ಸೂರ್ಯಗ್ರಹಣ ವೀಕ್ಷಣೆಗೆ 64 ಲಕ್ಷ ರೂ. ಟಿಕೆಟ್‌!

Team Udayavani, Aug 20, 2017, 6:50 AM IST

ticket.jpg

ವಾಷಿಂಗ್ಟನ್‌: ಅರೆ ಇದೇನಿದು? ಸೂರ್ಯಗ್ರಹಣ ವೀಕ್ಷಣೆಯೂ ಇದೀಗ ಇಷ್ಟೊಂದು ಕಾಸ್ಟ್ಲಿ ಆಯ್ತಾ..? ಎಂಬ ಪ್ರಶ್ನೆ ನಿಮ್ಮದಾಗಿರಬಹುದು. ಹಾಂ! ಆದರೆ ಈ ಗ್ರಹಣ ವೀಕ್ಷಣೆಯಲ್ಲೂ ಒಂದು ವಿಶೇಷವಿದೆ. ಸೂರ್ಯಗ್ರಹಣ ಸಂದರ್ಭ ವಿಮಾನದಲ್ಲಿ ಕರೆದುಕೊಂಡು ಹೋಗಿ ಆಗಸದಿಂದಲೇ ಗ್ರಹಣದ ಸಂಪೂರ್ಣ ದರ್ಶನ ಮಾಡುವುದು ಇದರ ವಿಶೇಷ.
ಸೋಮವಾರ ನಡೆವ ಸೂರ್ಯಗ್ರಹಣ ಸಂದರ್ಭ ಅದರ ವಿಶೇಷ ದರ್ಶನಕ್ಕೆ ಇದೀಗ ಅಮೆರಿಕದ ಖಾಸಗಿ ವಿಮಾನಯಾನ ಸಂಸ್ಥೆಗಳು ಸಿದ್ಧಗೊಂಡಿವೆ. ಅವುಗಳು ಸೂರ್ಯಗ್ರಹಣವನ್ನು ಐಷಾರಾಮಿ ವಿಮಾನದಲ್ಲಿ ಪ್ರಯಾಣಿಕರಿಗೆ ತೋರಿಸಲಿದ್ದು, ಇದೀಗ ಟಿಕೆಟ್‌ ಬೆಲೆ 10 ಸಾವಿರ ಡಾಲರ್‌ ಅಂದರೆ ಸುಮಾರು 64 ಲಕ್ಷ ರೂ. ತಲುಪಿದೆ. ಜನರೂ ಈ ವಿಶೇಷ ಅನುಭವಕ್ಕೆ ಸೀಟುಗಳನ್ನು ಬುಕ್‌ ಮಾಡಿದ್ದಾರೆ. 

ಗ್ರಹಣ ವೀಕ್ಷಣೆ, ವೀಕ್ಷಕ ವಿವರಣೆ!: ವಿಶೇಷ ವಿಮಾನಗಳಲ್ಲಿ ಕಿಟಕಿ ಬದಿ ಕೂತು ಗ್ರಹಣದ ವಿವಿಧ ಹಂತ ವೀಕ್ಷಣೆಯೊಂದಿಗೆ ಪರಿಣತ ಖಗೋಳ ತಜ್ಞರಿಂದ ವೀಕ್ಷಕ ವಿವರಣೆಯೂ ಇರಲಿದೆಯಂತೆ. ಜೊತೆಗೆ ವಿಮಾನದಲ್ಲಿ ದೂರದರ್ಶಕ ಮತ್ತು ಕಣ್ಣಿಗೆ ಹಾನಿಯಾಗದಂತೆ ವಿಶೇಷ ಕನ್ನಡ/ಗಾಜಿನ ವ್ಯವಸ್ಥೆ ಮಾಡಲಾಗಿದೆಯಂತೆ. 

ನಶೆಗೆ ಕಾಸ್ಮಿಕ್‌ ಕಾಕ್‌ಟೈಲ್‌:  ಬೋರ್‌ ಆಗಬಾರದು ಎಂದು ವೀಕ್ಷಕರಿಗೆ ಕಾಸ್ಮಿಕ್‌ ಕಾಕ್‌ ಟೈಲ್‌ ಹೆಸರಿನ ವಿಶೇಷ ಮದ್ಯದ ಸರಬರಾಜನ್ನೂ ಕೆಲವು ಕಂಪೆನಿಗಳು ಮಾಡಲಿವೆಯಂತೆ. ವಿಶೇಷ ವಿಮಾನಗಳನ್ನು ಹಾರಿಸುವುದರಿಂದ ಖಾಸಗಿ ಕಂಪೆ‌ನಿಗಳಿಗೆ ಉತ್ತಮ ಲಾಭವಾಗುತ್ತದೆಯಂತೆ. ಶೇ.6.8ರಷ್ಟು ಹೆಚ್ಚು ಲಾಭದ ಲೆಕ್ಕಾಚಾರ ಇದರ ಹಿಂದಿದ್ದು, ಗ್ರಾಹಕರ ಪ್ರತಿಕ್ರಿಯೆ ಉತ್ತಮವಾಗಿದೆಯೆಂದು ಕೊÕಜೆಟ್‌ ಕಂಪೆನಿ ಸಿಇಒ ಹೇಳಿದ್ದಾರೆ.

ಈ ಬಾರಿ ಗ್ರಹಣ ತುಂಬಾ ವಿಶೇಷ!
ಸೋಮವಾರ ಖಗ್ರಾಸ ಸೂರ್ಯ ಗ್ರಹಣ ನಡೆಯಲಿದ್ದು, ಇದು ತುಂಬಾ ವಿಶೇಷದ್ದು. ಕಾರಣ,  ಇಡೀ ಅಮೆರಿಕ ಒಂದು ಬಾರಿ ಕತ್ತಲಾಗಲಿದೆ. ಒಟ್ಟು ಒಂದೂವರೆ ಗಂಟೆಗಳ ಗ್ರಹಣ ಅವಧಿ ಇದ್ದು, ಚಂದ್ರ ಸೂರ್ಯನನ್ನು ಸಂಪೂರ್ಣ ಆವರಿಸಲಿ ದ್ದಾನೆ. ಪೂರ್ಣ ಸೂರ್ಯ ಗ್ರಹಣ ಸಂದರ್ಭ ಸೂರ್ಯನಿಂದ ಹೊರ ಹೊಮ್ಮುವ ಸೌರ ಕಿರಣ, ಭಾರೀ ಶಕ್ತಿ, ಪ್ಲಾಸ್ಮಾ ಕಿರಣಗಳ ಅಧ್ಯ ಯ ನಕ್ಕೆ ವಿಜ್ಞಾನಿಗಳೂ ಕಾತರರಾಗಿದ್ದಾರೆ. ಗ್ರಹಣಗಳಲ್ಲಿ ಶೇ.40ರಷ್ಟು ಮಾತ್ರ ಪೂರ್ಣ ಸೂರ್ಯಗ್ರಹಣವಾಗಿದ್ದು, ಸೂರ್ಯ-ಚಂದ್ರ ಒಂದೇ ಕೋನದಲ್ಲಿ ಬರುವುದು ಅಪರೂಪ.

ಪ್ರಾಣಿಗಳ ವರ್ತನೆಯಲ್ಲೂ ಬದಲಾವಣೆ!
ಖಗ್ರಾಸ ಸೂರ್ಯ ಗ್ರಹಣ ವೇಳೆ ಪ್ರಾಣಿಗಳ ವರ್ತನೆಯಲ್ಲೂ ಬದಲಾವಣೆಯಾಗಲಿದೆ. ಚಂದ್ರ ಸೂರ್ಯನನ್ನು ಆವರಿಸುತ್ತಿದ್ದಂತೆ, ಕತ್ತಲಾಗಿ ಪ್ರಾಣಿಗಳಿಗೆ ಗೊಂದಲವಾಗಲಿದೆ. ಬಹುತೇಕ ಪ್ರಾಣಿ ಪಕ್ಷಿಗಳು ಸಂಜೆ ತೋರಿಸುವ ವರ್ತನೆಗಳನ್ನು ತೋರಿಸಲಿವೆ. ಪಕ್ಷಿಗಳು ಗೂಡಿಗೆ ತೆರಳಲು ಸಿದ್ಧವಾದರೆ, ಚಿಲಿಪಿಲಿ ಗುಟ್ಟುವುದನ್ನೂ ನಿಲ್ಲಿಸಲಿವೆ. ಇನ್ನು ಕೆಲವು ಪ್ರಾಣಿಗಳು ಕತ್ತಲೆ ವೇಳೆ ಬೇಟೆಗೆ ಸಿದ್ಧವಾಗುತ್ತವೆ. ಸಾಕು ಪ್ರಾಣಿಗಳೂ ಮಗುಮ್ಮಾಗಿ ಕೂರುತ್ತವೆ. ಅಮೆರಿಕದ ವಿವಿಧೆಡೆ ಗ್ರಹಣ ಸಂದರ್ಭ ಬೆಳಗ್ಗಿನ ಜಾವದಷ್ಟು ಉಷ್ಣತೆ ಇದ್ದು, ಪ್ರಾಣಿಗಳ ವರ್ತನೆಯ ಬದಲಾವಣೆಗಳನ್ನು ವೀಕ್ಷಿಸಲು ಪ್ರಾಣಿ ತಜ್ಞರು ಸಿದ್ಧವಾಗಿದ್ದಾರೆ.

ಟಾಪ್ ನ್ಯೂಸ್

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-NG

JEE; ಮಹಾರಾಷ್ಟ್ರ ರೈತನ ಮಗ ಮೇನ್‌ ಟಾಪರ್‌

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

Kerala: ಗಲ್ಲು ಶಿಕ್ಷೆಗೆ ಗುರಿಯಾದ ಮಗಳನ್ನು11 ವರ್ಷಗಳ ಬಳಿಕ ಭೇಟಿಯಾದ ತಾಯಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

Andhra Student passed away After Getting Trapped In Frozen Kyrgyzstan Waterfall

Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Election: ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ… ಬಿಗಿ ಭದ್ರತೆ

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

IPL 2024: ಗೆಲುವಿನ ವಿಶ್ವಾಸದಲ್ಲಿ ಕೆಕೆಆರ್‌

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

Hubballi: ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ, ಭದ್ರತೆ ಕೊಡಿ; ನೇಹಾ ತಂದೆ ಹಿರೇಮಠ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

IT raid: ಡಿಕೆಸು ಆಪ್ತರ ಮನೆ ಮೇಲೆ ಐಟಿ ದಾಳಿ;  ಜಪ್ತಿ ಮಾಡಿರುವ ದಾಖಲೆ ಪರಿಶೀಲನೆ

17

Team India: ಟಿ20 ವಿಶ್ವಕಪ್‌ ತಂಡ ರಾಹುಲ್‌ಗೆ ಚಾನ್ಸ್‌, ಹಾರ್ದಿಕ್‌ ಪಾಂಡ್ಯಗೆ ಕೊಕ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.