ನೇಪಾಲದಲ್ಲಿ ಭಾರೀ ಮಳೆ, ಪ್ರವಾಹ, ಭೂಕುಸಿತ: 16 ಮಂದಿ ಸಾವು

Team Udayavani, Jul 12, 2019, 7:33 PM IST

ಕಾಠ್ಮಂಡು : ನೇಪಾಲದಲ್ಲಿ ಸುರಿಯುತ್ತಿರುವ ಜಡಿ ಮಳೆಯಿಂದ ನೆರೆ ಮತ್ತು ಭೂಕುಸಿತ ಉಂಟಾಗಿದ್ದು ಕನಿಷ್ಠ 16 ಮಂದಿ ಮೃತಪಟ್ಟಿರುವುದಾಗಿ ಗೃಹ ಸಚಿವಾಲಯ ಹೇಳಿದೆ.

ಕಾಠ್ಮಂಡುವಿನ ಮೂಲಪಾನಿ ಪ್ರದೇಶದಲ್ಲಿ ಮನೆಯೊಂದು ಕುಸಿದು ಅದರಡಿ ಸಿಲುಕಿ ಮೂವರು ಮೃತಪಟ್ಟರು.

ಇದೇ ವೇಳೆ ಜಡಿ ಮಳೆಯ ಕಾರಣ ಖೋತಾಂಗ್‌ ಮತ್ತು ಭೋಜಪುರ ಜಿಲ್ಲೆಗಳಲ್ಲಿ ತಲಾ ಮೂರು ಮಂದಿ ಮೃತಪಟ್ಟಿದ್ದಾರೆ. ಕಾವರೆ ಜಿಲ್ಲೆಯಲ್ಲಿ ಇಬ್ಬರು, ಲಲಿತಪುರ, ಸಿಂಧೂಲಿ, ರಾಮೆಚ್ಛಾಪ್‌, ಪಾರ್ಸಾ ಮತ್ತು ಮಕವಾನ್‌ಪುರ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

ದೇಶದ ವಿವಿಧ ಭಾಗಗಳಿಲ್ಲ ಮಳೆ ಸಂಬಂಧಿ ದುರಂತಗಳಲ್ಲಿ ಕನಿಷ್ಠ 13 ಮಂದಿ ಗಾಯಗೊಂಡಿದ್ದಾರೆ ಎಂದು ಸರಕಾರ ತಿಳಿಸಿದೆ.

 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ