Udayavni Special

ಗುಜರಾತ್‌ ಚುನಾವಣೆ ಪ್ರಚಾರಕ್ಕೆ ಡಿಕೆಶಿ ನಿರಾಕರಣೆ


Team Udayavani, Nov 29, 2017, 7:48 AM IST

29-1.jpg

ಬೆಂಗಳೂರು: ದೇಶದ ಗಮನ ಸೆಳೆದಿರುವ ಗುಜರಾತ್‌ ಚುನಾವಣೆ ಪ್ರಚಾರಕ್ಕೆ ರಾಜ್ಯದ ನಾಯಕರಿಗೆ ಆಹ್ವಾನ ಇದ್ದರೂ ಹಿಂದೇಟು ಹಾಕುತ್ತಿದ್ದಾರೆ. ಪ್ರಮುಖವಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಪ್ರಚಾರಕ್ಕೆ ಆಗಮಿಸುವಂತೆ ಸೋನಿಯಾ ಗಾಂಧಿ ರಾಜಕೀಯ ಕಾರ್ಯದರ್ಶಿ ಅಹಮದ್‌ ಪಟೇಲ್‌ ಆಹ್ವಾನ ನೀಡಿದ್ದರೂ, ಡಿ.ಕೆ. ಶಿವಕುಮಾರ್‌ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಹಮದ್‌ ಪಟೇಲ್‌ ಗುಜರಾತ್‌ನಿಂದ ರಾಜ್ಯಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಗುಜರಾತ್‌ ಶಾಸಕರಿಗೆ ರಾಜ್ಯದಲ್ಲಿ ಆಶ್ರಯ ನೀಡಿದ್ದಕ್ಕೆ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಕೆಂಗಣ್ಣಿಗೆ ಗುರಿಯಾಗಿದ್ದು, ಅದೇ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಡಿ.ಕೆ. ಶಿವಕುಮಾರ್‌ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು. ರಾಜಕೀಯವಾಗಿ ಡಿ.ಕೆ. ಶಿವಕುಮಾರ್‌ರನ್ನು ಹತ್ತಿಕ್ಕಲು ಬಿಜೆಪಿ ಐಟಿ ಅಸ್ತ್ರ ಬಳಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈಗ ದೇಶದ ಗಮನ ಸೆಳೆದಿರುವ ಗುಜರಾತ್‌ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಅಲ್ಲಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ವಿರುದ್ಧ ಪ್ರಚಾರಕ್ಕೆ ತೆರಳಿದರೆ, ಈಗಾಗಲೇ ಸಂಕಷ್ಟಕ್ಕೆ ಸಿಲುಕಿದ್ದು, ಪ್ರಕರಣ ಮತ್ತಷ್ಟು ಬಿಗಿಗೊಳ್ಳುವ ಆತಂಕ ಇರುವುದರಿಂದ ಡಿ.ಕೆ. ಶಿವಕುಮಾರ್‌ ಗುಜರಾತ್‌ ಚುನಾವಣೆ ಪ್ರಚಾರದಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ.

ಗೌಡರ ಕುಟುಂಬ ಗೌರವಿಸುತ್ತೇನೆ: ಶಿವಕುಮಾರ್‌
“ಮಾಜಿ ಪ್ರಧಾನಿ ದೇವೇಗೌಡರ ಕುಟುಂಬವನ್ನು ನಾನು ಗೌರವಿಸುತ್ತೇನೆ. ನಮ್ಮ ರಾಜಕೀಯ ಸಿದ್ಧಾಂತ ಬೇರೆ, ಆದರೆ, ಕುಮಾರಸ್ವಾಮಿ ಎದುರಿಗೆ ಬಂದಾಗ ಚೆನ್ನಾಗಿಯೇ ಮಾತನಾಡುತ್ತೇನೆ’ ಎಂದು ಡಿ.ಕೆ. ಶಿವಕುಮಾರ್‌ ಹೇಳಿದ್ದಾರೆ. “ಅನಿತಾ ಕುಮಾರಸ್ವಾಮಿ ನನ್ನನ್ನು ಅಣ್ಣ ಎಂದು ತಿಳಿದುಕೊಂಡಿದ್ದಾರೆ. ನಮ್ಮ ರಾಜಕೀಯ ಸಿದ್ಧಾಂತ ಬೇರೆ ಆದರೂ ಮಹಿಳೆಗೆ ಗೌರವ ಕೊಡಬೇಕು, ನಾನು ಗೌರವ ಕೊಡುತ್ತೇನೆ’ ಎಂದು ಹೇಳಿದ್ದಾರೆ. ಇದೇ ವೇಳೆ, ಚನ್ನಪಟ್ಟಣ ಶಾಸಕ ಸಿ.ಪಿ. ಯೋಗೇಶ್ವರ್‌ ಅವರ ವಿರುದ್ಧ ವಾಗ್ಧಾಳಿ ನಡೆಸಿದ ಅವರು, “ಯೋಗೇಶ್ವರ್‌ಗೆ ಮಾನ, ಮರ್ಯಾದೆ ಇದ್ದರೆ, ಅವರ ತಮ್ಮನಿಂದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಿ’ ಎಂದು ಕಿಡಿ ಕಾರಿದ್ದಾರೆ.

ಇನ್ನು ಸಚಿವ ವಿನಯ್‌ ಕುಲಕರ್ಣಿ ವಿರುದ್ಧ ಬಿಜೆಪಿ ರಾಜಕೀಯಕ್ಕಾಗಿ ಹೋರಾಟ ಮಾಡುತ್ತಿದೆ. ಆತ ಕೃಷಿ ಮಾಡಿಕೊಂಡು ಉನ್ನತ ಹುದ್ದೆಗೇರಿದ್ದಾನೆ. ಅಲ್ಲದೇ ಅವರ ಸಮಾಜ ಕೂಡ ಆತನಿಗೆ ಉನ್ನತ ಹುದ್ದೆ ನೀಡಿದೆ. ಅವನು ಅದನ್ನು ಉತ್ತಮವಾಗಿ ನಿಭಾಯಿಸುತ್ತಿದ್ದಾನೆ. ಹೀಗಾಗಿ ಬಿಜೆಪಿಯವರು ಅವನ ನುಗ್ಗುವಿಕೆಗೆ ಭಯ ಬಿದ್ದಿದ್ದಾರೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಇದೇ ವೇಳೆ, ಮಾಜಿ ಸಂಸದೆ ರಮ್ಯಾ ಮುಂದಿನ ಚುನಾವಣೆಯಲ್ಲಿ ಶಾಸಕಿ ಅಥವಾ ಸಂಸದೆಯಾಗಿ ಆಯ್ಕೆಯಾಗುತ್ತಾರೆ. ಚುನಾವಣಾ ಪ್ರಚಾರ ಸಮಿತಿಯಲ್ಲಿ ಸ್ಟಾರ್‌ ಪ್ರಚಾರಕಿಯಾಗಿದ್ದಾರೆ. ಪಕ್ಷ ಅವರಿಗೆ ಉನ್ನತ ಹುದ್ದೆ ನೀಡಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದ ಡಿ.ಕೆ. ಸುರೇಶ್‌, ಪಕ್ಷ ಚನ್ನಪಟ್ಟಣ ಅಥವಾ ರಾಮನಗರದಿಂದ ಸ್ಪರ್ಧಿಸುವಂತೆ ಸೂಚಿಸಿದರೆ, ಸ್ಪರ್ಧೆ ಮಾಡುತ್ತೇನೆ. ಜನತೆ ಈಗಾಗಲೇ ಸಂಸದನಾಗಿ ಆಯ್ಕೆ ಮಾಡಿದ್ದಾರೆ. ಪಕ್ಷದ ಹೈ ಕಮಾಂಡ್‌  ನೀಡುವ ಸೂಚನೆಯನ್ನು ಪಾಲಿಸುತ್ತೇನೆ ಎಂದು ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ

ಕೋವಿಡ್ 19 ವಿರುದ್ಧ ಹೋರಾಟ; ಏ.30ರವರೆಗೆ ಲಾಕ್ ಡೌನ್ ಮುಂದುವರಿಕೆ: ಒಡಿಶಾ ಸಿಎಂ ಘೋಷಣೆ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

ನೀರು ತರಲು ಹೋಗಿ ಕಾಲು ಜಾರಿ ಕೆರೆಗೆ ಬಿದ್ದು ಮೂರು ಮಕ್ಕಳ ದುರ್ಮರಣ

Leopard-climbs-tree

ವಿಡಿಯೋ: ಬೇಟೆಯೊಂದಿಗೆ ಅನಾಯಾಸವಾಗಿ ದೈತ್ಯಗಾತ್ರದ ಮರ ಏರಿದ ಚಿರತೆ, ನೆಟ್ಟಿಗರು ಫುಲ್ ಫಿದಾ

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್: ಮಂಗನ ಕಾಯಿಲೆ ತಡೆಗೆ ಮಲೆನಾಡಿನಲ್ಲಿ ಕ್ರಮ

ಚೀನಾದಿಂದ ಹರಡಿದ Covidಗೆ ಜಾಗತಿಕವಾಗಿ ಎಷ್ಟು ಲಕ್ಷ ಕೋಟಿ ನಷ್ಟ,ನಿರುದ್ಯೋಗ ಭೀತಿ; ಮುಂದೇನು

ಚೀನಾದಿಂದ ಹರಡಿದ Covidಗೆ ಜಾಗತಿಕವಾಗಿ ಎಷ್ಟು ಲಕ್ಷ ಕೋಟಿ ನಷ್ಟ,ನಿರುದ್ಯೋಗ ಭೀತಿ; ಮುಂದೇನು?

ಬೀದಿ ನಾಯಿಗೆ ತುತ್ತು ಹಾಕಿದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್‌

ಬೀದಿ ನಾಯಿಗೆ ತುತ್ತು ಹಾಕಿದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

state-news-tdy-1

ಮಾಡದ ತಪ್ಪಿಗೆ ಕೂಲಿ ಕಾರ್ಮಿಕರು ಬಂಧಿ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಮೂವರು ಮಕ್ಕಳಿಗೆ ಕೋವಿಡ್-19 ಸೋಂಕು; ರಾಜ್ಯದಲ್ಲಿ 191ಕ್ಕೇರಿದ ಸೋಂಕಿತರ ಸಂಖ್ಯೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಲಾಕ್‌ಡೌನ್‌ ಬಿಗಿಗೊಳಿಸಲು ಸಿಎಂ ಸೂಚನೆ

ಇಂದು ಸಚಿವ ಸಂಪುಟ ಸಭೆ

ಇಂದು ಸಚಿವ ಸಂಪುಟ ಸಭೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

ಆನ್‌ಲೈನ್‌ ತರಗತಿಗೂ ಎದುರಾಗುತ್ತಿದೆ ತಾಂತ್ರಿಕ ಸಮಸ್ಯೆ

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

09-April-16

“ಹಂತ-ಹಂತ ಲಾಕ್‌ಡೌನ್‌ ಹಿಂಪಡೆಯಲಿ’

state-news-tdy-1

ಮಾಡದ ತಪ್ಪಿಗೆ ಕೂಲಿ ಕಾರ್ಮಿಕರು ಬಂಧಿ

09-April-15

ಜಿಲ್ಲೆಯಲ್ಲಿ ಶೇ. 50 ಪಡಿತರ ವಿತರಣೆ

ಗ್ರಾಮೀಣ ತರಕಾರಿಗಳಿಗೆ ಉತ್ತಮ ಬೇಡಿಕೆ

ಗ್ರಾಮೀಣ ತರಕಾರಿಗಳಿಗೆ ಉತ್ತಮ ಬೇಡಿಕೆ

09-April-14

ಕೊನೆ ಭಾಗದ ಜಮೀನಿಗೆ ನೀರು ಹರಿಸಿ