ಡೋಕ್ಲಾಂ ನಮಗೇ ಸೇರಿದ್ದು 


Team Udayavani, Mar 27, 2018, 6:00 AM IST

35.jpg

ಬೀಜಿಂಗ್‌: ಕಳೆದ ವರ್ಷ ಭುಗಿಲೆದ್ದು, ಅನಂತರ ತಣ್ಣಗಾದ ಡೋಕ್ಲಾಂ ವಿವಾದ ಮತ್ತೆ ಭಾರತ-ಚೀನ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.  ಈಗ ಹೊಸದಾಗಿ ತಗಾದೆ ತೆಗೆದಿರುವ ಚೀನ, “ಡೋಕ್ಲಾಂ ನಮಗೇ ಸೇರಿದ್ದು’ ಎನ್ನುವ ಮೂಲಕ ಕಾಲು ಕೆರೆದುಕೊಳ್ಳಲು ಆರಂಭಿಸಿದೆ.

ಸೋಮವಾರ ಈ ಕುರಿತು ಮಾತನಾಡಿರುವ ಚೀನ ವಿದೇಶಾಂಗ ಸಚಿವಾಲಯದ ವಕ್ತಾರ ರಾದ ಹುವಾ ಚುನ್ಯಿಂಗ್‌, “ಡೋಂಗ್ಲಾಂಗ್‌ (ಡೋಕ್ಲಾಂ) ಚೀನಕ್ಕೆ ಸೇರಿದ್ದು. ಕಳೆದ ವರ್ಷದ ವಿವಾದದಿಂದಾಗಿಯಾದರೂ ಭಾರತವು ಪಾಠ ಕಲಿಯಬೇಕಿತ್ತು’ ಎಂದು ಹೇಳಿದ್ದಾರೆ. ಎರಡು ದಿನಗಳ ಹಿಂದಷ್ಟೇ ಚೀನದಲ್ಲಿರುವ ಭಾರತೀಯ ರಾಯಭಾರಿ ಗೌತಮ್‌ ಬಂಬಾವಲೆ ಅವರು, ಡೋಕ್ಲಾಂ ವಿವಾದಕ್ಕೆ ಚೀನ ಕಾರಣ ಎಂದು ಹೇಳಿಕೆ ನೀಡಿದ್ದರು. ಅದರಿಂದ ಕೆಂಡಾಮಂಡಲ ವಾದ ಚೀನ ಅದಕ್ಕೆ ಪ್ರತಿಕ್ರಿಯೆಯಾಗಿ ಸೋಮವಾರ ಈ ಹೇಳಿಕೆ ನೀಡಿದೆ.

ಭಾರತ ಒಪ್ಪಂದವನ್ನು ಗೌರವಿಸಲಿ: ಕಳೆದ ವರ್ಷ ನಮ್ಮ ಅವಿರತ ಹಾಗೂ ಪ್ರಾಮಾಣಿಕ ಪ್ರಯತ್ನದಿಂದಾಗಿ ಡೋಕ್ಲಾಂ ವಿವಾದವು ಬಗೆ ಹರಿಯಿತು. ಅಂದಿನ ವಿವಾದದಿಂದಲೇ ಭಾರತ ಪಾಠ ಕಲಿಯಬೇಕಿತ್ತು. ಐತಿಹಾಸಿಕ ಒಪ್ಪಂದವನ್ನು ಗೌರವಿಸಿ, ಚೀನದೊಂದಿಗಿನ ದ್ವಿಪಕ್ಷೀಯ ಬಾಂಧವ್ಯ ವೃದ್ಧಿಯಾಗುವಂತೆ ಗಡಿಯಲ್ಲಿ  ಶಾಂತಿ ಕಾಪಾಡುವ ಕೆಲಸವನ್ನು ಭಾರತ ಮಾಡಬೇಕಿತ್ತು ಎಂದು ಹೇಳಿದ್ದಾರೆ ಚುನ್ಯಿಂಗ್‌. ಅಲ್ಲದೆ, ಡೋಕ್ಲಾಂ ಯಾವತ್ತಿದ್ದರೂ ನಮ್ಮದೇ. ಅಲ್ಲಿ ನಾವು ನಡೆ ಸುವ ಎಲ್ಲ ಚಟುವಟಿಕೆಗಳೂ ನಮ್ಮ ಹಕ್ಕು. ಯಥಾಸ್ಥಿತಿಯನ್ನು ಬದಲಾಯಿಸುವಂಥ ಯಾವ ಕೆಲಸವೂ ಅಲ್ಲಿ ನಡೆದಿಲ್ಲ ಎಂದೂ ಅವರು ಹೇಳಿದ್ದಾರೆ. ಭಾರತದ ಜತೆ ಗಡಿಗೆ ಸಂಬಂಧಿಸಿದ 20 ಸುತ್ತು ಮಾತುಕತೆ ನಡೆದಿದ್ದು, ವಿವಾದ ಶಾಂತಿಯುತವಾಗಿ ಬಗೆಹರಿಸುವ ಪ್ರಯತ್ನ ಮುಂದುವರಿದಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.

ಬಂಬಾವಲೆ ಹೇಳಿದ್ದೇನು?: ಇತ್ತೀಚೆಗೆ ಹಾಂಕಾಂಗ್‌ ಮೂಲದ ಸೌತ್‌ ಚೈನಾ ಮಾರ್ನಿಂಗ್‌ ಪೋಸ್ಟ್‌ಗೆ ಸಂದರ್ಶನ ನೀಡಿದ್ದ ರಾಯಭಾರಿ ಬಂಬಾವಲೆ, “ಡೋಕ್ಲಾಂ ಬಿಕ್ಕಟ್ಟಿಗೆ ಚೀನ ಕಾರಣ. ಅಲ್ಲಿ ಯಥಾಸ್ಥಿತಿ ಕಾಯ್ದು ಕೊಳ್ಳುವುದು ಬಿಟ್ಟು, ಚೀನ ಅದನ್ನು ಬದಲಿಸಲು ಯತ್ನಿಸಿದ್ದರಿಂದಲೇ ವಿವಾದ ಶುರುವಾಯಿತು. ಮುಂದೆ ಅಂಥ ಪ್ರಯತ್ನ ನಡೆದರೆ, ಮತ್ತೂಂದು ಡೋಕ್ಲಾಂ ಮಾದರಿ ಬಿಕ್ಕಟ್ಟು ಆರಂಭವಾಗಲಿದೆ’ ಎಂದು ಎಚ್ಚರಿಸಿದ್ದರು. ಬಳಿಕ ರವಿವಾರ ಮಾತನಾಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌, “ಭಾರತವು ಅಲರ್ಟ್‌ ಆಗಿದ್ದು, ಡೋಕ್ಲಾಂನಲ್ಲಿ ಯಾವುದೇ ಅನಿರೀಕ್ಷಿತ ಸವಾಲು ಎದುರಾದರೂ ಸಮರ್ಥವಾಗಿ ನಿಭಾಯಿಸಲು ಸಿದ್ಧರಿದ್ದೇವೆ’ ಎಂದು ನುಡಿದಿದ್ದರು.

ಟಾಪ್ ನ್ಯೂಸ್

ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಸೂಚನೆ

ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಮೋದಿ ಸೂಚನೆ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಆರು ಮಂದಿ ಬಂಧನ

ಅಕ್ರಮ ಸಂಬಂಧ ನಿರಾಕರಿಸಿದ ಮಹಿಳೆಯ ಸಹೋದರನ ಅಪಹರಣ : ಭಗ್ನ ಪ್ರೇಮಿ ಸೇರಿ ಆರು ಮಂದಿ ಬಂಧನ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರುನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kiribati and Samoa

ಇದುವರೆಗೆ ಕೇವಲ ಎರಡು ಕೋವಿಡ್ ಕೇಸ್ ಪತ್ತೆಯಾದ ದೇಶದಲ್ಲಿ ಲಾಕ್ ಡೌನ್ ಜಾರಿ!

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

ಸೋತ ಹತಾಶೆಯಲ್ಲಿ ಮತಯಂತ್ರಗಳನ್ನು ವಶಪಡಿಸಲು ಮುಂದಾಗಿದ್ದ ಡೊನಾಲ್ಡ್ ಟ್ರಂಪ್

ವಿಶ್ವದ ಅಗ್ರ ನಾಯಕ ಪ್ರಧಾನಿ ನರೇಂದ್ರ ಮೋದಿ

ವಿಶ್ವದ ಅಗ್ರ ನಾಯಕ ಪ್ರಧಾನಿ ನರೇಂದ್ರ ಮೋದಿ

ಇರಾಕ್‌: 11 ಯೋಧರನ್ನು ಕೊಂದ ಐಎಸ್‌ ನ ಉಗ್ರರು

ಇರಾಕ್‌: 11 ಯೋಧರನ್ನು ಕೊಂದ ಐಎಸ್‌ ನ ಉಗ್ರರು

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

30 ವರ್ಷದಲ್ಲಿ ಇಡೀ ಜಕಾರ್ತಾ ಸಮುದ್ರ ಪಾಲಾಗಲಿದೆ…ಇಡೀ ನಗರವೇ ಸ್ಥಳಾಂತರ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ದ್ಗತಜಹಗ್ದ

ಬೆಂಕಿ ಅವಘಢ: 3 ಎಕರೆ ಅಡಕೆ ತೋಟ ನಾಶ

ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಸೂಚನೆ

ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಮೋದಿ ಸೂಚನೆ

ದ್ಡರಹಜಜಹಗ್ದಸಅ

ಪ್ಲಾಸ್ಟಿಕ್ ಮುಕ್ತ ಚಿಕ್ಕಮಗಳೂರು ಕನಸು

ಚವಬಗಜಹಗಗ

ಕಲಾ ಮಾಧ್ಯಮದ ಹಿಂದಿದೆ ಸಮಾಜ ಜಾಗೃತಿಯ ಆಶಯ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.