ತುಮಕೂರಿಗೆ ವಿಶೇಷ ರೈಲು
Team Udayavani, Jan 22, 2019, 12:50 AM IST
ತುಮಕೂರು: ಸಿದ್ಧಗಂಗಾ ಶ್ರೀಗಳ ಅಂತಿಮ ದರ್ಶನ ಪಡೆಯಲು ಭಕ್ತಾದಿಗಳಿಗೆ ರೈಲ್ವೆ ಇಲಾಖೆಯಿಂದ ಮಂಗಳವಾರ ಬೆಳಗ್ಗೆಯಿಂದ ಯಶವಂತಪುರದಿಂದ ತುಮಕೂರಿಗೆ ವಿಶೇಷ ಡೆಮೊ ರೈಲನ್ನು ಬಿಡಲಾಗಿದೆ.
ಯಶವಂತಪುರದಿಂದ ತುಮಕೂರು ಸಂಚರಿಸುವ ಎಲ್ಲಾ ನಿಲ್ದಾಣದಲ್ಲೂ ರೈಲು ನಿಲುಗಡೆ ಕೊಡಲಿದೆ ಎಂದು ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲ್ವೆ ವೇಳಾಪಟ್ಟಿ: ಎಂಟು ಬೋಗಿಯ ವಿಶೇಷ ಡೆಮೊ ರೈಲು ಯಶವಂತಪುರದಿಂದ ಬೆಳಗ್ಗೆ 6 ಗಂಟೆ, 9.50ಕ್ಕೆ, ಮಧ್ಯಾಹ್ನ 2 ಗಂಟೆ ಹಾಗೂ ಸಂಜೆ 6 ಗಂಟೆಗೆ.