ಲಂಡನ್ನಲ್ಲೂ ಹಳೇ ಡೀಸೆಲ್ ಕಾರಿಗೆ ಶುಲ್ಕ!
Team Udayavani, Feb 18, 2017, 3:45 AM IST
ಲಂಡನ್: 10 ವರ್ಷ ಮೇಲ್ಪಟ್ಟ ಹಳೇ ಡೀಸೆಲ್ ಕಾರುಗಳಿಗೆ ದೆಹಲಿಯಲ್ಲಿ ನಿಷೇಧ ಹೇರಲಾಗಿದ್ದು ಶೀಘ್ರ ಜಾರಿಗೆ ಬರಲಿದೆ. ಅದರ ಬೆನ್ನಲ್ಲೇ ಲಂಡನ್ನಲ್ಲೂ ಹಳೇ ಡೀಸೆಲ್ ಕಾರುಗಳಿಗೆ ಹೆಚ್ಚು ಶುಲ್ಕ ವಿಧಿಸುವ ತೀರ್ಮಾನಕ್ಕೆ ಬರಲಾಗಿದೆ.
ಅದರಂತೆ ಮುಂದಿನ ಅಕ್ಟೋಬರ್ನಿಂದ ಕೇಂದ್ರ ಲಂಡನ್ ಪ್ರವೇಶಿಸುವ ವೇಳೆ ಹಳೇ ಡೀಸೆಲ್ ಕಾರಿನ ಚಾಲಕರು 830 ರೂ.ಗಳನ್ನು ಶುಲ್ಕವಾಗಿ ಪಾವತಿಸಬೇಕಿದೆ. “ಟಾಕ್ಸಿಕ್ ಚಾರ್ಜ್’ ಹೆಸರಲ್ಲಿ ಈ ಶುಲ್ಕವನ್ನು ವಸೂಲಿ ಮಾಡಲಾಗುತ್ತದೆ. ಯೂರೋ-4 ಮಾಲಿನ್ಯ ಮಟ್ಟ ಹೊಂದಿಲ್ಲದ ಕಾರುಗಳಿಗೆ ಈ ಶುಲ್ಕ ಅನ್ವಯಿಸುತ್ತದೆ. ಅಂದರೆ 2006ಕ್ಕೂ ಮೊದಲಿನ ಕಾರುಗಳು ಲಂಡನ್ ನಗರ ಪ್ರವೇಶಿಸ ಬೇಕಾದರೆ ಶುಲ್ಕ ತೆರುವುದು ಅನಿವಾರ್ಯವಾಗುತ್ತದೆ. ಈ ಮೂಲಕ ಹೆಚ್ಚು ಮಾಲಿನ್ಯಕಾರಕ ಕಾರುಗಳ ಮೇಲೆ ನಿಯಂತ್ರಣಕ್ಕೆ ಲಂಡನ್ ಆಡಳಿತ ಮುಂದಾಗಿದೆ.
ಸಮೀಕ್ಷೆಯೊಂದರ ಪ್ರಕಾರ ವಾಯು ಮಾಲಿನ್ಯದಿಂದಾಗಿ ಲಂಡನ್ನಲ್ಲಿ ವಾರ್ಷಿಕ 9 ಸಾವಿರ ಸಾವುಗಳು ಸಂಭವಿಸುತ್ತಿದೆ. ಮಾಲಿನ್ಯ ಪ್ರಮಾಣ ಅತ್ಯಧಿಕವಾಗಿರುವ ಜಗತ್ತಿನ ಪ್ರಮುಖ ನಗರಗಳ ಪೈಕಿ ಲಂಡನ್ ಕೂಡ ಒಂದು. ಡೀಸೆಲ್ ಕಾರುಗಳಿಂ ದಲೇ ಮಾಲಿನ್ಯ ಪ್ರಮಾಣ ಹೆಚ್ಚಿರುವುದರಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಮೇಯರ್ ಸಾದಿಕ್ ಖಾನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಲಿಂಗಸೂಗೂರು: ಕಾಲುವೆಗೆ ಬಿದ್ದು ಇಬ್ಬರು ಯುವಕರು ಮೃತ್ಯು…
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ