ವೈದ್ಯಕೀಯ ನೆಲೆಯಲ್ಲಿ ಕಾಯಂ ಬೇಲ್: ಷರೀಫ್ ಮನವಿ ತಿರಸ್ಕರಿಸಿದ ಪಾಕ್ ಸುಪ್ರೀಂ
Team Udayavani, May 3, 2019, 4:10 PM IST
ಇಸ್ಲಾಮಾಬಾದ್ : ಅನಾರೋಗ್ಯದಿಂದ ಬಳಲುತ್ತಿರುವ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರು ವೈದ್ಯಕೀಯ ನೆಲೆಯಲ್ಲಿ ತನಗೆ ಕಾಯಂ ಬೇಲ್ ನೀಡಬೇಕೆಂದು ಸಲ್ಲಿಸಿದ್ದ ಮನವಿಯನ್ನು ಪಾಕ್ ಸರ್ವೋಚ್ಚ ನ್ಯಾಯಾಲಯ ವಜಾ ಮಾಡಿದೆ. ಸದ್ಯಕ್ಕಂತೂ ನಿಮಗೆ ಪ್ರಾಣಾಪಾಯ ಇಲ್ಲ ಎಂದು ಸುಪ್ರೀಂ ಕೋರ್ಟ್ ಇದಕ್ಕೆ ಕಾರಣ ಕೊಟ್ಟಿದೆ.
69 ವರ್ಷ ಪ್ರಾಯ ಷರೀಫ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ಕಳೆದ ಮಾರ್ಚ್ 26ರಂದು ವೈದ್ಯಕೀಯ ಚಿಕಿತ್ಸೆ ಪಡೆಯುವುದಕ್ಕಾಗಿ ಆರು ವಾರಗಳ ಬೇಲ್ ಮಂಜೂರು ಮಾಡಿತ್ತು.
ಅನಂತರ ಎಪ್ರಿಲ್ 27ರಂದು ಷರೀಫ್ ತಾನು ತೀವ್ರ ಖನ್ನತೆಯಿಂದ ಬಳಲುತ್ತಿದ್ದು ತನಗೆ ಆಕಸ್ಮಿಕ ಸಾವು ಸಂಭವಿಸಬಹುದು ಎಂಬ ಕಾರಣ ಒಡ್ಡಿ ಕಾಯಂ ಬೇಲ್ ಕೋರಿದ್ದರು.
ವರಿಷ್ಠ ನ್ಯಾಯಮೂರ್ತಿ ಆಸಿಫ್ ಸಯೀದ್ ಖೋಸಾ ನೇತೃತ್ವದ ಮೂವರು ಸದಸ್ಯರ ಪೀಠವು ಷರೀಫ್ ಅವರು ಬ್ರಿಟನ್ನಲ್ಲಿ ಚಿಕಿತ್ಸೆ ಪಡೆಯುವ ಸಲುವಾಗಿ ಮಾಡಿಕೊಂಡಿದ್ದ ಕಾಯಂ ಬೇಲ್ ಮನವಿಯನ್ನು ತಿರಸ್ಕರಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು
India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ