ಇನ್ನಾದರೂ ನರ ಹತ್ಯೆ ನಿಲ್ಲಿಸಿ ! ಮ್ಯಾನ್ಮಾರ್‌ಗೆ ವಿಶ್ವಸಂಸ್ಥೆ ಕೋರ್ಟ್‌ನಲ್ಲಿ ತಾಕೀತು

2017ರ ಕಾರ್ಯಾಚರಣೆ ವಿರುದ್ಧ ಸೂಕಿ ಸಮ್ಮುಖದಲ್ಲೇ ವಿಚಾರಣೆ

Team Udayavani, Dec 10, 2019, 10:47 PM IST

ದ ಹೇಗ್‌: ಮ್ಯಾನ್ಮಾರ್‌ ಸರ್ಕಾರ ರೊಹಿಂಗ್ಯಾ ಮುಸ್ಲಿಮರ ವಿರುದ್ಧ ದಮನಕಾರಿ ನೀತಿ ಅನುಸರಿಸುತ್ತಿರುವುದಕ್ಕೆ ವಿಶ್ವಸಂಸ್ಥೆಯ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ನರ ಹತ್ಯೆಯನ್ನು ನಿಲ್ಲಿಸುವಂತೆ ನ್ಯಾಯಾಲಯ ನೊಬೆಲ್‌ ಪುರಸ್ಕೃತೆ ಆ್ಯಂಗ್‌ ಸ್ಯಾನ್‌ ಸೂಕಿ ಅವರಿಗೆ ಸ್ಪಷ್ಟ ಮಾತುಗಳಲ್ಲಿ ಹೇಳಿದೆ. ಇದರಿಂದಾಗಿ ಸೂಕಿ ಅವರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗಿದೆ.

ಮಂಗಳವಾರ ನಡೆದಿದ್ದ ವಿಚಾರಣೆ ವೇಳೆ ಸೂಕಿ ಸಮ್ಮುಖದಲ್ಲಿಯೇ 2017ರಲ್ಲಿ ನಡೆದಿದ್ದ ಕಾರ್ಯಾಚರಣೆಯ ಫೋಟೋ, ದೌರ್ಜನ್ಯ ಆರೋಪಗಳ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಅದಕ್ಕೆ ಪೂರಕವಾಗಿ ಮ್ಯಾನ್ಮಾರ್‌ ರಾಜಧಾನಿ ಯಾಂಗೂನ್‌ನಲ್ಲಿ ಸಾವಿರಾರು ಮಂದಿ ಮೌನ ಪ್ರತಿಭಟನೆ ನಡೆಸಿ ತಮ್ಮ ನಾಯಕಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

2017ರಲ್ಲಿ ಮ್ಯಾನ್ಮಾರ್‌ ಸರ್ಕಾರ ಅನುಸರಿಸಿದ್ದ ದಮನಕಾರಿ ನೀತಿಯ ಅನ್ವಯ 7.40 ಲಕ್ಷಕ್ಕೂ ಅಧಿಕ ರೊಹಿಂಗ್ಯಾ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ್ದರು. ಅದರ ವಿರುದ್ಧ ಆಫ್ರಿಕಾ ಖಂಡದ ರಾಷ್ಟ್ರ ಗಾಂಬಿಯಾ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಸಮುದಾಯದ ಗಮನ ಸೆಳೆದು, ವಿಶ್ವಸಂಸ್ಥೆಯ ಕೋರ್ಟ್‌ಗೆ ದೂರು ನೀಡಿತ್ತು.

ಅಲ್ಲಿನ ನ್ಯಾಯ ಖಾತೆ ಸಚಿವ ಅಬೂಬಕರ್‌ ತಂಬಾದೌ, ಮ್ಯಾನ್ಮಾರ್‌ ಸರ್ಕಾರ 1948ರ ನರಹತ್ಯೆ ನಿಷೇಧ ಸಮ್ಮೇಳನದ ಒಪ್ಪಂದ ಉಲ್ಲಂ ಸಿದೆ. ಅದೇ ರೀತಿಯ ಮತ್ತೂಂದು ಘಟನೆ ಶೀಘ್ರದಲ್ಲಿಯೇ ನಡೆಯಲಿದೆ. ಅದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ ಎಂದು ಪ್ರಬಲವಾಗಿ ವಾದಿಸಿದರು. ಮ್ಯಾನ್ಮಾರ್‌ ಸರ್ಕಾರದ ವಿರುದ್ಧ ಇರುವ ಆರೋಪಗಳ ಬಗ್ಗೆ ನೊಬೆಲ್‌ ಪುರಸ್ಕೃತೆ ಬುಧವಾರ ಸಮಗ್ರ ಉತ್ತರ ನೀಡಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ