ಅಮೆರಿಕ: ಭಾರತೀಯ ಮೂಲದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಗುಂಡಿನ ದಾಳಿಗೆ ಬಲಿ

Team Udayavani, Jun 17, 2019, 3:54 PM IST

ವಾಷಿಂಗ್ಟನ್:ಇಬ್ಬರು ಮಕ್ಕಳು ಸೇರಿದಂತೆ ಭಾರತೀಯ ಮೂಲದ ಒಂದೇ ಕುಟುಂಬದ ನಾಲ್ವರನ್ನು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಅಮೆರಿಕದ ವೆಸ್ಟ್ ಡೆಸ್ ಮೊಯಿನ್ಸ್ ನಲ್ಲಿ ನಡೆದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಸಿಎನ್ ಎನ್ ವರದಿ ಪ್ರಕಾರ, ಮೃತರನ್ನು ಚಂದ್ರಶೇಖರ್ ಶಂಕರ (44ವರ್ಷ), ಲಾವಣ್ಯ ಶಂಕರ(41ವರ್ಷ) ಹಾಗೂ 15 ವರ್ಷದ ಮತ್ತು 10 ವರ್ಷ ಇಬ್ಬರು ಗಂಡು ಮಕ್ಕಳು ಎಂದು ಗುರುತಿಸಲಾಗಿದೆ.ಮನೆಯೊಳಗೆ ನುಗ್ಗಿ ನಾಲ್ವರನ್ನೂ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಮೃತರ ದೇಹದೊಳಗೆ ಹಲವಾರು ಗುಂಡುಗಳು ಹೊಕ್ಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದೇವೆ. ನಮಗೆ ಸಾಕ್ಷ್ಯಾಧಾರಗಳು ಲಭ್ಯವಾದ ನಂತರ ಹಲವು ಪ್ರಶ್ನೆಗಳಿಗೆ ಉತ್ತರ ದೊರೆಯಲಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

ಕೊಲೆಗೆ ಕಾರಣ ಏನೆಂಬುದು ತಿಳಿದು ಬಂದಿಲ್ಲ, ಅಲ್ಲದೇ ಈವರೆಗೂ ಯಾರನ್ನೂ ಬಂಧಿಸಿಲ್ಲ ಎಂದು ವೆಸ್ಟ್ ಡೆನ್ಸ್ ಮೊಯಿನ್ಸ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ