ದಿಲೀಪ್ ಕುಮಾರ್, ಕಪೂರ್ ನಿವಾಸ ಖರೀದಿಗೆ ಪಾಕ್ನಲ್ಲಿ ಹಣ ಬಿಡುಗಡೆ
Team Udayavani, Jan 3, 2021, 7:30 AM IST
ಪೇಶಾವರ: ಭಾರತದ ಹಿಂದಿ ಸಿನೆಮಾ ಕಂಡ ಇಬ್ಬರು ಶ್ರೇಷ್ಠ ನಟರಾದ ದಿಲೀಪ್ ಕುಮಾರ್ ಹಾಗೂ ರಾಜ್ ಕಪೂರ್ ಹುಟ್ಟಿದ್ದು ಈಗಿನ ಪಾಕಿಸ್ಥಾನದ ಖೈಬರ್ ಪಖು¤ಂಖ್ವಾ ಪ್ರಾಂತ್ಯದಲ್ಲಿ. ಇಲ್ಲಿನ ಖೀಸ್ಸಾ ಖ್ವಾನಿ ಬಜಾರ್ನಲ್ಲಿ ಇಬ್ಬರೂ ಹುಟ್ಟಿದ ನೂರು ವರ್ಷಕ್ಕೂ ಹಳೆಯ ಮನೆಗಳಿವೆ. ಅವನ್ನು ಖರೀದಿಸಲು ಖೈಬರ್ ಪಖು¤ಂಖ್ವಾ ಸರಕಾರ 2.35 ಕೋಟಿ ರೂ. ಹಣ ಬಿಡುಗಡೆ ಮಾಡಿದೆ.
ಹಾಗೆಯೇ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದೆ. ಇವಿನ್ನು ವಸ್ತುಸಂಗ್ರಹಾಲಯಗಳಾಗಿ ಬದಲಾಗಲಿವೆ. ದಿಲೀಪ್ ಕುಮಾರ್ ನಿವಾಸಕ್ಕೆ 80.56 ಲಕ್ಷ ರೂ., ರಾಜ್ ಕಪೂರ್ ನಿವಾಸಕ್ಕೆ 1.50 ಕೋಟಿ ರೂ. ನಿಗದಿಪಡಿಸಲಾಗಿದೆ. ಭಾರೀ ಮಾರುಕಟ್ಟೆ ಮೌಲ್ಯ ಹೊಂದಿರುವ ಜಾಗವಾದ್ದರಿಂದ, ಈ ಮನೆಗಳನ್ನು ಕೆಡವಿ ಅವನ್ನು ವಾಣಿಜ್ಯ ಸಂಕೀರ್ಣಗಳಾಗಿ ಬದಲಿಸಲು, ಅವುಗಳ ಪ್ರಸ್ತುತ ಮಾಲಕರು ಯತ್ನಿಸಿದ್ದರು. ಆದರೆ ಪಾಕಿಸ್ಥಾನದ ಪುರಾತತ್ವ ಇಲಾಖೆ ಅದಕ್ಕೆ ಅವಕಾಶ ನೀಡಲಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎರಡೂ ಮನೆಗಳು ಶಿಥಿಲ ಗೊಂಡು, ಅವ್ಯವಸ್ಥೆಯ ಆಗರಗಳಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು