
‘ಯೂತ್ ಗಲಾಟೆ’: ರಕ್ಷಾ ರಾಮಯ್ಯ ಬೆಂಬಲಿಗನ ಮೇಲೆ ನಲಪಾಡ್ ಹಲ್ಲೆ ಆರೋಪ!
Team Udayavani, Jan 20, 2022, 12:26 PM IST

ಬೆಂಗಳೂರು: ಯೂತ್ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಯುವ ಕಾಂಗ್ರೆಸ್ ನಾಯಕ ಮೊಹಮ್ಮದ್ ನಲಪಾಡ್ ಅವರು ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಹಳ್ಳೇಗೌಡ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ಸದ್ಯ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಲ್ಲಿರುವ ರಕ್ಷಾ ರಾಮಯ್ಯ ಅಧಿಕಾರವು ಜನವರಿ 30 ರಂದು ಮುಕ್ತಾಯವಾಗಲಿದೆ. ನಂತರ ಅಧ್ಯಕ್ಷ ಸ್ಥಾನ ನಲಪಾಡ್ ಗೆಹಸ್ತಾಂತರವಾಗಬೇಕಿದೆ. ಹೀಗಾಗಿ ಬುಧವಾರ ಬೆಂಗಳೂರಿನ ಖಾಸಗಿ ಹೋಟೆಲ್ ನ್ಲಿ ನಲಪಾಡ್ ಡಿನ್ನರ್ ಆಯೋಜಿಸಿದ್ದರು. ಸಭೆಯಲ್ಲಿ ಎಲ್ಲಾ ಜಿಲ್ಲೆಯ ಮುಖಂಡರು ಭಾಗವಹಿಸಿದ್ದರು. ಈ ವೇಳೆ ಜಟಾಪಟಿ ನಡೆದಿದೆ.
ಇದನ್ನೂ ಓದಿ:ರಸ್ತೆ ಬದಿಯಲ್ಲಿ ನಿಲ್ಲಿಸಿದ ಜೆಸಿಬಿಯನ್ನೇ ಕದ್ದೊಯ್ದ ಖದೀಮರು : ಪೊಲೀಸರಿಂದ ಶೋಧಕಾರ್ಯ
ಬಳ್ಳಾರಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಅವರು ರಕ್ಷಾ ರಾಮಯ್ಯ ಬೆಂಬಲಿಗ ಎಂಬ ಕಾರಣಕ್ಕೆ ನಲಪಾಡ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ನಾನು ಯೂತ್ ಕಾಂಗ್ರೆಸ್ ಅಧ್ಯಕ್ಷನಾಗುತ್ತಿದ್ದೇನೆ. ನೀನು ಬೇರೆಯವರಿಗೆ ಸಪೋರ್ಟ್ ಮಾಡುತ್ತೀಯ ಎಂದು ಆಕ್ರೋಶ ವ್ಯಕ್ತಪಡಿಸಿ, ನಲಪಾಡ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ನಲಪಾಡ್ ನಿರಾಕರಣೆ: ನಾನು ಎಲ್ಲರನ್ನೂ ಸ್ವತಃ ಸಭೆಗೆ ಕರೆದಿದ್ದು, ಯಾವುದೇ ಇಂತಹ ಘಟನೆ ನಡೆದಿಲ್ಲ. ಸುಮ್ಮನೆ ಇಂತಹ ಆರೋಪ ಮಾಡುತ್ತಿದ್ದಾರೆ. ನನ್ನ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ತಪ್ಪಿಸಲು ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಮೊಹಮ್ಮದ್ ನಲಪಾಡ್ ಹೇಳಿದ್ದಾರೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Karnataka; ನಾಡಿನ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಸರ್ಕಾರ ಬದ್ದ: ಸಿದ್ದರಾಮಯ್ಯ

New Krishna Bhavan:ಗುಡ್ ಬೈ ಹೇಳಿದೆ.. ಮಲ್ಲೇಶ್ವರಂನ 70 ವರ್ಷ ಹಳೆಯ ನ್ಯೂ ಕೃಷ್ಣ ಭವನ್

Muddebihala: 3-4 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

Feticide:ಭ್ರೂಣ ಹತ್ಯೆ ಪ್ರಕರಣ-ಸ್ಕ್ಯಾನಿಂಗ್ ಕೇಂದ್ರ,ತಪಾಸಣೆ ಬಿಗಿ: ದಿನೇಶ್ ಗುಂಡೂರಾವ್

Politics: ಸಚಿವರ ಪಿಎಗಳಿಂದಲೂ ವಸೂಲಿ ದಂಧೆ- ಅಶೋಕ್
MUST WATCH
ಹೊಸ ಸೇರ್ಪಡೆ

Sandalwood; ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾದ ‘ದಿ ಜಡ್ಜ್ ಮೆಂಟ್’

Video: ಹೊಸ ಅನುಭವ: ಸೋರುತ್ತಿರುವ ವಿಮಾನದಲ್ಲೇ ಪ್ರಯಾಣಿಕರ ಪಯಣ…

Brahma Kamala: ಆರೋಗ್ಯ ಸಂಜೀವಿನಿ… ಬ್ರಹ್ಮಕಮಲದ ಆಧ್ಯಾತ್ಮಿಕ ಹಿನ್ನಲೆ ಏನು?

ʼHi Nannaʼ ಪ್ರೀ ರಿಲೀಸ್ ಇವೆಂಟ್‌ನಲ್ಲಿ ಕಾಣಿಸಿಕೊಂಡ ರಶ್ಮಿಕಾ-ದೇವರಕೊಂಡ ಮಾಲ್ಡೀವ್ಸ್ ಫೋಟೋ

Mysore; ಭ್ರೂಣ ಹತ್ಯೆಯ ವಿಚಾರವಾಗಿ ಸಿಎಂ ಗಂಭೀರ ಕ್ರಮಕ್ಕೆ ಮುಂದಾಗಿದ್ದಾರೆ: ಮಹದೇವಪ್ಪ