ವಿದೇಶಿ ಟಿ20 ಆಡಲು ಬಿಸಿಸಿಐ ಅನುಮತಿ ಕೋರಿದ ಯುವಿ

Team Udayavani, Jun 20, 2019, 5:55 AM IST

ಹೊಸದಿಲ್ಲಿ: ಕಳೆದ ವಾರ ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನಕ್ಕೆ ವಿದಾಯ ಘೋಸಿಸಿದ್ದ ಆಲ್‌ರೌಂಡರ್‌ ಯುವರಾಜ್‌ ಸಿಂಗ್‌, ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಬಿಸಿಸಿಐ ಅನುಮತಿ ಕೋರಿದ್ದಾರೆ.

37 ವರ್ಷದ ಯುವರಾಜ್‌ ಸಿಂಗ್‌ ನಿವೃತ್ತಿ ಘೋಷಣೆಯ ವೇಳೆ ವಿದೇಶಿ ಟಿ20 ಟೂರ್ನಿಗಳಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದರು. “ನಿವೃತ್ತಿಯ ಬಳಿಕ ಸ್ವಲ್ಪ ಸಮಯ ನಾನು ಕ್ರಿಕೆಟ್‌ ಖುಷಿಯನ್ನು ಅನುಭವಿಸಲು ಬಯಸುತ್ತೇನೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ ಜೀವನದ ಕುರಿತು ಆಲೋಚಿಸಿ ಒತ್ತಡಕ್ಕೆ ಒಳಗಾಗಿದ್ದೆ. ನನಗೀಗ ಬ್ರೇಕ್‌ ಸಿಕ್ಕಿದೆ. ಹೀಗಾಗಿ ವಿದೇಶಿ ಟಿ20ಗಳಲ್ಲಿ ಆಡಲು ನನಗೆ ಅನುಮತಿ ನೀಡಿ’ ಎಂದು ಯುವಿ ಬಿಸಿಸಿಐಗೆ ಮನವಿ ಮಾಡಿದ್ದಾರೆ.

ಯುವರಾಜ್‌ ಮನವಿ ಕುರಿತು ಪ್ರತಿಕ್ರಿಯಿಸಿರುವ ಬಿಸಿಸಿಐ, “ವಿದೇಶಿ ಟಿ20 ಲೀಗ್‌ಗಳಲ್ಲಿ ಆಡಲು ಆಸಕ್ತಿ ಹೊಂದಿರುವ ಯುವರಾಜ್‌, ಬಿಸಿಸಿಐ ಅನುಮತಿ ಇಲ್ಲದೆ ಆಡಲು ಸಾಧ್ಯವಾಗದು. ಹೀಗಾಗಿ ಅವರು ಕ್ರಿಕೆಟ್‌ ಮಂಡಳಿಯ ಅನುಮತಿ ಕೋರಿದ್ದಾರೆ’ ಎಂದು ಸ್ಪಷ್ಟಪಡಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ