ದೆಹಲಿಯಲ್ಲಿ ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ : ಆರಗ ಜ್ಞಾನೇಂದ್ರ
Team Udayavani, May 12, 2022, 12:43 PM IST
ಬೆಂಗಳೂರು : ‘ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುರುವಾರ ಬೆಳಗ್ಗೆ ಹೇಳಿಕೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೈಯಕ್ತಿಕ ಕೆಲಸಕ್ಕೆ ದೆಹಲಿಗೆ ಹೋಗಿದ್ದೆ.ರಾತ್ರಿ ಹೋಗಿ ಈಗ ಬಂದಿದ್ದೇನೆ. ನಿನ್ನೆ ನಾನು ಹೋಗುವಾಗ ಸಿಎಂ ಕೂಡಾ ದೆಹಲಿಯಲ್ಲೇ ಇದ್ದರು, ಅವರನ್ನೂ ಭೇಟಿ ಮಾಡಿದ್ದೇನೆ ಎಂದರು.
ಬೆಳಗ್ಗೆ 8 ಗಂಟೆಗೆ ಒಬ್ಬರನ್ನು ಭೇಟಿ ಮಾಡಬೇಕಿತ್ತು,ಯಾವ ವರಿಷ್ಠರನ್ನೂ ಭೇಟಿ ಮಾಡಿಲ್ಲ.ಪ್ರಹ್ಲಾದ್ ಜೋಷಿ ಅವರನ್ನು ಎಲ್ಲಿ ಭೇಟಿ ಮಾಡಿದ್ದೇನೆ? ನಾನು ಅಲ್ಲಿ ಹೋದಾಗ ಅವರು ಈ ಕಡೆ ಬಂದಿದ್ದಾರೆ ಎಂದರು.
ಸಂಪುಟ ವಿಚಾರದಲ್ಲಿ ಭಾರಿ ಚರ್ಚೆ ನಡೆಯುತ್ತಿರುವ ವೇಳೆ ಗೃಹ ಸಚಿವರು ತುರ್ತಾಗಿ ದೆಹಲಿಗೆ ತೆರಳಿದ್ದು ಭಾರೀ ಕುತೂಹಲ ಮೂಡಿಸಿತ್ತು ಮಾತ್ರವಲ್ಲದೆ ಅವರ ಖಾತೆಯೂ ಬದಲಾಗಲಿದೆ ಎನ್ನುವ ಕುರಿತು ಚರ್ಚೆಗಳು ನಡೆದಿದ್ದವು.