ಆರ್ಥಿಕ ಸಂಕಷ್ಟ: ಪಾಕ್ನಲ್ಲಿ ರಾತ್ರಿ 8.30ಕ್ಕೆ ಮಾಲ್ ಬಂದ್
Team Udayavani, Jan 5, 2023, 6:40 AM IST
ಇಸ್ಲಾಮಾಬಾದ್: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ, ಅದರಿಂದ ಪಾರಾಗಲು ಹೆಣಗಾಡುತ್ತಿರುವ ಪಾಕಿಸ್ತಾನದಲ್ಲಿ ದಿನಕ್ಕೊಂದು ಸವಾಲು ಎದುರಾಗುತ್ತಿದ್ದು, ಇತ್ತೀಚಿಗೆ ತನ್ನ ಪ್ರಜೆಗಳಿಗೆ ಚಹಾ ತ್ಯಜಿಸಿ ಎಂದಿದ್ದ ಪಾಕ್, ಈಗ ಇಂಧನ ಉಳಿತಾಯಕ್ಕಾಗಿ ಮಾಲ್, ಮಾರ್ಕೆಟ್, ಮದುವೆ ಮಂಟಪಗಳನ್ನು ಮುಚ್ಚುವುದಾಗಿ ಘೋಷಿಸಿದೆ.
ಪಾಕ್ ಸರ್ಕಾರದ ಇಂಧನ ಸಂರಕ್ಷಣಾ ಯೋಜನೆಯ ಅನ್ವಯ ಈ ನಿರ್ಣಯ ಕೈಗೊಳ್ಳಲಾಗಿದ್ದು, ಇನ್ನು ಮುಂದೆ ದೇಶದ ಎಲ್ಲ ಮಾರುಕಟ್ಟೆ ಹಾಗೂ ಮಾಲ್ಗಳನ್ನು ರಾತ್ರಿ 8.30ಕ್ಕೆ ಹಾಗೂ ಮದುವೆ ಮಂಟಪಗಳನ್ನು ರಾತ್ರಿ 10 ಗಂಟೆಗೆ ಮುಚ್ಚುವಂತೆ ಆದೇಶಿಸಲಾಗಿದೆ. ಇದರಿಂದ 60 ಶತಕೋಟಿ ರೂ. ಉಳಿತಾಯವಾಗಲಿದೆ ಎಂದು ರಕ್ಷಣಾ ಸಚಿವ ಖ್ವಾಜಾ ಆಸೀಫ್ ತಿಳಿಸಿದ್ದಾರೆ.
ಇದಲ್ಲದೆ, ಇಂಧನ ಉಳಿತಾಯಕ್ಕೆ ಸಂಬಂಧಿಸಿದಂತೆ ಇನ್ನೂ ಹಲವು ಕ್ರಮಗಳನ್ನು ಸರ್ಕಾರ ಕೈಗೊಂಡಿದ್ದು, ಫೆ. 1ರಿಂದ ಹೈ ವೋಲ್ಟೆಜ್ ಬಲ್ಬ್ಗಳು ಹಾಗೂ ಜುಲೈನಿಂದ ಅಸಮರ್ಥ ಫ್ಯಾನ್ಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲಿದೆ. ಇದರಿಂದ 22 ಶತಕೋಟಿ ರೂ.ಉಳಿತಾಯವಾಗಲಿದೆ. ದೇಶಾದ್ಯಂತ ಗ್ಯಾಸ್ ಗೀಸರ್ಗಳ ಬಳಕೆ ಕಡಿಮೆ ಮಾಡುವ ಮೂಲಕ 92 ಶತಕೋಟಿ ರೂ. ಹಾಗೂ ಬೀದಿ ದೀಪಗಳ ಕಡಿಮೆ ಬಳಕೆ ಮೂಲಕ 4 ಶತಕೋಟಿ ರೂ.ಗಳನ್ನು ಉಳಿತಾಯ ಮಾಡಲು ಯೋಜಿಸಲಾಗಿದೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ