English ಬೋರ್ಡ್‌ಗಳ ವಿರುದ್ಧ ಸಮರಕ್ಕಿಳಿದ ಕರವೇ; ಕಲ್ಲು ತೂರಾಟ

ಇಂಗ್ಲಿಷ್ ನಾಮಫಲಕಗಳು ಧ್ವಂಸ , ಬೀದಿಗಿಳಿದ ಮಹಿಳಾ ಕಾರ್ಯಕರ್ತೆಯರು

Team Udayavani, Dec 27, 2023, 5:11 PM IST

1-csasad

ಬೆಂಗಳೂರು: ಅಂಗಡಿ ಮುಂಗಟ್ಟುಗಳು, ವಾಣಿಜ್ಯ ಸಂಸ್ಥೆಗಳು ಹಾಗೂ ಖಾಸಗಿ ಕಂಪೆನಿಗಳ ನಾಮಫ‌ಲಕಗಳಲ್ಲಿ ಶೇ. 60ರ ಗಾತ್ರದಲ್ಲಿ ಕನ್ನಡ ಅಕ್ಷರಗಳಿರಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣ ವೇದಿಕೆ (ಕರವೇ)ಯು ಬುಧವಾರ ಬೆಂಗಳೂರಿನಲ್ಲಿ ಭಾರೀ ಹೋರಾಟ ನಡೆಸಿದೆ. ಅಧ್ಯಕ್ಷ ನಾರಾಯಣ ಗೌಡ ನೇತೃತ್ವದಲ್ಲಿ ಸಾವಿರಾರು ಕನ್ನಡ ಕಾರ್ಯಕರ್ತರು ಪರಭಾಷೆಗಳ ನಾಮಫ‌ಲಕ ಹರಿದು, ಕಲ್ಲುತೂರಾಟ ನಡೆಸಿ ಬಿಸಿ ಮುಟ್ಟಿಸಿದ್ದಾರೆ. ಈ ಹೋರಾಟ ನಡೆಸುವುದಾಗಿ ಮಂಗಳವಾರವೇ ಕರವೇ ಎಚ್ಚರಿಕೆ ನೀಡಿತ್ತು ಎನ್ನುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
ಬೆಳ್ಳಂಬೆಳಗ್ಗೆ ರಾಜ್ಯದ ಮೂಲೆಮೂಲೆಗಳಿಂದ ರಾಜಧಾನಿಗೆ ಆಗಮಿಸಿದ್ದ ಸಾವಿರಾರು ಕರವೇ ಕಾರ್ಯಕರ್ತರು ಪ್ರಮುಖ ವಾಣಿಜ್ಯ ಮಳಿಗೆಗಳ ಮೇಲೆ ದಾಳಿ ನಡೆಸಿ ಇಂಗ್ಲಿಷ್‌, ಹಿಂದಿ ಭಾಷೆಯಲ್ಲಿದ್ದ ನಾಮಫ‌ಲಕ ಧ್ವಂಸಗೊಳಿಸಿ ಆಕ್ರೋಶ ಹೊರಹಾಕಿದರು.

ಸಾದಹಳ್ಳಿ ಟೋಲ್‌ ಗೇಟ್‌, ಮೈಸೂರು ರಸ್ತೆ, ತುಮಕೂರು ರಸ್ತೆ, ಲ್ಯಾವೆಲ್ಲೆ ರಸ್ತೆ, ಎಂಜಿ ರಸ್ತೆ, ಕಬ್ಬನ್‌ಪಾರ್ಕ್‌ ಸಹಿತ ನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ತಡೆಗೆ ಮುಂದಾದ ನೂರಾರು ಕರವೇ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಎಲ್ಲೆಲ್ಲಿ ಬೋರ್ಡ್‌ ಧ್ವಂಸ ?

ದೇವನಹಳ್ಳಿಯ ಸಾದಹಳ್ಳಿ ಟೋಲ್‌ ಗೇಟ್‌ ಬಳಿಯ ಖಾಸಗಿ ಹೊಟೇಲ್‌ನ ಇಂಗ್ಲಿಷ್‌ ನಾಮಫ‌ಲಕ ಧ್ವಂಸಗೊಳಿಸಲಾಗಿದೆ. ಮೈಸೂರು ರಸ್ತೆ ಡೆಕಥ್ಲಾನ್‌ ಮುಂದಿನ ಬೋರ್ಡ್‌ ಕಿತ್ತೆಸೆದು ಅಲ್ಲಿನ ಸಿಬಂದಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಚಿಕ್ಕಜಾಲ ಲೈಫ್ ಕೇರ್‌ ಆಸ್ಪತ್ರೆ ಬೋರ್ಡ್‌ ಹಾನಿಗೊಳಿಸಿ¨ªಾರೆ. ಲ್ಯಾವೆಲ್ಲೆ ರಸ್ತೆಯಲ್ಲಿರುವ ಅಂಗಡಿಗಳ ಇಂಗ್ಲಿಷ್‌ ಬೋರ್ಡ್‌ಗಳನ್ನು ತುಂಡರಿಸಿ ಒಡೆದು ಹಾಕಲಾಗಿದೆ.

ಎಂಜಿ ರಸ್ತೆ, ಬ್ರಿಗೇಡ್‌ ರಸ್ತೆ, ಏರ್‌ಪೋರ್ಟ್‌ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಮಳಿಗೆಗಳ ಮುಂದೆ ಕನ್ನಡ ನಾಮಫ‌ಲಕ ಹಾಕುವಂತೆ ಎಚ್ಚರಿಕೆ ಕೊಟ್ಟಿದ್ದಾರೆ. ರಾಜಾಜಿನಗರ, ಅತ್ತಿಗುಪ್ಪೆ, ಕೆ.ಆರ್‌. ಪುರದಲ್ಲಿ ಆಂಗ್ಲ ನಾಮಫ‌ಲಕ ಹರಿದಿದ್ದಾರೆ.

ಮಾಲ್‌ ಆಫ್ ಏಷ್ಯಾವೇ ಮುಖ್ಯ ಗುರಿ
ಯಲಹಂಕದ ಬ್ಯಾಟ ರಾಯನ ಪುರದಲ್ಲಿರುವ ಮಾಲ್‌ ಆಫ್ ಏಷ್ಯಾವನ್ನು ಕಾರ್ಯಕರ್ತರು ಗುರಿ ಯನ್ನಾಗಿಸಿಕೊಂಡಿದ್ದರು. ಇದನ್ನು ಮೊದಲೇ ಅರಿತಿದ್ದ ಪೊಲೀಸರು ಮಾಲ್‌ನ ಮುಖ್ಯ ಗೇಟ್‌ ಬಳಿ ಬ್ಯಾರಿಕೇಡ್‌ ಅಳವಡಿಸಿದ್ದರು. ಮಾಲ್‌ಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಮಾಲ್‌ ಆಫ್ ಏಷ್ಯಾಗೆ ನುಗ್ಗಲು ಯತ್ನಿಸಿದವರನ್ನು ಪೊಲೀಸರು ವಶಕ್ಕೆ ಪಡೆದರು. ಮಾಲ್‌ನ ಹಿಂಬದಿ ಗೇಟ್‌ನಿಂದ ಮಾಲ್‌ ಒಳ ನುಗ್ಗಲು ಕಾರ್ಯಕರ್ತರು ಯತ್ನಿಸಿ ದಾಗ ಬಿಗುವಿನ ವಾತಾವರಣ ಉಂಟಾಯಿತು. ಅಂತಿಮವಾಗಿ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು, ಯಲಹಂಕದ ಪೊಲೀಸ್‌ ಡ್ರೈವಿಂಗ್‌ ಶಾಲೆ ಆವರಣದಲ್ಲಿ ಕೂಡಿ ಹಾಕಿದರು.

ನಾರಾಯಣ ಗೌಡ ಬಂಧನದ ವೇಳೆ ಲಾಠಿ ಚಾರ್ಜ್‌
ಕರವೇ ಕಾರ್ಯಕರ್ತರು ವಿಮಾನ ನಿಲ್ದಾಣ ರಸ್ತೆಯ ಸಾದಹಳ್ಳಿ ಟೋಲ್‌ ಗೇಟ್‌ನಿಂದ ಬೆಂಗಳೂರಿನ ಕಬ್ಬನ್‌ ಪಾರ್ಕ್‌ವರೆಗೆ ಪ್ರತಿಭಟನ ಮೆರವಣಿಗೆ ನಡೆಸಲು ಮುಂದಾಗಿದ್ದರು. ಜಾಗೃತ ರಾದ ಪೊಲೀಸರು ಕಾರ್ಯ ಕರ್ತರನ್ನು ವಶಕ್ಕೆ ಪಡೆದರು. ನಗರದ ಹುಣಸಮಾರನಹಳ್ಳಿ ಬಳಿ ನಾರಾಯಣಗೌಡರನ್ನು ಪೊಲೀ ಸರು ವಶಕ್ಕೆ ಪಡೆದರು. ಆ ವೇಳೆ ಪೊಲೀಸರು ಹಾಗೂ ಕರವೇ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಕಾರ್ಯಕರ್ತರು ಜಗ್ಗದಿದ್ದಾಗ ಪೊಲೀಸರು ಲಾಠಿ ಚಾರ್ಜ್‌ ಮಾಡಿದರು.

ಕಾರ್ಯಕರ್ತರ ವಿರುದ್ಧ ಕೇಸ್‌
ಅನುಮತಿ ಪಡೆಯದೆ ಪ್ರತಿಭಟನೆ ಹಾಗೂ ದುಂಡಾವರ್ತನೆ ತೋರಿದ ಕರವೇ ಕಾರ್ಯಕರ್ತರ ವಿರುದ್ಧ ಕಬ್ಬನ್‌ ಪಾರ್ಕ್‌, ಬಾಣಸವಾಡಿ, ಯಲಹಂಕ, ಚಿಕ್ಕಜಾಲ ಸಹಿತ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದೆ. ಪ್ರತಿಭಟನೆ ವೇಳೆ ಮುನ್ನೆಚ್ಚರಿಕೆ ಕ್ರಮವಾಗಿ 500 ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಹಿರಿಯ ಪೊಲೀಸರು ತಿಳಿಸಿದ್ದಾರೆ.

ಕಾನೂನು ಏನು ಹೇಳುತ್ತದೆ?
2002ರಲ್ಲೇ ಎಲ್ಲ ಮಹಾನಗರ ಪಾಲಿಕೆಗಳಲ್ಲಿ ಕನ್ನಡ ಬಳಕೆಗಾಗಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿತ್ತು. ಅದರಂತೆ ಅಂಗಡಿ ಮುಂಗಟ್ಟುಗಳಿಗೆ ಪರವಾನಿಗೆ ನೀಡುವಾಗ ನಾಮಫ‌ಲಕಗಳಲ್ಲಿ ಕನ್ನಡ ಅಗ್ರಸ್ಥಾನದಲ್ಲಿ ಬಳಸುವುದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ಇದನ್ನು ಪಾಲಿಸದಿದ್ದರೆ ಪರವಾನಿಗೆ ರದ್ದುಮಾಡಲಾಗುತ್ತದೆ ಎಂದು ಆದೇಶಿಸಲಾಗಿದೆ.
2022ರಲ್ಲಿ ಜಾರಿಗೆ ಬಂದ “ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ- 2022’ರಲ್ಲಿಯೂ ಈ ಬಗ್ಗೆ ಉಲ್ಲೇಖೀಸಲಾಗಿದೆ. ಅದರಂತೆ ಯಾವುದೇ ಕೈಗಾರಿಕೆ, ಅಂಗಡಿ, ಫ‌ರ್ಮ್ ಮತ್ತು ವಾಣಿಜ್ಯ ಸಂಸ್ಥೆಯ ಮಾಲಕ ಅಥವಾ ಅದರ ಉಸ್ತುವಾರಿ ವ್ಯಕ್ತಿಗಳು ಈ ಅಧಿನಿಯಮದ ಪ್ರಕರಣ 17ರ (6)ರಿಂದ (10)ರವರೆಗಿನ ಉಪಪ್ರಕರಣಗಳ ಉಪಬಂಧನಗಳನ್ನು ಪಾಲಿಸಲು ವಿಫ‌ಲವಾದರೆ ಮೊದಲ ಅಪರಾಧಕ್ಕೆ 5 ಸಾವಿರ ರೂ., 2ನೇ ಅಪರಾಧಕ್ಕೆ 10 ಸಾವಿರ ರೂ., ಅನಂತರದ ಪ್ರತಿ ಯೊಂದು ಅಪರಾಧಕ್ಕೆ ತಲಾ 20 ಸಾವಿರ ರೂ.ವರೆಗೆ ದಂಡ ವಿಧಿಸ ಲಾಗುತ್ತದೆ. ಪರವಾನಿಗೆ ರದ್ದುಗೊಳಿ ಸಬೇಕು ಎಂದು ಹೇಳಲಾಗಿದೆ.

1960ರ ಶಾಪ್ಸ್‌ ಆಂಡ್‌ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆಯಲ್ಲಿಯೂ ಕನ್ನಡಕ್ಕೆ ಪ್ರಾಮುಖ್ಯ ನೀಡಬೇಕು ಎಂಬ ಅಂಶ ಇತ್ತು ಎನ್ನಲಾಗಿದೆ.

ವ್ಯಾಪಾರ ಉದ್ದಿಮೆಗಳು, ಶಿಕ್ಷಣ ಸಂಸ್ಥೆಗಳ ನಾಮಫ‌ಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯವಿರ ಬೇಕು. ಇದನ್ನು ಪಾಲಿಸದ ಸಂಸ್ಥೆಗಳ ಪರವಾ ನಿಗೆ ರದ್ದುಗೊಳಿಸುವಂಥ ಕಾನೂನು ಜಾರಿಗೆ ಸರಕಾರ ಮುಂದಾಗಿದೆ.

ಗೌಡರ ಬಣ ಮತ್ತೆ ಮುನ್ನೆಲೆಗೆ
ಬುಧವಾರ ನಾಮಫ‌ಲಕಗಳಲ್ಲಿ ಕನ್ನಡಕ್ಕೆ ಶೇ. 60 ಜಾಗ ನೀಡಬೇಕೆಂದು ಕರವೇ ಸಮರ ನಡೆಸಿದೆ. ಇದು ಜಾರಿ ಯಾಗದಿದ್ದರೆ ಮತ್ತೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದೆ. ರಾಜ್ಯದಲ್ಲಿ ಕನ್ನಡ ಭಾಷೆ, ನೆಲ, ಜಲದ ವಿಚಾರಕ್ಕೆ ಬಂದಾಗ ಬೃಹತ್‌ ಹೋರಾಟ ನಡೆಸುವಲ್ಲಿ ಮುಂಚೂ ಣಿಯಲ್ಲಿದ್ದ ನಾರಾಯಣ ಗೌಡ ಬಣದ ಕರವೇ ಕಾರ್ಯಕರ್ತರು ಕೆಲವು ವರ್ಷಗಳಿಂದ ಮೌನಕ್ಕೆ ಶರಣಾಗಿದ್ದರು. ಈಗ ಮತ್ತೆ ನಾರಾ ಯಣ ಗೌಡರ ಬಣ ಹೋರಾಟದ ಮುಂಚೂಣಿಗೆ ಬಂದಿರುವುದು ಕುತೂಹಲಕ್ಕೆ ಕಾರಣವಾಗಿದೆ.

ನಡೆದದ್ದೇನು?
– ಡಿ. 27ರ ಒಳಗೆ ಬೆಂಗಳೂರಿನ ಎಲ್ಲ ವ್ಯಾಪಾರ, ಉದ್ಯಮಗಳ ನಾಮಫ‌ಲಕಗಳಲ್ಲಿ ಕನ್ನಡವೇ ಅಗ್ರಸ್ಥಾನ ಪಡೆಯಬೇಕು ಎಂದು ಆಗ್ರಹಿಸಿದ್ದ ಕರ್ನಾಟಕ ರಕ್ಷಣ ವೇದಿಕೆಯ ನಾರಾಯಣ ಗೌಡರ ಬಣ. ತಲೆಕೆಡಿಸಿಕೊಳ್ಳದ ಮಳಿಗೆ ಮಾಲಕರು, ರಸ್ತೆಗಿಳಿದ ಕರವೇ ಕಾರ್ಯಕರ್ತರು.
– 2024ರ ಫೆಬ್ರವರಿ ಒಳಗೆ ಎಲ್ಲ ಮಳಿಗೆಗಳ ಫ‌ಲಕಗಳಲ್ಲೂ ಕನ್ನಡ ಅಕ್ಷರಗಳ ಪ್ರಮಾಣ ಶೇ. 60ರಷ್ಟಿರಬೇಕೆಂದು ಸರಕಾರ ಸೂಚಿ ಸಿದೆ. ಇದನ್ನು ಪರಿಗಣಿಸದೆ ಹಳೆ ಸಂಪ್ರದಾಯ ಮುಂದುವರಿಸಿದರೆ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲು ಕರವೇ ನಿರ್ಧಾರ.

ಟಾಪ್ ನ್ಯೂಸ್

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

3

Kannur: ಕಾರು – ಲಾರಿ ನಡುವೆ ಭೀಕರ ಅಪಘಾತ; ಒಂದೇ ಕುಟುಂಬದ ಐವರು ದುರ್ಮರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

Licenses: ಪತಂಜಲಿಗೆ ಸೇರಿದ 14 ಉತ್ಪನ್ನಗಳ ಲೈಸೆನ್ಸ್ ರದ್ದು ಮಾಡಿದ ಸರಕಾರ.. ಇಲ್ಲಿದೆ ಕಾರಣ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

ಆ*ತ್ಮಹತ್ಯೆಗಾಗಿ 14ನೇ ಮಹಡಿ ಮೇಲಿನಿಂದ ಜಿಗಿದ ಯುವಕ ಬಾಳೆಗಿಡಕ್ಕೆ ಬಿದ್ದು ಬದುಕಿದ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

Hassan Pen Drive Case: ಕಾಂಗ್ರೆಸ್‌ ಪ್ರತಿಭಟನಕಾರರ ವಿರುದ್ಧ ಜೆಡಿಎಸ್‌ ದೂರು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್‌ ವಿರುದ್ಧ ಬಿಜೆಪಿ ದೂರು

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್‌ ವಿರುದ್ಧ ಕಾಂಗ್ರೆಸ್‌ ವಾಗ್ಧಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Chilled beer: ಬಿಸಿಲ ಧಗೆ; ಚಿಲ್ಡ್ ಬಿಯರ್‌ಗೆ ಭಾರಿ ಡಿಮ್ಯಾಂಡ್ ‌

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Shivamogga: ಬಸ್ ನಿಲ್ದಾಣದ ಬಳಿಯ ಮೊಬೈಲ್ ಅಂಗಡಿಯಲ್ಲಿ ಅಗ್ನಿ ಅವಘಡ… ಅಪಾರ ಸೊತ್ತು ನಾಶ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

Tragedy: ತನ್ನ ಅಪಾರ್ಟ್‌ಮೆಂಟ್‌ನಲ್ಲೇ ನೇಣಿಗೆ ಶರಣಾದ ಭೋಜ್‌ಪುರಿ ನಟಿ… ಕಾರಣ ನಿಗೂಢ

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

B.Y. Raghavendra: ಕಾಂಗ್ರೆಸ್‌ನವರ ಬಳಿ ಗ್ಯಾರಂಟಿ ಅಡ್ವಾನ್ಸ್‌ ಹಣ ಕೇಳಿ: ಬಿವೈಆರ್‌

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Gayatri Siddeshwar: ಕೈ ಸರ್ಕಾರದ ಗ್ಯಾರಂಟಿ ತಾತ್ಕಾಲಿಕ; ಗಾಯಿತ್ರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.