
ಪಾಕಿಸ್ತಾನದಲ್ಲೊಂದು ಬ್ರಹ್ಮಾಂಡ ಭ್ರಷ್ಟಾಚಾರ!
ಅಣೆಕಟ್ಟು ನಿರ್ಮಾಣಕ್ಕೆ 302 ಕೋಟಿ ಸಂಗ್ರಹ; ಜಾಹೀರಾತಿಗೆ 502 ಕೋಟಿ ಬಳಕೆ
Team Udayavani, Sep 17, 2022, 7:35 AM IST

ಇಸ್ಲಾಮಾಬಾದ್: ಭಾರತದಲ್ಲಿ ಭ್ರಷ್ಟಾಚಾರ ಇದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದರೆ ಪಾಕಿಸ್ತಾನದಲ್ಲಿ ಭಾರತಕ್ಕಿಂತ 100 ಪಟ್ಟು ಹೆಚ್ಚು ಭ್ರಷ್ಟಾಚಾರವಿದೆ!
ಇದಕ್ಕೊಂದು ತಾಜಾ ಉದಾಹರಣೆ ಈಗ ಸಿಕ್ಕಿದೆ. ಸಿಂಧೂ ನದಿಗೆ ಅಡ್ಡಲಾಗಿ ಡಯಮರ್-ಭಾಷಾ ಅಣೆಕಟ್ಟು ಕಟ್ಟಲು ಪಾಕ್ ಸರ್ಕಾರ ತೀರ್ಮಾನಿಸಿತ್ತು. ಇದರ ನಿರ್ಮಾಣಕ್ಕಾಗಿ ಸಾರ್ವಜನಿಕರಿಂದ ಪಾಕ್ ಸರ್ಕಾರ ದೇಣಿಗೆ ರೂಪದಲ್ಲಿ ಬರೋಬ್ಬರಿ 318 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ವಿಚಿತ್ರವೆಂದರೆ ಅದಕ್ಕಾಗಿ ಜಾಹೀರಾತು ನೀಡಲು 502 ಕೋಟಿ ರೂ.ಗಳನ್ನು ವ್ಯಯಿಸಿದೆ!
ಇದಕ್ಕೂ ಮಿಗಿಲಾಗಿ ಪಾಕಿಸ್ತಾನಿ ನಾಗರಿಕರನ್ನು ದಿಗ್ಭ್ರಮೆಗೊಳಿಸಿದ್ದು ಪಾಕ್ ನಿವೃತ್ತ ಸರ್ವೋಚ್ಚ ನ್ಯಾಯಮೂರ್ತಿ ಸಖೀಬ್ ನಿಸಾರ್ ನೀಡಿದ ಹೇಳಿಕೆ. 2018ರಲ್ಲಿ ಅವರು ಅಧಿಕಾರದಲ್ಲಿದ್ದಾಗ ಜನರಿಂದ ಹಣ ಸಂಗ್ರಹಿಸಲು ನಿಧಿಯೊಂದನ್ನು ಸ್ಥಾಪಿಸಿದ್ದರು. 2019ರಲ್ಲಿ ಅವರು ನಿವೃತ್ತರಾದರು. ಇದೀಗ ಅವರು, ಹಣ ಸಂಗ್ರಹಿಸಲು ಕರೆ ನೀಡಿದ್ದು ಅಣೆಕಟ್ಟು ಕಟ್ಟಲಿಕ್ಕಲ್ಲ, ಜನಜಾಗೃತಿ ಮೂಡಿಸಲಿಕ್ಕೆ ಎಂದು ಹೇಳಿದ್ದಾರೆ. ಅವರಿಗೆ ಪಾಕಿಸ್ತಾನ ಸಂಸದೀಯ ಸಮಿತಿ ಸಮನ್ಸ್ ನೀಡಿದೆ.
ಅಂದಹಾಗೆ ಪಾಕಿಸ್ತಾನದ ಹತ್ತಾರು ಸಮಸ್ಯೆಗಳನ್ನು ಬಗೆಹರಿಸಲು ಕಾರಣವಾಗಬಲ್ಲ ಈ ಅಣೆಕಟ್ಟು ನಿರ್ಮಾಣಕ್ಕೆ ತಗುಲುವ ಒಟ್ಟು ವೆಚ್ಚ 1.116 ಲಕ್ಷ ಕೋಟಿ ರೂ.! 1980ರಲ್ಲೇ ಮುಗಿಯಬೇಕಾದ ಈ ಅಣೆಕಟ್ಟು, ಇನ್ನೂ ಶುರುವಾಗಿಲ್ಲ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆನಡಾದ ಹಿಂದೂ ದೇವಸ್ಥಾನದಲ್ಲಿ ಭಾರತ ವಿರೋಧಿ ಬರಹಗಳು; ವ್ಯಾಪಕ ಆಕ್ರೋಶ

1000 ಮಂದಿಯ ಕಣ್ಣ ದೃಷ್ಟಿ ಬರಲು ಹಣ ಸಹಾಯ ಮಾಡಿದ ಮಿ.ಬೀಸ್ಟ್ : ಅಂಧರ ಬಾಳಿಗೆ ಬೆಳಕಾದ ಯೂಟ್ಯೂಬರ್

“ಮಾಹಿತಿ ಯುದ್ಧ ನಡೆಸುತ್ತಿದೆ..” ಬಿಬಿಸಿ ಡಾಕ್ಯುಮೆಂಟರಿ ಪ್ರಕರಣದಲ್ಲಿ ಭಾರತದ ಬೆಂಬಲಕ್ಕೆ ನಿಂತ ರಷ್ಯಾ

ರಸ್ತೆ ಬದಿ ನಿಂತಿದ್ದವರ ಮೇಲೆ ಸಾಮೂಹಿಕ ಗುಂಡಿನ ದಾಳಿ: 9 ಮಂದಿಗೆ ಗಾಯ

ಬರ್ತ್ಡೇ ಪಾರ್ಟಿಯಲ್ಲಿ ಗುಂಡಿನ ದಾಳಿ: 8 ಮಂದಿ ಸಾವು, 3 ಮಂದಿಗೆ ಗಾಯ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
