ಶಾಸಕರ ರಾಜೀನಾಮೆ ಬ್ಲ್ಯಾಕ್ ಮೇಲ್ ತಂತ್ರ, ನಾನು ಸಂತೆಯಲ್ಲಿ ಕೂತಿಲ್ಲ: ಸ್ಪೀಕರ್

Team Udayavani, Jul 6, 2019, 12:19 PM IST

ಬೆಂಗಳೂರು: ಅಸಮಾಧಾನಿತ ಶಾಸಕರ ರಾಜೀನಾಮೆ ವದಂತಿ ಸುಳ್ಳು. ರಾಜೀನಾಮೆ ಕೇವಲ ಬ್ಲ್ಯಾಕ್ ಮೇಲ್ ತಂತ್ರ. ನಾನು ಸಂತೆಯಲ್ಲಿ ಕೂತಿಲ್ಲ, ವಿಧಾನಸೌಧದಲ್ಲೇ ಇದ್ದೇನೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.

ಅತೃಪ್ತ ಶಾಸಕರು ರಾಜೀನಾಮೆ ನೀಡುತ್ತಾರೆಂಬ ವದಂತಿ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, 13 ಶಾಸಕರ ರಾಜೀನಾಮೆ ಬರೇ ಪುಕಾರು. ನನ್ನನ್ನು ಭೇಟಿ ಮಾಡುವುದಕ್ಕೆ ಯಾರು ಸಮಯ ಕೇಳಿಲ್ಲ ಎಂದರು.

ಅವರು ಬರುತ್ತಾರೆಂದ ಕೂಡಲೇ ಕಾಯುತ್ತ ಕೂರಲು ಆಗಲ್ಲ. ಸ್ಪೀಕರನ್ನು ಭೇಟಿಯಾಗಲು ಒಂದು ಕ್ರಮವಿದೆ. ಅವರು 13 ಅಲ್ಲ 30 ಮಂದಿ ಬಂದರೂ ತೊಂದರೆ ಇಲ್ಲ. ನಾನು ವಿಧಾನಸೌಧದಲ್ಲೇ ಇದ್ದೇನೆ ಎಂದು ತಿರುಗೇಟು ನೀಡುತ್ತಾರೆ. ಇದೆಲ್ಲ ಸುಳ್ಳು ವದಂತಿ, ಯಾರನ್ನೂ ನಂಬಬೇಡಿ, ನನ್ನ ನಂಬಿ ಎಂದು ಈ ಸಂದರ್ಭದಲ್ಲಿ ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ