ಮೇರಿ ಸಹಿತ ನಾಲ್ವರು ಸೆಮಿಗೆ: 4 ಪದಕ ಖಾತ್ರಿ


Team Udayavani, Nov 21, 2018, 6:00 AM IST

w-32.jpg

ಹೊಸದಿಲ್ಲಿ: ಇಲ್ಲಿ ಸಾಗುತ್ತಿರುವ ವನಿತಾ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ತಾರಾ ಬಾಕ್ಸರ್‌ ಮೇರಿಕೋಮ್‌ ಸಹಿತ ನಾಲ್ವರು ಬಾಕ್ಸರ್‌ಗಳು ಸೆಮಿಫೈನಲ್‌ ಪ್ರವೇಶಿಸಿದ್ದು, ಭಾರತಕ್ಕೆ 4 ಪದಕ ಖಾತ್ರಿಪಡಿಸಿದ್ದಾರೆ. ಲೈಟ್‌ಫ್ಲೈವೇಟ್‌ ಸ್ಪರ್ಧೆಯ 48 ಕೆ.ಜಿ. ವಿಭಾಗದಲ್ಲಿ 5 ಬಾರಿಯ ವಿಶ್ವ ಚಾಂಪಿಯನ್‌ ಮೇರಿ ಕೋಮ್‌ ಚೀನದ ವು ಯು ವಿರುದ್ಧ 5-0 ಅಂಕಗಳ ಅಂತರದಿಂದ ಗೆದ್ದುª ಪದಕ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಈ ಕೂಟದಲ್ಲಿ 5 ಚಿನ್ನ ಹಾಗೂ 1 ಬೆಳ್ಳಿ ಗೆದ್ದಿರುವ ಕೋಮ್‌ 2010ರಲ್ಲಿ ಗೆದ್ದ ಪದಕವೇ ಕೊನೆಯದ್ದಾಗಿದೆ. ಸದ್ಯ ಪದಕ ಸುತ್ತಿಗೆ ಪ್ರವೇಶಿಸುವ ಮೂಲಕ ಒಟ್ಟು ಪದಕಗಳ ಸಂಖ್ಯೆಯನ್ನು ಏಳಕ್ಕೇರಿಸುವ ತವಕದಲ್ಲಿದ್ದಾರೆ. 

ಸೆಮಿಫೈನಲ್‌ನಲ್ಲಿ ಕೋಮ್‌ ಉತ್ತರ ಕೊರಿಯಾದ ಕಿಮ್‌ ಹಾಯಿಂಗ್‌ ಮಿ ಅವರನ್ನು ಎದುರಿಸಲಿದ್ದಾರೆ. ಲವ್ಲಿನಾ, ಸೋನಿಯಾ, ಸಿಮ್ರನ್‌ ಸೆಮಿಗೆ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸ್ಪರ್ಧಿಸುತ್ತಿರುವ ಲವ್ಲಿನಾ ಬೊರ್ಗೊಹೆನ್‌ (69ಕೆ.ಜಿ.)ಕೂಡ ಸೆಮಿಫೈನಲ್‌ ಪ್ರವೇಶಿ ಸಿದ್ದು, ಚೊಚ್ಚಲ ಪದಕ ಗೆಲ್ಲುವ ಸಂಭ್ರಮದಲ್ಲಿದ್ದಾರೆ. ಅವರು ಆಸ್ಟ್ರೇಲಿಯದ ಸ್ಕಾಟ್‌ ಕಿಯಿ ಫ್ರಾನ್ಸೆಸ್‌ ಅವರನ್ನು 5-0 ಅಂತರದಿಂದ ಸೋಲಿಸಿದರು. ಲವ್ಲಿನಾ ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯಾ ಓಪನ್‌ ಕೂಟದಲ್ಲಿ ಚಿನ್ನ ಪದಕ ಜಯಿಸಿದ್ದರು.  ಅವರು ಮುಂದಿನ ಪಂದ್ಯದಲ್ಲಿ ಚೈನೀಸ್‌ ತೈಪೆಯ ಚೆನ್‌ ನಿಯೆನ್‌ ಚಿನ್‌ ಅವರ ವಿರುದ್ಧ ಆಡಲಿದ್ದಾರೆ. 

57 ಕೆ.ಜಿ. ಫೆದರ್‌ವೆಟ್‌ ವಿಭಾಗದಲ್ಲಿ ಸೋನಿತಾ ಚಾಹಲ್‌ ಕೊಲಂಬಿಯಾದ ಪ್ರತಿಸ್ಪರ್ಧಿ ಎರಿಯಾಸ್‌ ಕ್ಯಾಸ್ಟೆನಡಾ ಯೇನಿ ಮಾರ್ಸೆಲಾ ಅವರನ್ನು 4-1 ಅಂಕಗಳ ಅಂತರ ದಿಂದ ಸೋಲಿಸಿದರು. 64 ಕೆ.ಜಿ. ಲೈಟ್‌ವಾಲ್ಟರ್‌ವೆàಟ್‌ ವಿಭಾಗದಲ್ಲಿ ಸಿಮ್ರನ್‌ಜಿàತ್‌ ಕೌರ್‌ ಐರ್ಲೆಂಡ್‌ನ‌ ಅಮಿ ಸಾರ ಬ್ರಾಡ್‌ಹರ್ಟ್ಸ್ ಅವರ ವಿರುದ್ಧ 3-1 ಅಂಕಗಳಿಂದ ಜಯಿಸಿದರು.

ಸೀಮಾ, ಮನೀಷಾ, ಭಾಗ್ಯಭತಿ, ಪಿಂಕಿ ನಿರಾಸೆ 
ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದ ಸೀಮಾ ಪೂನಿಯಾ (81 ಕೆ.ಜಿ. ಹೆವಿವೇಟ್‌)ಮನೀಷಾ ಮೌನ್‌ (54 ಕೆ.ಜಿ. ಬಾಟಮ್‌ವೇಟ್‌), ಭಾಗ್ಯಭತಿ ಕಚಾರಿ (81 ಕೆ.ಜಿ. ಲೈಟ್‌ಹೆವಿವೇಟ್‌), ಪಿಂಕಿ ರಾಣಿ (51 ಕೆ.ಜಿ. ಫ್ಲೈ ವೇಟ್‌) ತಮ್ಮ ವಿಭಾಗಗಳಲ್ಲಿ ಸೋಲನುಭವಿಸಿ ನಿರಾಸೆ ಮೂಡಿಸಿದ್ದಾರೆ. ನೇರವಾಗಿ 8ರ ಘಟ್ಟಕ್ಕೆ ಪ್ರವೇಶಿಸಿದ್ದ ಭಾರತದ  ಸೀಮಾ ಪೂನಿಯಾ ಮೊದಲ ಪಂದ್ಯದಲ್ಲಿಯೇ ಆಘಾತ ಅನುಭವಿಸಿದ್ದಾರೆ. ಅವರು ಚೀನ ಯಾಂಗ್‌ ಕ್ಸಿಯೋಲಿ ವಿರುದ್ಧ ಅವಿರೋಧ ತೀರ್ಪಿನ ಅನ್ವಯ ಸೋತರು.  ಮನೀಷಾ ಅವರು ಬಲ್ಗೇರಿಯಾದ  ಸ್ಟಾಯೋಕಾ ಪೆಟ್ರೋವಾ ಅವರ ವಿರುದ್ಧ 4-1 ಅಂಕಗಳ ಅಂತರದಿಂದ ಮುಗ್ಗರಿಸಿದರೆ, ಭಾಗ್ಯಭತಿ 2-3 ಅಂಕಗಳಿಂದ ಕೊಲಂಬಿಯಾದ ಜೆಸ್ಸಿಕಾ ಸಿನಿಸೆಟ್ರಾì ವಿರುದ್ಧ ಸೋತರು. ಪಿಂಕಿ ರಾಣಿ ಕೊರಿಯಾದ ಚೊಲ್‌ ಮಿ ಪಂಗ್‌ ವಿರುದ್ಧ ಸೋಲನುಭವಿಸಿದರು.

ಈ ಪಂದ್ಯ ಕಷ್ಟಕರವಾಗಿತ್ತು. ಈ ಕೂಟದಲ್ಲಿ ಚೀನದ ಉತ್ತಮ ಬಾಕ್ಸರ್‌ಗಳು ಸ್ಪರ್ಧಿಸುತ್ತಿದ್ದಾರೆ. ಚೀನದ ಸ್ಪರ್ಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಎದುರಿಸಿದ್ದೇನೆ. ಆದರೆ ವು ಯು ಅವರ ವಿರುದ್ಧ ಇಲ್ಲಿಯ ವರೆಗೆ ಆಡಿಲ್ಲ. ಆದರೆ ಪಂದ್ಯದಲ್ಲಿ ಹಿಡಿತ ಸಾಧಿಸಿದ ಬಳಿಕ ಜಯಿಸುವಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ .
-ಮೇರಿ ಕೋಮ್‌ 

ಟಾಪ್ ನ್ಯೂಸ್

cm

ಕೋವಿಡ್ ರೂಪಾಂತರ: ರಾಜ್ಯ ಸರಕಾರ ಕೈಗೊಂಡ ಪ್ರಮುಖ ತೀರ್ಮಾನಗಳು ಹೀಗಿವೆ

1-asads

ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ರದ್ದು

ಗಂಗಾವತಿ: ಗೃಹಿಣಿಯ ಕೊಲೆ; ಅತ್ಯಾಚಾರದ ಶಂಕೆ

ಗಂಗಾವತಿ: ಗೃಹಿಣಿಯ ಕೊಲೆ; ಅತ್ಯಾಚಾರದ ಶಂಕೆ

1-sr

ಯಾಕೆ ಹೀಗಾಯಿತೋ ಗೊತ್ತಿಲ್ಲ: ಟಿಕೆಟ್ ‘ಕೈ’ ತಪ್ಪಿದ ನೋವಿನಲ್ಲಿ ಎಸ್.ಆರ್. ಪಾಟೀಲ್

dr-sudhakar

ಕೋವಿಡ್ ವೈರಸ್ 25 ಬಗೆಯ ರೂಪಾಂತರಿಗಳನ್ನು ಹೊಂದಿದೆ: ಆರೋಗ್ಯ ಸಚಿವ ಡಾ.ಕೆ.ಸುಧಾಕರ್

ವಿಟ್ಲ: ಕಾರು ಢಿಕ್ಕಿ ಹೊಡೆದು ಬಾಲಕ ಗಂಭೀರ

ವಿಟ್ಲ: ಕಾರು ಢಿಕ್ಕಿ ಹೊಡೆದು ಬಾಲಕ ಗಂಭೀರ

ನಿಗದಿತ ಪ್ರೇಕ್ಷಕರ ಸಂಖ್ಯೆಯಲ್ಲಿ ನಡೆಯಲಿದೆ ಸನ್ ಬರ್ನ್ ಸಂಗೀತೋತ್ಸವ

ನಿಗದಿತ ಪ್ರೇಕ್ಷಕರ ಸಂಖ್ಯೆಯಲ್ಲಿ ನಡೆಯಲಿದೆ ಸನ್ ಬರ್ನ್ ಸಂಗೀತೋತ್ಸವಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asads

ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ರದ್ದು

ಬದಲಿ ಆಟಗಾರನಾಗಿ ಅವಕಾಶ ಪಡೆದು ಮಿಂಚಿದ ಕೆಎಸ್ ಭರತ್; ಹೊಸ ದಾಖಲೆ

ಬದಲಿ ಆಟಗಾರನಾಗಿ ಅವಕಾಶ ಪಡೆದು ಮಿಂಚಿದ ಕೆಎಸ್ ಭರತ್; ಹೊಸ ದಾಖಲೆ

ಅಕ್ಷರ್, ಅಶ್ವಿನ್ ಸ್ಪಿನ್ ಜಾದೂ: ಆಲೌಟಾದ ನ್ಯೂಜಿಲ್ಯಾಂಡ್, ಭಾರತಕ್ಕೆ 49 ರನ್ ಮುನ್ನಡೆ

ಅಕ್ಷರ್, ಅಶ್ವಿನ್ ಸ್ಪಿನ್ ಜಾದೂ: ಆಲೌಟಾದ ನ್ಯೂಜಿಲ್ಯಾಂಡ್, ಭಾರತಕ್ಕೆ 49 ರನ್ ಮುನ್ನಡೆ

KS Bharat Keeping Wickets For India Instead Of Wriddhiman Saha

ಕಾನ್ಪುರ ಟೆಸ್ಟ್: ಸಾಹಾ ಬದಲು ವಿಕೆಟ್ ಕೀಪಿಂಗ್ ಗೆ ಆಗಮಿಸಿದ ಕೆ.ಎಸ್.ಭರತ್!

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಮನ್‌ಪ್ರೀತ್‌ ಸಿಂಗ್‌ ಸಾರಥ್ಯ

ಏಶ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಮನ್‌ಪ್ರೀತ್‌ ಸಿಂಗ್‌ ಸಾರಥ್ಯ

MUST WATCH

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

udayavani youtube

ಬೆಂಗಳೂರಿನಿಂದ ಪಾಟ್ನಾಕ್ಕೆ 139 ಪ್ರಯಾಣಿಕರನ್ನು ಹೊತ್ತ ವಿಮಾನ ತುರ್ತು ಭೂಸ್ಪರ್ಶ

udayavani youtube

Shree Chamundeshwari Kshetra Arikodi

udayavani youtube

ಮೈಮೇಲೆ ದೇವರು ಬಂದಿದ್ದಾರೆ ಎಂದು ಲಸಿಕೆ ಹಾಕಲು ಬಂದವರನ್ನೇ ಯಾಮಾರಿಸಿದ ವ್ಯಕ್ತಿ

udayavani youtube

ಕಾರು ಶೋರೂಂ ಒಳಗೆ ನುಗ್ಗಿದ ಕಾಡು ಹಂದಿ!

ಹೊಸ ಸೇರ್ಪಡೆ

cm

ಕೋವಿಡ್ ರೂಪಾಂತರ: ರಾಜ್ಯ ಸರಕಾರ ಕೈಗೊಂಡ ಪ್ರಮುಖ ತೀರ್ಮಾನಗಳು ಹೀಗಿವೆ

ಅಧಿಕಾರಿಗಳು ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ದಾಖಲಾತಿ ನೀಡಿದರೆ ಉಪವಾಸ ಸತ್ಯಾಗ್ರಹ

ಅಧಿಕಾರಿಗಳು ಒತ್ತಡಕ್ಕೆ ಮಣಿದು ನಿಯಮ ಉಲ್ಲಂಘಿಸಿ ದಾಖಲಾತಿ ನೀಡಿದರೆ ಉಪವಾಸ ಸತ್ಯಾಗ್ರಹ

1-asads

ಕೋವಿಡ್ ರೂಪಾಂತರ: ಮಹಿಳಾ ಏಕದಿನ ವಿಶ್ವಕಪ್‌ ಅರ್ಹತಾ ಪಂದ್ಯಗಳು ರದ್ದು

ಸಿಂದಗಿ : ಅಕಾಲಿಕ ಮಳೆಯಿಂದ ಬೆಳೆ ಹಾನಿ, ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ

ಸಿಂದಗಿ ; ಬೆಳೆಹಾನಿ ಪ್ರದೇಶಕ್ಕೆ ಅಧಿಕಾರಿಗಳ ತಂಡ ಭೇಟಿ, ಪರಿಶೀಲನೆ

Untitled-1

ಬೇಕರಿಯ ಆಹಾರದ ಶುಚಿತ್ವವನ್ನು ಪರಿಶೀಲಿಸಿದ ಅಧಿಕಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.