ಅಬುಧಾಬಿಯಲ್ಲಿ ಸಿಲಿಂಡರ್ ಸ್ಫೋಟ: ಭಾರತೀಯ ಸಾವು
Team Udayavani, May 26, 2022, 7:30 PM IST
ಅಬುಧಾಬಿ: ಅರಬ್ ಸಂಯುಕ್ತ ಸಂಸ್ಥಾನದ(ಯುಎಇ) ಅಬುಧಾಬಿಯ ರೆಸ್ಟೋರೆಂಟ್ ಒಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿದ್ದು, ಭಾರತ ಮೂಲದ ಓರ್ವ ಹಾಗೂ ಪಾಕಿಸ್ತಾನ ಮೂಲದ ಓರ್ವ ನಾಗರಿಕ ಸಾವನ್ನಪ್ಪಿದ್ದಾರೆ.
106 ಭಾರತೀಯರು ಸೇರಿ ಒಟ್ಟು 120 ಮಂದಿ ಗಾಯಗೊಂಡಿದ್ದಾರೆ. ಈ ಅವಘಡ ಸೋಮವಾರ ಮಧ್ಯಾಹ್ನ ನಡೆದಿದ್ದಾಗಿ “ಖಲೀಜ್ ಟೈಮ್ಸ್’ ವರದಿ ಮಾಡಿದೆ.
ಮೃತರ ಕುಟುಂಬ ಮತ್ತು ಸ್ಥಳೀಯ ಆಡಳಿತದೊಂದಿಗೆ ಸತತ ಸಂಪರ್ಕದಲ್ಲಿರುವುದಾಗಿ ಭಾರತೀಯ ರಾಯಭಾರ ಕಚೇರಿಯು ತಿಳಿಸಿದೆ. ಮೃತರ ದೇಹವನ್ನು ಆದಷ್ಟು ಬೇಗ ತಾಯ್ನಾಡಿಗೆ ತರಲು ಸಿದ್ಧತೆ ನಡೆಸಲಾಗುತ್ತಿರುವುದಾಗಿಯೂ ರಾಯಭಾರ ಕಚೇರಿಯು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
26/11 ಮುಂಬೈ ದಾಳಿಯ ಪ್ರಾಜೆಕ್ಟ್ ಮ್ಯಾನೇಜರ್ ಗೆ 15 ವರ್ಷ ಜೈಲು ಶಿಕ್ಷೆ ವಿಧಿಸಿದ ಪಾಕಿಸ್ಥಾನ
ಪಾಕ್ನ ಎಲ್ಲೆಲ್ಲೂ ಪೇಪರ್ ಬರ! ಕಾಗದ ಕ್ಷೇತ್ರದ ಮೇಲೆ ಆರ್ಥಿಕ ದುಸ್ಥಿತಿ ದುಷ್ಪರಿಣಾಮ
ಬ್ರಿಟನ್ ಪ್ರಧಾನಿ ಬೋರಿಸ್ಗೆ ಮತ್ತೆ ಹಿನ್ನಡೆ: ಉಪಚುನಾವಣೆಯ 2 ಕ್ಷೇತ್ರಗಳಲ್ಲಿ ಸೋಲು
ವಾಷಿಂಗ್ಟನ್: ಸ್ಪೇಸ್ ಲಾಂಚ್ ಸಿಸ್ಟಂ ಯಶಸ್ವಿ ಪರೀಕ್ಷೆ
ನಮ್ಮ ಜಿರಳೆಗಳನ್ನು ವಾಪಸ್ ಕೊಡಿ! ಹರಾಜು ಸಂಸ್ಥೆಗೆ ನಾಸಾ ಸೂಚನೆ