ರಾಮದಾಸ್ ವಿರುದ್ಧ ಎನ್‌ಎಸ್‌ಯುಐ ದೂರು
Team Udayavani, Mar 31, 2017, 7:31 AM IST
ಮೈಸೂರು: ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಗುಂಪು ಕಟ್ಟಿಕೊಂಡು ಪರೀಕ್ಷಾರ್ಥಿಗಳಿಗೆ ಉಚಿತವಾಗಿ ಪೆನ್ನು, ಗುಲಾಬಿ ವಿತರಿಸುವ ಮೂಲಕ ಮಾಜಿ ಸಚಿವ ಎಸ್.ಎ.ರಾಮದಾಸ್ ನಿಷೇಧಾಜ್ಞೆ ಉಲ್ಲಂ ಸಿದ್ದಾರೆ ಎಂದು ಆರೋಪಿಸಿ ಎನ್‌ಎಸ್‌ಯುಐ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಗುರುವಾರದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು, ರಾಮದಾಸ್ ಅವರು ಲಕ್ಷ್ಮೀಪುರಂನ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ ಪರೀಕ್ಷಾರ್ಥಿಗಳಿಗೆ ಪೆನ್ನು, ಗುಲಾಬಿ ನೀಡಿ ಶುಭ ಕೋರಿದರು. ಆದರೆ, ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ಪರೀಕ್ಷೆ
ನಡೆಯುತ್ತಿದ್ದ ಶಾಲೆಯ ಆವರಣದೊಳಗೆ ನಗರಪಾಲಿಕೆ ಸದಸ್ಯರು ಹಾಗೂ ಬಿಜೆಪಿ ಕಾರ್ಯಕರ್ತರೊಂದಿಗೆ ಅವರು
ಪ್ರವೇಶಿಸಿರುವುದು ನಿಷೇಧಾಜ್ಞೆ ಉಲ್ಲಂ ಸಿದಂತೆ. ಹೀಗಾಗಿ ರಾಮದಾಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು
ಎನ್‌ಎಸ್‌ಯುಐ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಗೇಶ್ ಕರಿಯಪ್ಪ ಲಕ್ಷ್ಮೀಪುರಂ ಠಾಣೆಗೆ ದೂರು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಭಟ್ಕಳ : ರಾಷ್ಟ್ರೀಯ ಹೆದ್ದಾರಿಯಲ್ಲೇ ಪಲ್ಟಿಯಾದ ಲಾರಿ, ಚಾಲಕ ಗಂಭೀರ, ಸಂಚಾರ ವ್ಯತ್ಯಯ
ಈಡೇರದ ಬೇಡಿಕೆ : 67ನೇ ದಿನಕ್ಕೆ ಕಾಲಿಟ್ಟ ಮೊಗೇರ ಸಮುದಾಯದ ಧರಣಿ ಸತ್ಯಾಗ್ರಹ
ಸಾಗರ : ರಸ್ತೆ ಪಕ್ಕದ ಚರಂಡಿಗೆ ಬಿದ್ದು ಗಾಯಗೊಂಡಿದ್ದ ಬೈಕ್ ಸವಾರ ಸಾವು
ಗುದನಾಳದಲ್ಲಿಟ್ಟು ಚಿನ್ನ ಕಳ್ಳಸಾಗಾಣಿಕೆ : ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
ಆರ್ ಎಸ್ಎಸ್ ವಿರುದ್ಧ ಸಿದ್ದರಾಮಯ್ಯ ಸರಣಿ ಟ್ವೀಟ್: ಸವಾಲಿನ ಪ್ರಶ್ನೆಗಳ ಸುರಿಮಳೆ