ಫಲಿತಾಂಶ ತಿರುಚಿ ಆಡಿಯೋ ಬಹಿರಂಗ
Team Udayavani, Jan 5, 2021, 12:47 AM IST
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆಯ ವೇಳೆ ಜಾರ್ಜಿಯಾದಲ್ಲಿ ಹೇಗಾದರೂ ಮಾಡಿ ಜೋ ಬೈಡೆನ್ ಗೆಲುವನ್ನು ತಿರುಚಿ, ತಾವು ಜಯ ಗಳಿಸಿರುವುದಾಗಿ ಘೋಷಿಸಿ ಎಂದು ಅಲ್ಲಿನ ಚುನಾವಣ ಮುಖ್ಯಸ್ಥರಿಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚಿಸುತ್ತಿರುವ ಆಡಿಯೋ ಟೇಪ್ವೊಂದು ಈಗ ಬಿಡುಗಡೆಯಾಗಿದೆ.
ಈ ಆಡಿಯೋ ಅಮೆರಿಕ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಅಧ್ಯಕ್ಷೀಯ ಚುನಾ ವಣೆಯಲ್ಲಿ ಸೋಲುಂಡ ಟ್ರಂಪ್ಗೆ ತೀವ್ರ ಮುಖಭಂಗ ವಾಗಿದೆ. ಒಂದು ಗಂಟೆ ಕಾಲ ಚುನಾವಣ ಅಧಿಕಾರಿಯೊಂದಿಗೆ ಟ್ರಂಪ್ ಮಾತನಾಡಿರುವ ಆಡಿಯೋವನ್ನು ಅಮೆರಿಕದ ಪ್ರಮುಖ ಮಾಧ್ಯಮ ಸಂಸ್ಥೆಯೊಂದು ರಹಸ್ಯವಾಗಿ ರೆಕಾರ್ಡ್ ಮಾಡಿಕೊಂಡಿತ್ತು. ಜಾರ್ಜಿಯಾದಲ್ಲಿ ಟ್ರಂಪ್ 11,779 ಮತಗಳಿಂದ ಸೋತಿದ್ದರು. “ಬೈಡೆನ್ ಗೆಲುವನ್ನು ತಪ್ಪಿಸಲೇಬೇಕಾಗಿದೆ. ನಾನು ಜಯಗಳಿಸಲುಬೇಕಾದ 11,780 ಮತಗಳನ್ನು ಹೇಗಾದರೂ ಮಾಡಿ ಜೋಡಿಸಿ’ ಎಂದು ಟ್ರಂಪ್ ಕೇಳಿಕೊಂಡಿದ್ದರು. ಟ್ರಂಪ್ ಅವರ ಈ ಕೃತ್ಯವು ಅಧಿಕಾರದ ದುರ್ಬಳಕೆ ಹಾಗೂ ಸಂಭಾವ್ಯ ಕ್ರಿಮಿನಲ್ ಅಪರಾಧ ಎಂದು ಕಾನೂನು ತಜ್ಞರು ಕಿಡಿಕಾರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು