ಮತ್ತೆ ಚಿನ್ನ ಗೆದ್ದ ಮನು ಭಾಕರ್‌, ಪನ್ವಾರ್‌

Team Udayavani, Nov 23, 2019, 12:31 AM IST

ಹೊಸದಿಲ್ಲಿ: ಮನು ಭಾಕರ್‌ ಮತ್ತು ದಿವ್ಯಾಂಶ್‌ ಪನ್ವಾರ್‌ ಚೀನದಲ್ಲಿ ನಡೆಯುತ್ತಿರುವ “ಐಎಸ್‌ಎಸ್‌ಎಫ್ ವಿಶ್ವಕಪ್‌ ಶೂಟಿಂಗ್‌ ಫೈನಲ್ಸ್‌’ ಕೂಟದಲ್ಲಿ ಸತತ 2ನೇ ದಿನ ಬಂಗಾರವನ್ನು ಬೇಟೆಯಾಡಿದ್ದಾರೆ. ಶುಕ್ರವಾರ ನಡೆದ ಮಿಕ್ಸೆಡ್‌ ತಂಡ ವಿಭಾಗದ ಸ್ಪರ್ಧೆಯಲ್ಲಿ ಇವರು ಚಿನ್ನಕ್ಕೆ ಗುರಿ ಇರಿಸಿದರು. ಇದರೊಂದಿಗೆ 10 ಮೀ. ಏರ್‌ ಪಿಸ್ತೂಲ್‌ ಮತ್ತು ಏರ್‌ ರೈಫ‌ಲ್‌ ಮಿಕ್ಸೆಡ್‌ ವಿಭಾಗದ “ಪ್ರಸಿಡೆಂಟ್ಸ್‌ ಟ್ರೋಫಿ’ಗಳೆರಡೂ ಭಾರತದ ಪಾಲಾದವು.

ಇಬ್ಬರೂ ವಿದೇಶಿ ಜತೆಗಾರರೊಂದಿಗೆ ಸ್ಪರ್ಧೆಗೆ ಇಳಿದಿದ್ದರು. 10 ಮೀ. ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಮನು ಅವರಿಗೆ ರಶ್ಯದ ಅರ್ಟೆಮ್‌ ಶೆನೌìಸೋವ್‌; 10 ಮೀ. ಏರ್‌ ರೈಫ‌ಲ್‌ ವಿಭಾಗದಲ್ಲಿ ದಿವ್ಯಾಂಶ್‌ ಪನ್ವಾರ್‌ ಅವರಿಗೆ ಕ್ರೊವೇಶಿಯಾದ ಸ್ನೆಜಾನ ಪೆಜ್‌ಸಿಕ್‌ ಜತೆ ನೀಡಿದ್ದರು.

ಪುಟಿಯಾನ್‌ನ “ಚೈನೀಸ್‌ ಶೂಟಿಂಗ್‌ ಆ್ಯಂಡ್‌ ಆರ್ಚರಿ ಅಡ್ಮಿನಿಸ್ಟ್ರೇಶನ್‌ ಸೆಂಟರ್‌’ನಲ್ಲಿ ನಡೆದ ಫೈನಲ್‌ನಲ್ಲಿ ಮನು ಭಾಕರ್‌-ಅರ್ಟೆಮ್‌ ಶೆನೌಸೋವ್‌ ಭಾರತದ ಸೌರಭ್‌ ಚೌಧರಿ-ಗ್ರೀಕ್‌ನ ಅನ್ನಾ ಕೊರಕಾಕಿ ವಿರುದ್ಧ 2-8ರ ಹಿನ್ನಡೆಯ ಬಳಿಕ ತಿರುಗಿ ಬಿದ್ದು 17-13 ಅಂತರದ ರೋಚಕ ಜಯ ಸಾಧಿಸಿದರು. ಈ ಕೂಟದ ಕಂಚು ಭಾರತದ ಶಾಜಾರ್‌ ರಿಜ್ವಿ-ಸರ್ಬಿಯಾದ ಜೊರಾನಾ ಅರುನೋವಿಕ್‌ ಪಾಲಾಯಿತು.

17ರ ಹರೆಯದ ಪ್ರತಿಭಾನ್ವಿತ ಶೂಟರ್‌ ಮನು ಭಾಕರ್‌ ಈ ವರ್ಷ ಸೌರಭ್‌ ಚೌಧರಿ ಜತೆಗೂಡಿ ತಂಡ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. 2019ರ ನಾಲ್ಕೂ ವಿಶ್ವಕಪ್‌ ಸ್ಪರ್ಧೆಗಳಲ್ಲಿ ಚಿನ್ನವನ್ನೇ ಜಯಿಸಿದ್ದರು. ಶುಕ್ರವಾರದ ಡ್ರಾದಲ್ಲಿ ಮನು ಭಾಕರ್‌ಗೆ ರಶ್ಯನ್‌ ಶೂಟರ್‌ ಜತೆಯಾದರು. ಚೌಧರಿ ಎದುರಾಳಿಯಾಗಿ ಕಾಣಿಸಿಕೊಂಡರು. ಆದರೆ ಬಂಗಾರದ ಬೇಟೆ ಮಾತ್ರ ತಪ್ಪಲಿಲ್ಲ.

10 ಮೀ. ಏರ್‌ ರೈಫ‌ಲ್‌ ಫೈನಲ್‌ನಲ್ಲಿ ಭಾರತದ ಅಪೂರ್ವಿ ಚಂಡೇಲ-ಚೀನದ ಜಾಂಗ್‌ ಚಾಂಗೋಂಗ್‌ ವಿರುದ್ಧ ದಿವ್ಯಾಂಶ್‌ ಪನ್ವಾರ್‌-ಸ್ನೆಜಾನ ಪೆಜ್‌ಸಿಕ್‌ 0-6ರ ಭಾರೀ ಹಿನ್ನಡೆಯಲ್ಲಿದ್ದರು. ಬಳಿಕ 16-14 ಅಂಕಗಳ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು.

ಅಗ್ರಸ್ಥಾನದಲ್ಲಿ ಭಾರತ
ಕೂಟದಲ್ಲಿ ಭಾರತ ಅಗ್ರಸ್ಥಾನ ಕಾಯ್ದು ಕೊಳ್ಳುವಲ್ಲಿ ಯಶಸ್ವಿಯಾಗಿದೆ. 5 ಚಿನ್ನ, 2 ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಜಯಿಸಿದ್ದು ಭಾರತದ ಸಾಧನೆಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ