KPSC ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ : ವಿದ್ಯಾರ್ಥಿ ವಶಕ್ಕೆ
Team Udayavani, Oct 28, 2023, 2:18 PM IST
ಯಾದಗಿರಿ: ಇಂದು ರಾಜ್ಯಾದ್ಯಂತ ನಡೆಯುತ್ತಿರುವ ವಿವಿಧ ಇಲಾಖೆಯ ಕೆ.ಪಿ.ಎಸ್.ಸಿ ನಡೆಸುತ್ತಿರುವ ಎಸ್.ಡಿ.ಎ ಮತ್ತು ಎಫ್.ಡಿ.ಎ ಪರೀಕ್ಷೆಯಲ್ಲಿ ವಿದ್ಯಾರ್ಥಿಯೋರ್ವ ಬ್ಲೂಟೂತ್ ಬಳಕೆ ಮಾಡಿರುವ ಘಟನೆ ಯಾದಗಿರಿ ನಗರದಲ್ಲಿ ನಡೆದಿದೆ.
ಜಿಲ್ಲಾದ್ಯಂತ ಒಟ್ಟು 17 ಕೇಂದ್ರಗಳಲ್ಲಿ ವಿವಿಧ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಸಾಮಾನ್ಯ ಪರೀಕ್ಷೆ ಇಂದು (ಶನಿವಾರ) ನಗರದಲ್ಲಿ ಬೆಳಿಗ್ಗೆ ಆರಂಭವಾಗಿತ್ತು. ಮೊದಲ ಪೇಪರ್ ಪರೀಕ್ಷೆಯಲ್ಲಿ ಬ್ಲೂಟೂತ್ ಬಳಕೆ ಮಾಡಿರುವ ಶಂಕೆಯ ಮೇರೆಗೆ ನಗರ ಪೋಲಿಸರು ಓರ್ವ ವಿದ್ಯಾರ್ಥಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ವಿಚಾರಣೆ ಮುಗಿದ ಬಳಿಕ ಹಂಚಿಕೊಳ್ಳಲಾಗುವುದು ಎಂದು ಪೋಲಿಸ್ ವರಿಷ್ಠಾಧಿಕಾರಿ ಸಂಗೀತಾ ತಿಳಿಸಿದರು.