ಅಂಕೋಲಾದಲ್ಲಿ 11 ಸೆಂ.ಮೀ. ಮಳೆ
Team Udayavani, Jul 12, 2020, 6:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಬೆಂಗಳೂರು: ಶನಿವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮುಂಗಾರು ದುರ್ಬಲವಾಗಿತ್ತು.
ಕರಾವಳಿಯ ಬಹುತೇಕ ಎಲ್ಲ ಕಡೆ, ಉತ್ತರ ಒಳನಾಡಿನ ಹಲವು ಕಡೆ ಮತ್ತು ದಕ್ಷಿಣ ಒಳನಾಡಿನ ಕೆಲವು ಕಡೆ ಮಳೆಯಾಯಿತು.
ಅಂಕೋಲಾದಲ್ಲಿ ಸುರಿದ 11 ಸೆಂ.ಮೀ. ಮಳೆ ರಾಜ್ಯದ ಗರಿಷ್ಠವಾಗಿತ್ತು.
ಇದೇ ಅವಧಿಯಲ್ಲಿ ವಿವಿಧೆಡೆ ಸುರಿದ ಮಳೆ ಪ್ರಮಾಣ ಹೀಗಿದೆ (ಸೆಂ.ಮೀ.ಗಳಲ್ಲಿ):
ಕಾರವಾರ 10, ಕುಮಟಾ 9, ಶಿರಾಲಿ, ಭಟ್ಕಳ, ಮಂಕಿ, ಗೋಕರ್ಣ ತಲಾ 7, ಕದ್ರಾ 5, ಕುಂದಾಪುರ 4, ಕೊಲ್ಲೂರು, ಹೊನ್ನಾವರ ತಲಾ 3, ಮಂಚಿಕೆರೆ, ಯಲ್ಲಾಪುರ ತಲಾ 2, ಧರ್ಮಸ್ಥಳ, ಉಪ್ಪಿನಂಗಡಿ, ಸುಳ್ಯ, ಕೋಟ, ಸಿದ್ದಾಪುರ, ಹಳಿಯಾಳ ತಲಾ 1.
ಸೋಮವಾರ ಮುಂಜಾನೆಯವರೆಗಿನ 48 ತಾಸುಗಳ ಅವಧಿಯಲ್ಲಿ ಕರಾವಳಿಯ ಬಹುತೇಕ ಎಲ್ಲೆಡೆ, ದಕ್ಷಿಣ ಒಳನಾಡಿನ ಹಲವೆಡೆ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ಕರಾವಳಿಯಲ್ಲಿ ಜು.12 ಮತ್ತು 13ರಂದು ಎಲ್ಲೊ ಅಲರ್ಟ್ ಹಾಗೂ ಜು. 14ರಿಂದ 16ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.