ಹಾವೇರಿ: ಇಂದು 110 ಜನರಿಗೆ ಕೋವಿಡ್ ದೃಢ: ಒಟ್ಟು ಸೋಂಕಿತರ ಸಂಖ್ಯೆ 2,635ಕ್ಕೆ ಏರಿಕೆ
Team Udayavani, Aug 18, 2020, 7:45 PM IST
ಹಾವೇರಿ: ಜಿಲ್ಲೆಯಲ್ಲಿ ಇಂದು ಶೂಶ್ರೂಷಕಿ, ಆಶಾ ಕಾರ್ಯಕರ್ತೆ, ಗ್ರಾಮಲೆಕ್ಕಾಧಿಕಾರಿ, ಪೊಲೀಸ್, ಶಿಕ್ಷಣ ಇಲಾಖೆ ಸಿಬ್ಬಂದಿ ಸೇರಿದಂತೆ ಒಂದೇ ದಿನ 110 ಜನರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,635 ಕ್ಕೆ ಏರಿಕೆಯಾಗಿದೆ.
ಇಂದು ಮೂವರು ಕೋವಿಡ್-19 ಸೊಂಕಿಗೆ ಬಲಿಯಾಗಿದ್ದು , ಹೀಗಾಗಿ ಜಿಲ್ಲೆಯಲ್ಲಿ ಸೋಂಕಿಗೆ ಒಟ್ಟು 59 ಜನರು ಬಲಿಯಾದಂತಾಗಿದೆ.
55 ಜನ ಇಂದು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.ಜಿಲ್ಲೆಯಲ್ಲಿ ಕೋವಿಡ್ 19 ಪ್ರಕರಣದಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 1,715 ಆಗಿದೆ. ಇನ್ನೂ ಒಟ್ಟು 861 ಸಕ್ರಿಯ ಕೋವಿಡ್ 19 ಪ್ರಕರಣಗಳು ಜಿಲ್ಲೆಯಲ್ಲಿವೆ.