‘ಬೋರಿಂಗ್’ ಕೆಲಸ: ಬಾಸ್ ಮೇಲೇ ದೂರು ಕೊಟ್ಟು 33 ಲಕ್ಷ ರೂ. ಪರಿಹಾರವನ್ನೂ ಪಡೆದ ಕಿಲಾಡಿ!
Team Udayavani, Jan 13, 2022, 7:20 AM IST
ಸಾಂದರ್ಭಿಕ ಚಿತ್ರ.
ಪ್ಯಾರಿಸ್: “ಅಯ್ಯೋ, ಬೋರಿಂಗ್ ಕೆಲಸ’ ಇದು ಈಗಿನ ಸಾಕಷ್ಟು ಉದ್ಯೋಗಿಗಳ ದೂರು. ಇದೇ ರೀತಿ ದೂರನ್ನು ಹೊತ್ತಿದ್ದ ಪ್ಯಾರಿಸ್ನ ಕಂಪನಿಯೊಂದರ ಸಿಬ್ಬಂದಿಯೊಬ್ಬ, ತನ್ನ ಬಾಸ್ ವಿರುದ್ಧವೇ ಮೊಕದ್ದಮೆ ಹೇರಿ, ಕಂಪನಿಯಿಂದ 33 ಲಕ್ಷ ರೂ. ಪರಿಹಾರ ಪಡೆದಿದ್ದಾನೆ!
ಹೌದು. ಫ್ರೆಡೆರಿಕ್ ಡೆಸ್ನಾರ್ಡ್ ಹೆಸರಿನ ವ್ಯಕ್ತಿ 2015ರವರೆಗೆ ಇಂಟರ್ಪರ್ಫ್ಯೂಮ್ಸ್ ಹೆಸರಿನ ಸಂಸ್ಥೆಯಲ್ಲಿ ಕೆಲಸ ಮಾಡಿದ್ದಾನೆ. ಆತನಿಂದಾಗಿ ಕ್ಲೈಂಟ್ ಒಬ್ಬರು ತಪ್ಪಿಹೋದರು ಎನ್ನುವ ಕಾರಣಕ್ಕೆ ಆತನನ್ನು ಅತ್ಯಂತ ಬೋರಿಂಗ್ ವಿಭಾಗದಲ್ಲಿ ಮ್ಯಾನೇಜರ್ ಮಾಡಲಾಗಿತ್ತು. ಅದರಿಂದಾಗಿ ಆತ ಬೇಸತ್ತಿದ್ದನಂತೆ. ನಂತರ ಕಾರು ಅಪಘಾತಕ್ಕೆ ಸಿಲುಕಿದ್ದ ಆತ 7 ತಿಂಗಳು ರಜೆ ಹಾಕಿದ ಎನ್ನುವ ಕಾರಣಕ್ಕೆ ಕೆಲಸದಿಂದ ತೆಗೆಯಲಾಗಿದೆ.
ಇದನ್ನೂ ಓದಿ:ಮಲೈಕಾ ಜತೆಗಿನ ಬ್ರೇಕ್ ಅಪ್ ವದಂತಿ ತಳ್ಳಿಹಾಕಿದ ಅರ್ಜುನ್ ಕಪೂರ್
ಕೆಲಸ ಬಿಟ್ಟ ನಂತರ ಆತ, ಕಂಪನಿ ತನಗೆ ಬೋರಿಂಗ್ ಕೆಲಸ ಕೊಟ್ಟಿದ್ದಾಗಿ ಮೊಕದ್ದಮೆ ಹೂಡಿದ್ದು, ನಾಲ್ಕು ವರ್ಷಗಳ ನಂತರ ಅದರ ತೀರ್ಪು ಬಂದಿದೆ. ಆತನಿಗೆ 33 ಲಕ್ಷ ರೂ. ಪರಿಹಾರವನ್ನು ಕಂಪನಿಯಿಂದಲೇ ಕೊಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ