Womens ಭಾರತದೆದುರಿನ ಟೆಸ್ಟ್ ಪಂದ್ಯ: ಹಿಂದೆ ಸರಿದ ಎಮ್ಮಾ ಲ್ಯಾಂಬ್
Team Udayavani, Dec 10, 2023, 10:47 PM IST
ಮುಂಬಯಿ: ಭಾರತದೆದುರಿನ ಏಕೈಕ ವನಿತಾ ಟೆಸ್ಟ್ ಪಂದ್ಯದಿಂದ ಇಂಗ್ಲೆಂಡ್ ತಂಡದ ಆಲ್ರೌಂಡರ್ ಎಮ್ಮಾ ಲ್ಯಾಂಬ್ ಹಿಂದೆ ಸರಿದಿದ್ದಾರೆ. ಈ ಪಂದ್ಯ ಡಿ. 14ರಿಂದ 17ರ ತನಕ ಮುಂಬಯಿಯಲ್ಲಿ ನಡೆಯಲಿದೆ.
25 ವರ್ಷದ ಎಮ್ಮಾ ಲ್ಯಾಂಬ್ ಟೆಸ್ಟ್ ತಂಡದೊಂದಿಗೆ ಭಾರತಕ್ಕೆ ಆಗಮಿಸಿದ್ದರು. ಆದರೆ ತೀವ್ರವಾದ ಬೆನ್ನು ನೋವಿನ ಕಾರಣ ತವರಿಗೆ ವಾಪಸಾಗಿ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂಬುದಾಗಿ ಇಸಿಬಿ ತಿಳಿಸಿದೆ.
ಮಧ್ಯಮ ಕ್ರಮಾಂಕದ ಆಟಗಾರ್ತಿ ಮಯಾ ಬೌಶಿಯರ್ ಮತ್ತು ಎಡಗೈ ಸ್ಪಿನ್ನರ್ ಕ್ರಿಸ್ಟಿ ಗೋರ್ಡನ್ ಅವರನ್ನು ಟೆಸ್ಟ್ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇವರಲ್ಲಿ ಗೋರ್ಡನ್ ತಮ್ಮ ಏಕೈಕ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯ ವಿರುದ್ಧ 4 ವರ್ಷಗಳ ಹಿಂದೆ ಟಾಂಟನ್ನಲ್ಲಿ ಆಡಿದ್ದರು. ಬೌಷರ್ ಇನ್ನಷ್ಟೇ ಟೆಸ್ಟ್ ಆಡಬೇಕಿದೆ. ಆದರೆ 22 ಟಿ20 ಮತ್ತು 3 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡನ್ನು ಪ್ರತಿನಿಧಿಸಿದ್ದಾರೆ.
ಇಂಗ್ಲೆಂಡ್ ತಂಡ: ಹೀತರ್ ನೈಟ್ (ನಾಯಕಿ), ಟಾಮಿ ಬ್ಯೂಮಂಟ್, ಡೇನಿಯಲ್ ವ್ಯಾಟ್, ಮಯಾ ಬೌಶಿಯರ್, ಅಲೈಸ್ ಕ್ಯಾಪ್ಸಿ, ಕೇಟ್ ಕ್ರಾಸ್, ಚಾರ್ಲಿ ಡೀನ್, ಸೋಫಿ ಡಂಕ್ಲಿ, ಸೋಫಿ ಎಕ್Éಸ್ಟೋನ್, ಲಾರೆನ್ ಗಿಲರ್, ಕ್ರಿಸ್ಟಿ ಗೋರ್ಡನ್, ಆ್ಯಮಿ ಜೋನ್ಸ್, ಬೆಸ್ ಹೀತ್, ನ್ಯಾಟ್ ಸ್ಕಿವರ್ ಬ್ರಂಟ್, ಲಾರೆನ್ ಬೆಲ್.