ಕಾರವಾರದಿಂದ ಗೋವಾಕ್ಕೆ ಹೋಗಿ ಮೀನು ಮಾರಾಟ : ಸೋಷಿಯಲ್ ಮೀಡಿಯಾದಲ್ಲಿಆಕ್ರೋಶ
Team Udayavani, Jun 28, 2021, 4:34 PM IST
ಪಣಜಿ: ಕರ್ನಾಟಕದಿಂದ ಗೋವಾಕ್ಕೆ ಆಗಮಿಸಲು ಕೋವಿಡ್ ನೆಗೆಟಿವ್ ವರದಿ ಹೊಂದಿರುವುದು ಖಡ್ಡಾಯವಾಗಿದೆ. ಆದರೆ ಕಾರವಾರದಿಂದ ಗೋವಾಕ್ಕೆ ಮೀನು ಮಾರಾಟಕ್ಕೆ ಬರುವವರು ಗೋವಾ ಚೆಕ್ ಪೋಸ್ಟ ಹಿಂಭಾಗದಿಂದ ಗೋವಾ ಗಡಿ ಪ್ರವೇಶಿಸುವ ವೀಡಿಯೊ ರಾಜ್ಯದ ಸೋಶೀಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಈ ಕುರಿತು ರಾಜ್ಯಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಪ್ರತಿದಿನ ಕಾರವಾರದಿಂದ ಗೋವಾಕ್ಕೆ ಮೀನು ಮಾರಾಟಕ್ಕೆ ಆಗಮಿಸುವವರು ಗೋವಾ ಚೆಕ್ಪೋಸ್ಟನಲ್ಲಿ ಅಡ್ಡದಾರಿಯಿಂದ ಗೋವಾ ಗಡಿ ಪ್ರವೇಶಿಸಿ ಗೋವಾದ ಕದಂಬ ಬಸ್ ಏರಿ ಕಾಣಕೋಣದ ವಿವಿಧ ಭಾಗದಲ್ಲಿ ಮೀನು ಮಾರಾಟ ಮಾಡಿ ನಂತರ ಅದೇ ರೀತಿ ಕಾರವಾರಕ್ಕೆ ವಾಪಸ್ಸಾಗುತ್ತಾರೆ.
ಈ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಇದರಿಂದಾಗಿ ಗೋವಾದಲ್ಲಿ ಡೆಲ್ಟಾ ಪ್ಲಸ್ ಕೋವಿಡ್ ರೂಪಾಂತರಿ ಹರಡುವ ಭೀತಿಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದೇ ರೀತಿ ಕಳ್ಳ ದಾರಿಯಲ್ಲಿ ಅದೆಷ್ಟೋ ಜನರು ಗೋವಾಕ್ಕೆ ಆಗಮಿಸುತ್ತಿದ್ದಾರೆ ಎಂಬ ಆತಂಕವೂ ಹಲವರಿಂದ ವ್ಯಕ್ತವಾಗುತ್ತಿದೆ.