
ವಿಜ್ಞಾನಿ ಡಾ.ಶಿವಕುಮಾರ್ ನಿಧನ
Team Udayavani, Apr 14, 2019, 3:00 AM IST

ಬೆಂಗಳೂರು: “ಚಂದ್ರಯಾನ’ ಯೋಜನೆಯ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದ ವಿಜ್ಞಾನಿ, ಪ್ರದ್ಮಶ್ರೀ ಪುರಸ್ಕೃತ ಡಾ.ಎಸ್.ಕೆ. ಶಿವಕುಮಾರ್ (65) ಶನಿವಾರ ನಿಧನರಾದರು. ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ತಿಂಗಳಿಂದ ನಗರದ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮೃತರಿಗೆ ಪತ್ನಿ ಪ್ರಾಧ್ಯಾಪಕಿ ಡಾ.ಗಿರಿಜಾ ಮತ್ತು ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಚಂದ್ರಯಾನ ಉಪಗ್ರಹಕ್ಕೆ ಪಥ ಮಾರ್ಗದರ್ಶನ, ಅದರ ನೆಲೆ ಗುರುತಿಸುವುದು, ಸರಿಯಾದ ಕಕ್ಷೆಗೆ ತೆರಳಲು ಸೂಕ್ತ ನಿರ್ದೇಶನ ನೀಡುವುದು ಸೇರಿ ಬಾಹ್ಯಾಕಾಶದ “ಡೀಪ್ ಸ್ಪೇಸ್ ಆ್ಯಂಟೆನಾ’ ಸ್ಥಾಪನೆಯಲ್ಲಿ ಡಾ.ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. 32 ಅಡಿ ಉದ್ದದ ಈ ಆ್ಯಂಟೆನಾ ಬ್ಯಾಲಾಳದಲ್ಲಿ ಇದ್ದು, ಅವರು ಇಸ್ರೋ ಟೆಲಿಮೆಟ್ರಿ ಮತ್ತು ಟ್ರ್ಯಾಕಿಂಗ್ ಸೆಂಟರ್ ನಿರ್ದೇಶಕರಾಗಿದ್ದಾಗ ಅದನ್ನು ನಿರ್ಮಿಸಲಾಗಿತ್ತು.
ಪತ್ರಿಕೋದ್ಯಮ ಶಿಕ್ಷಣ ಪಡೆದಿದ್ದ ಅವರು ಮೈಸೂರು ವಿವಿ ಪದವಿ ವ್ಯಾಸಂಗ ಪೂರೈಸಿದ್ದರು. ನಂತರ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ “ಫಿಸಿಕಲ್ ಎಂಜಿನಿಯರಿಂಗ್’ನಲ್ಲಿ ಎಂಟೆಕ್ ಶಿಕ್ಷಣ ಪಡೆದು, 1976ರಲ್ಲಿ ಇಸ್ರೋಗೆ ಸೇರಿದ್ದರು. ಅಲ್ಲಿಂದ ಇಸ್ರೋ ಬಾಹ್ಯಾಕಾಶ ಕೇಂದ್ರದ ನಿರ್ದೇಶಕರಾಗಿ, ಐಆರ್‌ಎಸ್ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.
ಪ್ರಸ್ತುತ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಅಧ್ಯಕ್ಷರಾಗಿದ್ದರು. ಆ ಮೂಲಕ ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಜನಸಾಮಾನ್ಯರು, ಶಿಕ್ಷಣ ಕ್ಷೇತ್ರಕ್ಕೆ ತಲುಪಿಸುವ ಕೆಲಸ ಮಾಡಿದರು. ಜತೆಗೆ ಸರಳ, ಸಜ್ಜನ ವ್ಯಕ್ತಿತ್ವ ಹೊಂದಿದ್ದರು ಎಂದು ವಿಜ್ಞಾನ ಲೇಖಕ ಹಾಲೊªಡ್ಡೇರಿ ಸುಧೀಂದ್ರ ಮೆಲುಕು ಹಾಕಿದರು.
ಶಿವಕುಮಾರ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮೈಸೂರು ವಿವಿ ಗೌರವ ಡಾಕ್ಟರೇಟ್ ಮತ್ತು ವಿಜ್ಞಾನ ಕ್ಷೇತ್ರದ ಸಾಧನೆಗೆ 2010ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ನೀಡಲಾಗಿತ್ತು. ಮೃತರ ಅಂತ್ಯಕ್ರಿಯೆ ಸಂಜೆ ಬನಶಂಕರಿಯ ಚಿತಾಗಾರದಲ್ಲಿ ನೆರವೇರಿತು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Protest: ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರೈತರ ಬೃಹತ್ ಪ್ರತಿಭಟನೆ

JDS BJP Alliance; ಮೈತ್ರಿ ವಿಚಾರವಾಗಿ ಮೌನ ಮುರಿಯದ ದೇವೇಗೌಡರು

Cauvery ವಿಚಾರದಲ್ಲಿ ಸಿಎಂ ಕಠಿಣ ನಿಲುವಿಗೆ ಬೆಂಬಲ: ಮಧು ಬಂಗಾರಪ್ಪ

Cauvery ವಿಚಾರದಲ್ಲಿ ರಾಜಕೀಯ ಬೇಡ; ಒಗ್ಗಟ್ಟಾಗಿ ಹೋರಾಟ ಮಾಡುವ: ದಿನೇಶ್ ಗುಂಡೂರಾವ್

Dandeli: ಕುಡಿದ ಮತ್ತಿನಲ್ಲಿ ಶಿವಾಜಿ ಮೂರ್ತಿಗೆ ಹಾನಿ… ಓರ್ವನ ಬಂಧನ
MUST WATCH
ಹೊಸ ಸೇರ್ಪಡೆ

Asian Games; ಅರುಣಾಚಲ ಪ್ರದೇಶದ ಆಟಗಾರರಿಗೆ ಪ್ರವೇಶ ನಿರಾಕರಿಸಿ ಚೀನಾ: ಭಾರತದ ತೀವ್ರ ವಿರೋಧ

NDA ಗೆ ಜೆಡಿಎಸ್ ಪಕ್ಷವನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದ ಶಾ, ನಡ್ಡಾ

Gokarna; ಸೆ. 26,27,28 ರಂದು ಪ್ರಧಾನಿ ಮೋದಿ ಹೆಸರಲ್ಲಿ ಮಹಾರುದ್ರಯಾಗ

Explainer:ಕ್ಷೇತ್ರ ಪುನರ್ ವಿಂಗಡಣೆಯಾದ್ರೆ ತಮಿಳುನಾಡು 8, ಕೇರಳಕ್ಕೆ 8ಲೋಕಸಭಾ ಸ್ಥಾನ ನಷ್ಟ

J&K; ಗೃಹಬಂಧನದಿಂದ ಬಿಡುಗಡೆ: ಕಣ್ಣೀರಿಟ್ಟ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್ವೈಜ್