ಬೀದರ್ ಜಿಲ್ಲಾಸ್ಪತ್ರೆ: 7 ತಿಂಗಳಲ್ಲಿ 148 ಶಿಶುಗಳ ಸಾವು
Team Udayavani, Aug 24, 2017, 6:00 AM IST
ಬೀದರ್: ಇಡೀ ದೇಶವೇ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿನ ಶಿಶುಗಳ ಸರಣಿ ಸಾವಿಗೆ ಮರುಗು ತ್ತಿರುವಾಗಲೇ, ಬೀದರ್‌ನ ಜಿಲ್ಲಾಸ್ಪತ್ರೆ ಯೊಂದರಲ್ಲೇ ಈ ವರ್ಷಾರಂಭದಿಂದ ಜುಲೈ ಅಂತ್ಯದ ವರೆಗೆ 148 ಶಿಶುಗಳು ಜೀವ ಕಳೆದುಕೊಂಡಿವೆ.
ಇದು ಆಸ್ಪತ್ರೆಯ ಮೇಲುಸ್ತುವಾರಿ ಹೊಂದಿರುವ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್)ಯೇ ನೀಡಿರುವ ಅಂಕಿ ಅಂಶ. ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಜತೆಗೆ ಅಪೌಷ್ಟಿಕತೆ, ತೂಕ ದಲ್ಲಿ ವ್ಯತ್ಯಾಸ, ಅವಳಿ ಮಕ್ಕಳ ಜನನ ಮತ್ತು ಸೋಂಕು ಸಹಿತ ವಿವಿಧ ಕಾರಣಕ್ಕೆ ಶಿಶುಗಳು ಸಾವಿಗೀಡಾಗಿವೆ.
ಎಷ್ಟೆಷ್ಟು?: ಜನವರಿಯಿಂದ ಜೂನ್ ನಡುವಿನ ಏಳು ತಿಂಗಳ ಅವ ಧಿಯಲ್ಲಿ ಬೀದರ್ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಒಟ್ಟು 864 ಮಕ್ಕಳಲ್ಲಿ 148 ಶಿಶುಗಳು ಮೃತಪಟ್ಟಿವೆ. ಜನವರಿಯಲ್ಲಿ ದಾಖ ಲಾದ 136 ಶಿಶುಗಳಲ್ಲಿ 18, ಫೆಬ್ರವರಿ 118ರಲ್ಲಿ 19, ಮಾರ್ಚ್ 108ರಲ್ಲಿ 15, ಎಪ್ರಿಲ್ 137ರಲ್ಲಿ 19, ಮೇ 146ರಲ್ಲಿ 30, ಜೂನ್ 108ರಲ್ಲಿ 19 ಮತ್ತು ಜುಲೆೈ ತಿಂಗಳಲ್ಲಿ 111ರ ಪೆೈಕಿ 28 ಮಕ್ಕಳು ಮೃತಪಟ್ಟಿವೆ ಎಂದು ಬ್ರಿಮ್ಸ್ ಬೋಧಕ ಆಸ್ಪತ್ರೆ ಮಾಹಿತಿ ನೀಡಿದೆ.
ಜನಿಸಿದ ಮಗುವಿನ ತೂಕ 2 ಕೆ.ಜಿ. ಗಿಂತ ಅ ಧಿಕವಾಗಿರಬೇಕು. ತೂಕ ದಲ್ಲಿ ವ್ಯತ್ಯಾಸ ಮತ್ತು ಬೆಳವಣಿಗೆ ಸರಿಯಾಗಿ ಆಗದಿರುವುದು ಮಕ್ಕಳ ಸಾವಿಗೆ ಕಾರಣ. ಪೌಷ್ಟಿಕಾಂಶದ ಕೊರತೆ, ಎಳೆ ವಯಸ್ಸಿನಲ್ಲೇ ಗರ್ಭ ಧರಿಸುವುದು ತಾಯಂದಿರ ಜತೆಗೆ ಶಿಶುಗಳನ್ನೂ ಸಾವಿನ ಮನೆಗೆ ತಳ್ಳುತ್ತಿದೆ. ಇನ್ನು ಕೆಲವೊಮ್ಮೆ ವೈದ್ಯರ ನಿರ್ಲಕ್ಷ éದ ಆರೋಪಗಳು ಕೇಳಿ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ
Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ
IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ; ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ
MUST WATCH
ಹೊಸ ಸೇರ್ಪಡೆ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…
ಅರಂತೋಡು: ಬೈಕ್ – ಕಾರು ನಡುವೆ ಅಪಘಾತ… ಓರ್ವ ಮೃತ್ಯು
LS Polls: ಉಡುಪಿ, ದಕ್ಷಿಣ ಕನ್ನಡದಲ್ಲಿ ಶಾಂತಿಯುತ ಮತದಾನ… ಹಲವೆಡೆ ಕೈಕೊಟ್ಟ ಮತಯಂತ್ರ
Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ