ಇಸ್ರೋ ಚಂದ್ರಯಾನ; ನಾಸಾ ವಿಜ್ಞಾನಿಗಳಿಗೆ ಟೆನ್ಷನ್‌!

ಚಂದ್ರನ ದ.ಧ್ರುವದ ನೆಲ ಹೇಗಿದೆ? ಉತ್ತರ ಪಡೆಯಲು ವಿಜ್ಞಾನಿಗಳ ಕಾತರ!

Team Udayavani, Sep 6, 2019, 9:55 PM IST

ವಾಷಿಂಗ್ಟನ್‌: ಚಂದ್ರಯಾನ 2ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯುವುದನ್ನು ಜಗತ್ತೇ ಎದುರು ನೋಡುತ್ತಿದೆ. ತಡರಾತ್ರಿ ಇಸ್ರೋ ನಡೆಯುಸುವ ಈ ಕಾರ್ಯಕ್ರಮಕ್ಕೆ ಸಾಕಷ್ಟು ಸಿದ್ಧತೆ ನಡೆದಿದೆ.

ಏತನ್ಮಧ್ಯೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯುವುದು ಮತ್ತು ಪ್ರಗ್ಯಾನ್‌ ರೋವರ್‌ ಸಂಚಾರದ ಬಗ್ಗೆ ನಾಸಾ ವಿಜ್ಞಾನಿಗಳಿಗೆ ವಿಪರೀತ ಕುತೂಹಲ, ಕಾತರ ಕಾಡಿದೆ. ಒಂದರ್ಥದಲ್ಲಿ ಇದೇ ಅವರ ಹೃದಯಬಡಿತವನ್ನೂ ಹೆಚ್ಚಿಸಿದೆ.

ಕಾರಣ ಈವರೆಗೆ ಯಾವುದೇ ಬಾಹ್ಯಾಕಾಶ ಸಂಸ್ಥೆಗಳು ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಿಲ್ಲ. ಅಲ್ಲಿ ಏನಿದೆ? ಹೇಗಿದೆ? ಎಂಬುದೂ ತಿಳಿದಿಲ್ಲ. ಭಾರತ ಯಶಸ್ವಿಯಾದದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ಆ ಭಾಗದಲ್ಲಿ ಹೆಚ್ಚಿನ ಸಂಶೋಧನೆಗೆ ದೇಶಗಳು ಮುಂದಾಗಬಹುದು. ಅಲ್ಲದೇ ಈವರೆಗೆ ಅಲ್ಲಿರಬಹುದಾದ ವಾತಾವರಣ, ಜಾಗದ ಬಗ್ಗೆ ವಿಜ್ಞಾನಿಗಳು ಈವರೆಗೆ ತಿಳಿದುಕೊಂಡಿರುವುದು ಸತ್ಯವೇ ಎಂಬುದು ಖಾತರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕುತೂಹಲ ಮೂಡಿದೆ.

ಸಂಪೂರ್ಣ ಹೊಸ ಪ್ರದೇಶದಲ್ಲಿ ವಿಕ್ರಂ ಲ್ಯಾಂಡರ್‌ ಇಳಿಯುತ್ತಿದ್ದು, ಕುತೂಹಲ ಮೂಡಿದೆ ಎಂದು ಜಾನ್‌ ಹಾಪ್‌ಕಿನ್ಸ್‌ ವಿವಿಯ ಭೌತಶಾಸ್ತ್ರ ಲ್ಯಾಬೋರೇಟರಿಯ ಖಗೋಳ ವಿಜ್ಞಾನಿ ಬ್ರೆಟ್‌ ಡೆನೆವಿ ಹೇಳಿದ್ದಾರೆ. ಉಪಗ್ರಹಗಳ ಮೂಲಕ ಚಂದ್ರನ ನೆಲದ ಬಗ್ಗೆ ಸಾಕಷ್ಟು ಶೋಧ ನಡೆದಿದ್ದರೂ, ಲ್ಯಾಂಡರ್‌ ಇಳಿಸಿ ಶೋಧ ನಡೆಸುವುದು ಹೆಚ್ಚಿನ ಮಾಹಿತಿ ನೀಡುತ್ತದೆ ಎಂದು ಅವರು ಹೇಳಿದ್ದಾರೆ. ಅಲ್ಲದೇ ಚಂದ್ರಯಾನ 2 ಇಡೀ ಯೋಜನೆ ವೆಚ್ಚ 2014 ಹಾಲಿವುಡ್‌ ಸಿನೆಮಾ ಇಂಟರ್‌ಸ್ಟೆಲ್ಲರ್‌ಗೂ ಕಡಿಮೆಯದ್ದು ಎಂದು ಹೇಳಿದ್ದಾರೆ. ಚಂದ್ರಯಾನ 2 ನಲ್ಲಿ 13 ಉಪಕರಣಗಳು ಇಸ್ರೋ ನಿರ್ಮಿತವಾದ್ದಾದರೆ 1 ನಾಸಾ ನಿರ್ಮಿತ ಉಪಕರಣವಿದೆ.

ಈಗಾಗಲೇ ಚಂದ್ರಯಾನ 2ರ ಮಹತ್ವದ ವಿದ್ಯಮಾನ ನೇರಪ್ರಸಾರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಅಮೆರಿದಲ್ಲೂ ಭಾರತೀಯ ರಾಯಭಾರ ಕಚೇರಿ ಸ್ಥಳೀಯ ಕಾಲಮಾನ ವೀಕ್ಷಣೆಗೆ ವ್ಯವಸ್ಥೆ ಮಾಡಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ