಲೀ ಯುರಿ (53ನೇ ನಿಮಿಷ) ಗೋಲು ಸಿಡಿಸಿ ಭರ್ಜರಿ ಗೆಲುವು ತಂದಿತ್ತರು.

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ