ಹೆಗ್ಗಣ ಕಚ್ಚಿ ಆರು ತಿಂಗಳ ಮಗು ಸಾವು
Team Udayavani, Oct 21, 2019, 3:00 AM IST
ವಿಜಯಪುರ: ಸಿಂದಗಿ ತಾಲೂಕಿನ ಹೊಸೂರ ಗ್ರಾಮದಲ್ಲಿ ಮನೆಯಲ್ಲಿ ಮಲಗಿದ್ದ ಮಗುವೊಂದು ಹೆಗ್ಗಣ ಕಚ್ಚಿ ಮೃತ ಪಟ್ಟಿದೆ. ಗೀತಾ-ಗೋಲಪ್ಪ ದಂಪತಿಯ 6 ತಿಂಗಳ ಮಗು ಸಾವನ್ನಪ್ಪಿರುವುದು. ಸಿಂದಗಿ ತಾಲೂಕಿನ ಸುರಗಿಹಳ್ಳಿ ನಿವಾಸಿಗಳಾಗಿದ್ದ ಈ ದಂಪತಿ, ಹಬ್ಬಕ್ಕೆಂದು ಗೀತಾ ಅವರ ತವರು ಮನೆಗೆ ಬಂದಿದ್ದರು.
ಶನಿವಾರ ರಾತ್ರಿ ಗಂಡ-ಹೆಂಡತಿಯ ಪಕ್ಕದಲ್ಲೇ ಮಗು ಮಲಗಿತ್ತು. ಈ ವೇಳೆ ಹೆಗ್ಗಣ ಮಗುವಿನ ಬಲಗಾಲನ್ನು ಕಚ್ಚಿತು. ಹೆಗ್ಗಣ ಕಚ್ಚಿದ್ದರಿಂದ ಮಗು ಕೊಸರಾಟ ನಡೆಸಿತು. ಆಗ ಮುಖ ಕೆಳಗೆ ಮಾಡಿ ಬಿತ್ತು. ಇದರಿಂದ ಉಸಿರುಗಟ್ಟಿ ಸಾವನ್ನಪ್ಪಿದೆ. ಕಲಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.