ಅಬ್ಬಬ್ಬಾ.. ಈ ಮೀನಿಗೆ ಡೈನೋಸಾರ್‌ ಕಣ್ಣು!

ನಾರ್ವೆ ಸಮುದ್ರ ತೀರದಲ್ಲಿ ವಿಚಿತ್ರ ಮೀನು

Team Udayavani, Sep 18, 2019, 8:00 PM IST

ಓಸ್ಲೋ: ನೋಡಲು ಅದು ಸಾಮಾನ್ಯ ಸಮುದ್ರ ಮೀನು. ಆದರೆ ಕಣ್ಣು ಮಾತ್ರ ಅಬ್ಬಬ್ಬಾ ಎನ್ನುವಷ್ಟು ದೊಡ್ಡ. ಇಷ್ಟೊಂದು ದೊಡ್ಡ ಕಣ್ಣಿನ ಮೀನು ಸಿಕ್ಕಿದ್ದು ದೂರದ ನಾರ್ವೆಯ ಸಮುದ್ರ ತೀರದಲ್ಲಿ. ಕಣ್ಣಿನ ಕಾರಣಕ್ಕೇ ಈ ಮೀನು ಭಾರೀ ಸುದ್ದಿ ಮಾಡಿದೆ.

ಮೀನುಗಾರಿಕೆ ಕಂಪೆನಿಯ ಗೈಡ್‌ ಆಗಿರುವ ಆಸ್ಕರ್‌ ಲುಂಧಲ್‌ ಎಂಬವರು ಈ ಮೀನನ್ನು ಹಿಡಿದಿದ್ದಾರೆ. ಗಾಳ ಹಾಕಿದ್ದಾಗ ದೊಡ್ಡದೇನಾದರೂ ಸಿಗಬಹುದು ಎಂದುಕೊಂಡಿದ್ದೆ ಆದರೆ ಅದರ ಕಣ್ಣು ನೋಡಿ ಒಮ್ಮೆ ಗಾಬರಿಯಾಯಿತು. ದೊಡ್ಡ ಮೀನು ಸಿಕ್ಕಿಹಾಕಿಕೊಂಡಿತೇ ಎಂದು ಹೆದರಿದ್ದೆ ಎಂದು ಹೇಳಿದ್ದಾರೆ. ಅಂದಹಾಗೆ ಇದು ರ್ಯಾಟ್‌ಫಿಶ್‌ ಜಾತಿಯ ಮೀನು. ಸುಮಾರು 3 ಕೋಟಿ ವರ್ಷಗಳ ಹಿಂದಿನ ಶಾರ್ಕ್‌ ಜಾತಿಗೆ ಸೇರಿದ ಮೀನು ಇದಾಗಿದ್ದು ಅತ್ಯಂತ ಅಪರೂಪ ಆಳ ಸಮುದ್ರದಲ್ಲಿ ಇವುಗಳು ಇರುತ್ತವಂತೆ. ಕಣ್ಣಿಗೆ ಕಾಣುವುದು ಅಪರೂಪದಲ್ಲಿ ಅಪರೂಪ ಎನ್ನಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ