ಆ್ಯಸಿಡ್‌ ಕುಡಿದು 2 ಮಕ್ಕಳ ಸಾವು

Team Udayavani, Sep 29, 2017, 7:10 AM IST

ಬೆಂಗಳೂರು: ತಂಪು ಪಾನೀಯವೆಂದು ಸೈನೈಡ್‌ ಆ್ಯಸಿಡ್‌ ಕುಡಿದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಲ್ಲಿನ ಕೆ.ಆರ್‌.ಮಾರುಕಟ್ಟೆ ಬಳಿಯ ಅವಿನ್ಯೂ ರಸ್ತೆಯಲ್ಲಿ ಬುಧವಾರ ರಾತ್ರಿ ನಡೆದಿದೆ. ಸಾಹಿಲ್‌ (9) ಮತ್ತು ಆರ್ಯನ್‌ ಸಿಂಗ್‌(9) ಸಾವನ್ನಪ್ಪಿದ ಮಕ್ಕಳು. ಈ ಘಟನೆಯಲ್ಲಿ ಸಾಹಿಲ್‌ ತನ್ನ ಹುಟ್ಟುಹಬ್ಬದ ದಿನದಂದೇ ಮೃತಪಟ್ಟಿರುವುದು ಮನಕಲ ಕುವಂತಿದೆ.ಚಿನ್ನಾಭರಣ ಪಾಲಿಶ್‌ಗೆಂದು ಸೈನೈಡ್‌ ಆ್ಯಸಿಡ್‌ ಅನ್ನು ಸಾಹಿಲ್‌ ತಂದೆ ಶಂಕರ್‌ ಮನೆಯಲ್ಲೇ ಇಟ್ಟಿದ್ದರು. ಬುಧವಾರ ಸಾಹಿಲ್‌ ಹುಟ್ಟುಹಬ್ಬವಿತ್ತು. ಹೀಗಾಗಿ ಇಡೀ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. ಇದೇ ವೇಳೆ ಸಾಹಿಲ್‌ ಸ್ನೇಹಿತ ಆರ್ಯನ್‌ಸಿಂಗ್‌ ತಂದೆ ಸಂಜಯ್‌ ಸಿಂಗ್‌ ಜತೆ ಮನೆಗೆ ಶುಭ ಕೋರಲು ಬಂದಿದ್ದ.

ಇದೇ ವೇಳೆ ತಿವ್ರ ಬಾಯಾರಿಕೆಯಾಗಿದ್ದ ಮಕ್ಕಳು ಸೈನೈಡ್‌ ಆ್ಯಸಿಡ್‌ ಅನ್ನು ನೀರೆಂದು ಭಾವಿಸಿ ಸೇವಿಸಿದ್ದಾರೆ. ವಿಷಯ ತಿಳಿದ ಪೋಷಕರು ಕೂಡಲೇ ಆಸ್ಪತ್ರೆಗೆ ಕರೆ ದೊಯ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ಸಂಬಂಧ ಅಸ್ವಾಭಾವಿಕ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆ್ಯಸಿಡ್‌ ಸೇವನೆ: ಮಹಾರಾಷ್ಟ್ರ ಮೂಲದ ಶಂಕರ್‌ ಮತ್ತು ಸಂಜಯ್‌ ಸಿಂಗ್‌ ಕಳೆದ 20 ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದು, ಇಲ್ಲಿನ ಅವಿನ್ಯೂ ರಸ್ತೆಯಲ್ಲಿ ನೆಲೆಸಿದ್ದಾರೆ. ಮನೆಯಲ್ಲಿಯೇ ಚಿನ್ನಾಭರಣ ಪಾಲಿಶ್‌ ಕೆಲಸ ಮಾಡುತ್ತಾರೆ.ಬುಧವಾರ ರಾತ್ರಿ ಶಂಕರ್‌ ತಮ್ಮ ಪುತ್ರ ಸಾಹಿಲ್‌ ಹುಟ್ಟುಹಬ್ಬವನ್ನು ಬಹಳ ಸಂಭ್ರಮದಿಂದ ಆಯೋಜಿಸಿದ್ದರು. ಇದಕ್ಕಾಗಿ ತಮ್ಮ ಎಲ್ಲ ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನ ನೀಡಿದ್ದರು. ರಾತ್ರಿ 8 ಗಂಟೆ ಸುಮಾರಿಗೆ ಹುಟ್ಟುಹಬ್ಬದ ಕೇಕ್‌ ಕತ್ತರಿಸಿದ ಸಾಹಿಲ್‌, ಸ್ನೇಹಿತರ ಜತೆ ಸೇರಿಕೊಂಡು ಸಿಹಿ ತಿಂಡಿ, ಕೇಕ್‌ಗಳನ್ನು ತಿಂದಿದ್ದಾನೆ. ಬಳಿಕ ಆರ್ಯನ್‌ ಸಿಂಗ್‌ ಮತ್ತಷ್ಟು ಕೇಕ್‌ ತಿಂದಿದ್ದಾನೆ. ನಂತರ ಇಬ್ಬರು ನೀರಿನ ದಾಹ ತೀರಿಸಿ
ಕೊಳ್ಳಲು ನೀರು ಅಥವಾ ತಂಪು ಪಾನಿಯಕ್ಕಾಗಿ ಮನೆಯಲ್ಲ ಹುಡುಕಾಟ ನಡೆಸಿದ್ದಾರೆ. ಎಲ್ಲಿಯೂ ಸಿಕ್ಕಿಲ್ಲ. ಕೂಡಲೇ ಐದನೇ ಮಹಡಿಗೆ ಹೋದ ಇಬ್ಬರು ತಂದೆ ಶಂಕರ್‌ ಚಿನ್ನಾಭರಣ ಪಾಲಿಶ್‌ ಮಾಡಲು ಇಟ್ಟಿದ್ದ ಸೈನೈಡ್‌ ಆ್ಯಸಿಡ್‌ ಅನ್ನು
ತಪ್ಪು ಪಾನೀಯವೆಂದು ಕುಡಿದಿದ್ದಾರೆ. ಬಳಿಕ ಕೆಳಗಿಳಿದು ಬಂದ ಇಬ್ಬರಿಗೆ ಪೋಷಕರು ನೀರು ಕುಡಿದ ಬಗ್ಗೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸಿದ ಮಕ್ಕಳು, ಐದನೇ ಮಹಡಿಯಲ್ಲಿದ್ದ ಕೂಲ್‌ ಡ್ರಿಂಕ್ಸ್‌ ಕುಡಿದಿರುವುದಾಗಿ ತಿಳಿಸಿದ್ದಾರೆ. ಗಾಬರಿಗೊಂಡ ಶಂಕರ್‌ ಮೇಲೆ ಹೋಗಿ ನೋಡಿದಾಗ, ಪಾಲಿಶ್‌ಗೆ ಬಳಸಿದ ದ್ರಾವಣ ಕುಡಿದಿರುವುದು ಗೊತ್ತಾಗಿದೆ.

ಅಷ್ಟರಲ್ಲಿ ಇಬ್ಬರು ಮಕ್ಕಳು ಕೆಳಗೆ ಬಿದ್ದು ನರಳಾಡುತ್ತಿದ್ದರು. ಇದನ್ನು ಗಮನಿಸಿದ ಪೋಷ ಕರು ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದ ರಾದರೂ, ಮಾರ್ಗಮಧ್ಯೆಯೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮೈಸೂರು/ ಬೆಂಗಳೂರು: ಪಾಕಿಸ್ಥಾನ ಪರ ಘೋಷಣೆ ಕೂಗಿದ ವಿದ್ಯಾರ್ಥಿನಿ ಅಮೂಲ್ಯಾ ಲಿಯೋನಾಗೆ ನಕ್ಸಲ್‌ ನಂಟು ಇರುವುದು ಸಾಬೀತಾ ಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ...

  • ಬೆಂಗಳೂರು: ಅನಕ್ಷರತೆ, ಬಡತನ, ಮೂಢನಂಬಿಕೆ, ಸಂಪ್ರದಾಯಗಳು,ಅರಿವಿನ ಕೊರತೆಯಿಂದಾಗಿ ರಾಜ್ಯದಲ್ಲಿ ಬಾಲ್ಯವಿವಾಹ ಹೆಚ್ಚುತ್ತಲೇ ಇದೆ. ಕಳೆದ ಐದು ವರ್ಷಗಳಲ್ಲಿ 453...

  • ಬೆಂಗಳೂರು: ಅಮೂಲ್ಯಾ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ "ಮುಸಲ್ಮಾನ್‌,ದಲಿತ,ಕಾಶ್ಮೀರಿ, ಟ್ರಾನ್ಸ್‌,ಆದಿವಾಸಿ-ಮುಕ್ತಿ, ಮುಕ್ತಿ, ಮುಕ್ತಿ, ಈ ಕೂಡಲೇ' ಎಂಬ...

  • ಬೆಂಗಳೂರು: ರಾಜ್ಯದ ಸರಕಾರಿ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವಿದೇಶೀ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವ ಸಂದರ್ಭದಲ್ಲಿ ಹೆಚ್ಚು ನಿಗಾ ವಹಿಸಬೇಕು ಎಂದು ಕಾಲೇಜು...

  • ಬೆಂಗಳೂರು: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಆಧುನಿಕ ಸ್ಪರ್ಶ ಕೊಟ್ಟು, ಅವುಗಳನ್ನು ಓದುಗ ಸ್ನೇಹಿ ಮತ್ತು ಜನಸ್ನೇಹಿ ಜ್ಞಾನ ಕೇಂದ್ರಗಳನ್ನಾಗಿ ಮಾಡಲು ಗ್ರಾಮೀಣಾಭಿವೃದ್ಧಿ...

ಹೊಸ ಸೇರ್ಪಡೆ