ಉಪ್ಪಿನಂಗಡಿ:ಟ್ಯಾಂಕರ್‌ ಪಲ್ಟಿ- ಗ್ಯಾಸ್‌ ಲೀಕ್‌,ರಾ.ಹೆ.ಸಂಚಾರ ಸ್ಥಗಿತ

Team Udayavani, Dec 2, 2018, 10:46 AM IST

ಮಂಗಳೂರು: ರಾಷ್ಟ್ರೀಯ ಹೆದ್ದಾರಿ ಮಂಗಳೂರು-ಬೆಂಗಳೂರು ರಸ್ತೆಯ ಉಪ್ಪಿನಂಗಡಿ- ನೆಲ್ಯಾಡಿ ನಡುವಿನ ಬೆದ್ರೋಡಿ ಬಳಿಯಿರುವ  ತೂಗುಸೇತುವೆಯ ತಿರುವಿನಲ್ಲಿ ಭಾನುವಾರ ಬೆಳಗ್ಗೆ  ಗ್ಯಾಸ್ ಟ್ಯಾಂಕರ್ವೊಂದು ಚಾಲಕನ ನಿಯಂತ್ರಣ ತಪ್ಪಿ  ಪಲ್ಟಿಯಾಗಿದ್ದು, ಗ್ಯಾಸ್ ಸೋರಿಕೆಯಾಗುತ್ತಿದೆ. 

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬಂದಿಗಳು ಮತ್ತು ಪೊಲೀಸರು ಆಗಮಿಸಿದ್ದು,
ಮುಂಜಾಗ್ರತಾ ಕ್ರಮವಾಗಿ  ಬೆದ್ರೋಡಿ ಆಸುಪಾಸಿನ ,ತೂಗುಸೇತುವೆಯ ಆಸುಪಾಸಿನ, ಮೊಗೆರಡ್ಕ ನದಿ ಕಿನಾರೆಯವರೆಗಿನ  ಮನೆಯವರು ಯಾವುದೇ ಬೆಂಕಿ ಉತ್ಪತ್ತಿಯಾಗುವ ವಸ್ತುವನ್ನು ಬಳಸದಂತೆ ಎಚ್ಚರಿಕೆ ನೀಡಿದ್ದಾರೆ.

ಹೆದ್ದಾರಿಯಲ್ಲಿ ಸಂಚಾರಕ್ಕೆ ತಡೆ ಒಡ್ಡಲಾಗಿದ್ದು, ಬೆಂಗಳೂರಿನಿಂದ ಬರುವ ವಾಹನ ಸವಾರರಿಗೆ ಸುಬ್ರಹ್ಮಣ್ಯ -ಕಡಬ ಮೂಲಕ ತೆರಳಬೇಕಾಗಿದೆ. ಉಪ್ಪಿನಂಗಡಿಯಿಂದ ತೆರಳುವವರು ಅಲಂಗಾರು ಮೂಲಕ ತೆರಳಬೇಕಾಗಿದೆ.

ಗ್ಯಾಸ್‌ ಸೋರಿಕೆ ತಡೆಯಲು ಮಂಗಳೂರಿನಿಂದ ತಜ್ಞರು ತೆರಳಿದ್ದು ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ