ಬಾಂಗ್ಲಾದ ಕಂಟೈನರ್ ಡಿಪೋದಲ್ಲಿ ಬೆಂಕಿ: 44 ಸಾವು, 450 ಕ್ಕೂ ಹೆಚ್ಚು ಮಂದಿಗೆ ಗಾಯ
Team Udayavani, Jun 5, 2022, 6:16 PM IST
ಢಾಕಾ: ಬಾಂಗ್ಲಾದೇಶದ ಆಗ್ನೇಯ ಭಾಗದ ಒಳನಾಡಿನ ಕಂಟೈನರ್ ಡಿಪೋದಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು, ಕನಿಷ್ಠ 44 ಜನರು ದಾರುಣವಾಗಿ ಸಾವನ್ನಪ್ಪಿದ್ದು, 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಬಂದರು ನಗರ ಚಿತ್ತಗಾಂಗ್ನಿಂದ 40 ಕಿ. ಮೀ. ದೂರದ ಸೀತಾಕುಂಡದಲ್ಲಿ ಶನಿವಾರ ರಾತ್ರಿ ಕಂಟೇನರ್ ಡಿಪೋದಲ್ಲಿ ಬೆಂಕಿ ಕಾಣಿಸಿಕೊಂಡಿತು, ಬೃಹತ್ ಸ್ಫೋಟದ ನಂತರ ಅನೇಕ ಕಂಟೇನರ್ ಗಳು ಸ್ಫೋಟಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಉಕ್ರೇನ್ಗೆ ಹಿಮಾರ್ಸ್ ನೀಡಲು ಮುಂದಾದ ಅಮೆರಿಕಾ : ಪುಟಿನ್ ಎಚ್ಚರಿಕೆ
ಭಾನುವಾರ ಬೆಳಗ್ಗೆಯವರೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಲು ಶ್ರಮಿಸುತ್ತಿದ್ದಾರೆ ಎಂದು ಅಗ್ನಿಶಾಮಕ ಸೇವೆಯ ಅಧಿಕಾರಿ ಫಾರೂಕ್ ಹುಸೈನ್ ಶಿಕ್ದರ್ ತಿಳಿಸಿದ್ದಾರೆ. ಸ್ಫೋಟದಿಂದ ಜನರು ಬೆಚ್ಚಿಬಿದ್ದಿದ್ದು, ಸಮೀಪದ ಮನೆಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.