ತೆರಿಗೆ ವಂಚಕರ ಸ್ವರ್ಗವಾಯಿತೆ ಲಂಡನ್ ?
ಪಂಡೋರಾ ದಾಖಲೆಗಳಲ್ಲಿ ಉಲ್ಲೇಖೀತರ ಹೂಡಿಕೆ ಇರುವುದು ಯು.ಕೆ. ರಾಜಧಾನಿಯಲ್ಲಿ
Team Udayavani, Oct 5, 2021, 8:48 PM IST
ಲಂಡನ್: ಯುನೈಟೆಡ್ ಕಿಂಗ್ಡಮ್ ರಾಜಧಾನಿ ಲಂಡನ್ ತೆರಿಗೆ ತಪ್ಪಿಲು ಉದ್ದೇಶಿಸುವ ವ್ಯಕ್ತಿಗಳ, ಸಂಸ್ಥೆಗಳ ಪ್ರಧಾನ ಕೇಂದ್ರವಾಗುತ್ತಿದೆಯಾ? ಅಂತಾರಾಷ್ಟ್ರೀಯ ತನಿಖಾ ಪತ್ರಕರ್ತರ ಒಕ್ಕೂಟ ಪಂಡೊರಾ ದಾಖಲೆಗಳ ಮೂಲಕ ಬಿಡುಗಡೆ ಮಾಡಿದ ವ್ಯಕ್ತಿಗಳ ಮತ್ತು ಸಂಸ್ಥೆಗಳ ಹೂಡಿಕೆಯ ವಿವರಗಳನ್ನು ಗಮನಿಸಿದರೆ ಈ ಅನುಮಾನ ಮೂಡುತ್ತದೆ.
ಜಗತ್ತಿನ ವಿವಿಧ ರಾಷ್ಟ್ರಗಳ ಪ್ರಮುಖ ಉದ್ಯಮಿಗಳು, ಸರ್ಕಾರಿ ಮುಖ್ಯಸ್ಥರು, ಸೆಲೆಬ್ರಿಟಿಗಳು ತಮ್ಮ “ಸಂಪಾದನೆ’ ಬಹು ಭಾಗವನ್ನು ಲಂಡನ್ನಲ್ಲಿಯೇ ಹೂಡಿಕೆ ಮಾಡುತ್ತಿದ್ದಾರೆ. ಹೀಗಾಗಿ, ಯು.ಕೆ.ಯ ರಾಜಧಾನಿ ತೆರಿಗೆ ತಪ್ಪಿಸಿ ಹೂಡಿಕೆ ಮಾಡುವವರಿಗೆ ಆದ್ಯತೆಯ ತಾಣ ಎಂಬ ಭಾವನೆ ವ್ಯಕ್ತವಾಗಲಾರಂಭಿಸಿದೆ.
ಬ್ರಿಟನ್ನ ಕಾನೂನು ಪ್ರಕಾರ ಆಸ್ತಿ ಖರೀದಿ ನ್ಯಾಯಯುತವೇ ಆಗಿದೆ. ಆದರೆ, ಕೆಲವು ಶ್ರೀಮಂತರು ತೆರಿಗೆ ತಪ್ಪಿಸುವ ನಿಟ್ಟಿನಲ್ಲಿ ನಿಗೂಢ ಕ್ರಮಗಳನ್ನು ಅನುಸರಿಸುತ್ತಾರೆ. 2019ರಲ್ಲಿ ಗ್ಲೋಬಲ್ ವಿಟ್ನೆಸ್ ಎಂಬ ಜಾಗತಿಕ ಪಾರದರ್ಶಕ ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಇಂಗ್ಲೆಂಡ್ ಮತ್ತು ವೇಲ್ಸ್ನಲ್ಲಿ ಇರುವ 87 ಸಾವಿರ ಆಸ್ತಿ ಅನಾಮಧೇಯರದ್ದೇ ಆಗಿದೆ.
ಇದೇ ವೇಳೆ, ಭಾರತದಲ್ಲಿ ಪಂಡೋರಾ ಪ್ರಕರಣ ಸಂಬಂಧದ ತನಿಖೆಯನ್ನು ಬಹು ಸಂಸ್ಥೆಗಳ ಸಮೂಹ (ಸಿಬಿ ಡಿಟಿ, ಇಡಿ, ಆರ್ಬಿಐ, ಎಫ್ಐಯು) ನಡೆಸಲಿದೆ ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ತಿಳಿ ಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
ಚನ್ನಮ್ಮನ ಕಿತ್ತೂರು: ಮಹಾನ್ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ
ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ
ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!