ಸ್ಟಾರ್ಟಪ್‌ ಬಳಸಿಕೊಳ್ಳಿ

ಜಾಗತಿಕ ಸಿಇಒಗಳ ಜತೆ ಮಾತುಕತೆ ವೇಳೆ ಪ್ರಧಾನಿ ಮೋದಿ ಕರೆ

Team Udayavani, Sep 27, 2019, 6:15 AM IST

ನ್ಯೂಯಾರ್ಕ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ನ್ಯೂಜಿಲೆಂಡ್‌ ಪ್ರಧಾನಿ ಜೆಸಿಂಡಾ ಆರ್ಡನ್‌ರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು.

ನ್ಯೂಯಾರ್ಕ್‌: ಭಾರತದ ಸ್ಟಾರ್ಟಪ್‌ ವ್ಯವಸ್ಥೆಯನ್ನು ಬಳಸಿಕೊಂಡು ಪೌಷ್ಟಿಕಾಂಶ ಮತ್ತು ತ್ಯಾಜ್ಯ ನಿರ್ವಹಣೆಯಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಾಗತಿಕ ಸಿಇಒಗಳು ಮತ್ತು ಅಮೆರಿಕದ ಪ್ರಮುಖ ಉದ್ಯಮಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದ್ದಾರೆ.

ವಿಶ್ವದ ಪ್ರಮುಖ 42 ಸಿಇಒಗಳ ಜತೆ ಸಭೆ ನಡೆಸಿದ ಅವರು, ಭಾರತದಲ್ಲಿ ರಾಜಕೀಯ ಪರಿಸ್ಥಿತಿ ಮತ್ತು ನೀತಿ ನಿರೂಪಣೆಗಳಲ್ಲಿ ಸ್ಥಿರತೆ ಇದೆ ಎಂದಿದ್ದಾರೆ. ಸರಕಾರದ ನೀತಿಗಳು ಅಭಿವೃದ್ಧಿ ಮತ್ತು ಪ್ರಗತಿ ಪರವಾಗಿದೆ. ಭಾರತವು ಪ್ರವಾಸೋದ್ಯಮ, ಪ್ಲಾಸ್ಟಿಕ್‌ ಮರುಬಳಕೆ ಮತ್ತು ತ್ಯಾಜ್ಯ ನಿರ್ವಹಣೆ ಉಪಕ್ರಮಗಳನ್ನು ಕೈಗೊಂಡಿದೆ ಎಂದಿದ್ದಾರೆ.

ಉಗ್ರವಾದವೇ ಪಾಕ್‌ನ ಆಡಳಿತ: ಪಾಕಿಸ್ಥಾನವು ಉಗ್ರವಾದವನ್ನೇ ತನ್ನ ಆಡಳಿತ ವನ್ನಾಗಿಸಿಕೊಂಡಿದೆ. ಹೀಗಾಗಿ ಇಂತಹ ದೇಶದೊಂದಿಗೆ ಭಾರತ ಮಾತುಕತೆ ನಡೆ ಸಲಾಗದು ಎಂದು ಅವರು ಹೇಳಿದ್ದಾರೆ. ವಿದೇಶಾಂಗ ವ್ಯವಹಾರಗಳ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್‌, ಉಗ್ರವಾದವನ್ನು ಅವರು(ಪಾಕ್‌) ಬೆಂಬಲಿಸುತ್ತಾರೆ. ಆದರೆ ಬೆಂಬಲಿಸುತ್ತಿಲ್ಲ ಎಂದು ತೋರಿಸಿಕೊಳ್ಳುತ್ತಾರೆ. ಇದನ್ನು ನಿರ್ವಹಿಸುವುದು ಅತ್ಯಂತ ದೊಡ್ಡ ಸವಾಲು ಎಂದು ಹೇಳಿದ್ದಾರೆ.

ಆಗಸ್ಟ್‌ 5 ಕ್ಕೂ ಮೊದಲು ಕಾಶ್ಮೀರದ ಪರಿಸ್ಥಿತಿ ಅಸ್ತವ್ಯಸ್ತವಾಗಿತ್ತು. ಈ ಭಾಗದಲ್ಲಿ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ಬದಲಿಸಲು ವಿಭಿನ್ನ ಪ್ರಯತ್ನವನ್ನು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

ಇನ್ನೊಂದೆಡೆ ವಿಶ್ವಸಂಸ್ಥೆ ಭದ್ರತಾ ಸಮಿತಿಯ ಸಚಿವರ ಮಟ್ಟದ ಚರ್ಚೆಯಲ್ಲಿ ಭಾಗವಹಿಸಿದ್ದ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ. ಮುರಳೀಧರನ್‌, ಉಗ್ರರನ್ನು ಪ್ರೋತ್ಸಾಹಿಸುವ ಮತ್ತು ಅವರಿಗೆ ಹಣಕಾಸು ಸೌಲಭ್ಯ ಒದಗಿಸುವ ದೇಶಗಳನ್ನು ಗುರುತಿಸಬೇಕು ಮತ್ತು ಅಂತಹ ದೇಶಗಳನ್ನು ಹೊಣೆಗಾರರನ್ನಾಗಿಸಬೇಕು ಎಂದಿದ್ದಾರೆ.

ಹೋಲಿಕೆ ನಿಲ್ಲಿಸಬೇಕು ಎಂದು ಇಮ್ರಾನ್‌: ಇಸ್ಲಾಂ ಜತೆಗೆ ಉಗ್ರವಾದವನ್ನು ಹೋಲಿಸುವ ಪ್ರಯತ್ನವನ್ನು ನಾವು ತಡೆಯಬೇಕು ಎಂದು ಪಾಕಿಸ್ಥಾನ ಪ್ರಧಾನಿ ಇಮ್ರಾನ್‌ ಖಾನ್‌ ಹೇಳಿದ್ದಾರೆ.

ವಿಶ್ವಸಂಸ್ಥೆಯ ಮಹಾಧಿವೇಶನದ ಹಿನ್ನೆಲೆಯಲ್ಲಿ ನಡೆದ ಸಮ್ಮೇಳನದಲ್ಲಿ ಮಾತನಾಡಿದ ಅವರು, ಯಾವ ಧರ್ಮವೂ ಉಗ್ರವಾದ ವನ್ನು ಪೋಷಿಸುವುದಿಲ್ಲ. ಆದರೆ ಬಹುತೇಕ ಎಲ್ಲ ಉಗ್ರವಾದವೂ ರಾಜಕೀಯದೊಂದಿಗೆ ಸಂಪರ್ಕ ಹೊಂದಿದೆ ಎಂದು ಹೇಳಿದ್ದಾರೆ.

ಹಲವು ನಾಯಕರೊಂದಿಗೆ ಮೋದಿ ಸಭೆ: ನ್ಯೂಜಿಲೆಂಡ್‌ ಹಾಗೂ ಅರ್ಮೇನಿಯಾ ಸೇರಿದಂತೆ ಹಲವು ದೇಶಗಳ ಮುಖಂಡ ರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ.

ಉಗ್ರವಾದ ತಡೆ, ರಕ್ಷಣೆಯಲ್ಲಿ ಭಾರತಕ್ಕೆ ನೆರವಾಗುವುದರ ಜತೆಗೆ, ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಶಾಶ್ವತ ಸದಸ್ಯತ್ವ ಒದಗಿಸುವ ನಿಟ್ಟಿನಲ್ಲಿ ಭಾರತಕ್ಕೆ ನೆರವು ವಿಚಾರವನ್ನು ಚರ್ಚಿಸಲಾಗಿದೆ. ಅರ್ಮೇನಿಯಾದ ಪ್ರಧಾನಿ ನಿಕೋಲ್‌ ಪಶಿನ್ಯನ್‌ ಹಾಗೂ ನ್ಯೂಜಿಲೆಂಡ್‌ನ‌ ಪ್ರಧಾನಿ ಜಸಿಂದಾ ಆರ್ಡೆನ್‌ ಜತೆಗೆ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಪುಲ್ವಾಮಾ ಮತ್ತು ಕ್ರೈಸ್ಟ್‌ಚರ್ಚ್‌ ದಾಳಿಯನ್ನು ಮೋದಿ ಮತ್ತು ಜಸಿಂದಾ ಖಂಡಿಸಿದರು.

ಉಗ್ರನ ಖರ್ಚಿಗೆ ದುಡ್ಡು ಕೇಳಿದ ಪಾಕ್‌!
ಹೊಸದಿಲ್ಲಿ: ಒಂದೆಡೆ ಉಗ್ರವಾದವನ್ನು ನಾವು ಪೋಷಿಸುತ್ತಿಲ್ಲ ಎಂದು ಹೇಳುತ್ತಲೇ ಮತ್ತೂಂದೆಡೆ ಮುಂಬಯಿ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ಪರ ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಲಾಬಿ ನಡೆಸಿದೆ. ಮಾಸಿಕ ವೆಚ್ಚಕ್ಕಾಗಿ ಹಫೀಜ್‌ ಕುಟುಂಬಕ್ಕೆ ಅಗತ್ಯವಿರುವ ಹಣವನ್ನು ಬ್ಯಾಂಕ್‌ ಖಾತೆಯಿಂದ ಹಿಂಪಡೆಯಲು ಅವಕಾಶ ಕೊಡುವಂತೆ ವಿಶ್ವಸಂಸ್ಥೆಯಲ್ಲಿ ಮನವಿ ಮಾಡಿರುವ ಪಾಕಿಸ್ಥಾನ, ವಿಶ್ವಸಂಸ್ಥೆಯಿಂದ ಅದಕ್ಕೆ ಅನುಮತಿಯನ್ನೂ ಪಡೆದುಕೊಂಡಿದೆ. ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ಸಯೀದ್‌ನ ಎಲ್ಲ ಬ್ಯಾಂಕ್‌ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ಹೀಗಾಗಿ ಹಫೀಜ್‌ ಯಾವುದೇ ಹಣವನ್ನು ಬ್ಯಾಂಕ್‌ ಖಾತೆಯಿಂದ ಹಿಂಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಈಗ ಮಾಸಿಕ 1.50 ಲಕ್ಷ ಪಾಕ್‌ ರೂಪಾಯಿ ಹಿಂಪಡೆಯಲು ಅವಕಾಶ ನೀಡುವಂತೆ ಪಾಕಿಸ್ಥಾನದ ಕೋರಿಕೆಗೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಅನುಮತಿ ನೀಡಿದೆ.

900 ಕೋಟಿ ರೂ. ಸಾಲ ಘೋಷಣೆ
ಕೆರಿಬಿಯನ್‌ ದೇಶಗಳ ಸಮೂಹಕ್ಕೆ 900 ಕೋಟಿ ರೂ. ಸಾಲ ಹಾಗೂ 100 ಕೋಟಿ ರೂ. ಅನುದಾನವನ್ನು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ಸಮುದಾಯ ಅಭಿವೃದ್ಧಿ ಯೋಜನೆಗಳಿಗೆ 100 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದು, ಸೌರ, ನವೀಕರಿಸಬಹುದಾದ ಇಂಧನ ಮತ್ತು ತಾಪಮಾನ ವೈಪರೀತ್ಯ ಸಂಬಂಧಿ ಕಾಮಗಾರಿಗಳಿಗೆ 900 ಕೋಟಿ ರೂ.ಗಳನ್ನು ಸಾಲ ರೂಪದಲ್ಲಿ ನೀಡುವುದಾಗಿ ಹೇಳಿದ್ದಾರೆ. ನ್ಯೂಯಾರ್ಕ್‌ ನಲ್ಲಿ ನಡೆದ ಪ್ರಥಮ ಭಾರತ-ಕೆರಿಕೋಮ್‌ ನಾಯ ಕರ ಸಮ್ಮೇಳನದಲ್ಲಿ ಭಾಗವಹಿಸಿದ ವೇಳೆ ಅವರು ಈ ಘೋಷಣೆ ಮಾಡಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಎಲ್ಲರ ಮನೆಯಂತೆ ನಮ್ಮ ಮನೆಯಲ್ಲಿ ಊಟ-ತಿಂಡಿ ನಡೆಯುವುದಿಲ್ಲ. ಯಾಕೆಂದರೆ, ಈ ದಿನ ತಯಾರಿಸಿದ ಅಡುಗೆ ಮತ್ತೂಮ್ಮೆ ನಮ್ಮ ಮನೆಯಲ್ಲಿ ತಯಾರಾಗೋದು ಇನ್ನು ಒಂದು ತಿಂಗಳ...

  • ಬೇಸಿಗೆಗಾಲದಲ್ಲಿ ತಂಪಾಗಿಯೂ ಚಳಿಗಾಲದಲ್ಲಿ ಬೆಚ್ಚಗೂ ಇಡುವ ಮನೆ ಯಾವುದು ಗೊತ್ತಾ? ಅದು ಮಣ್ಣಿನ ಗೋಡೆಯ ಹುಲ್ಲಿನ ಮನೆ. ಆದರೆ ಇಂದಿನ ದಿನಗಳಲ್ಲಿ ಕಾಂಕ್ರೀಟಿನ...

  • ತುಟಿ ಕಪ್ಪಾಗಿದೆ. ಏನು ಮಾಡಿದರೂ ಅಂದ ಗಾಣಿಸಲು ಆಗುತ್ತಿಲ್ಲ- ಇದು ಹಲವು ಹುಡುಗಿಯರ ಗೊಣಗಾಟ. ನೀನು ಸ್ಮೋಕ್‌ ಮಾಡ್ತೀಯಾ? ಕಾಫಿ, ಟೀ ಜಾಸ್ತಿ ಕುಡಿತೀಯ ಅನ್ಸುತ್ತೆ,...

  • ಬೆಂಗಳೂರು: ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳ ಪೈಕಿ 13 ಕ್ಷೇತ್ರಗಳಲ್ಲಿ ಅನರ್ಹಗೊಂಡ ಶಾಸಕರು ಬಿಜೆಪಿ ಯಿಂದ ಕಣಕ್ಕಿಳಿದಿದ್ದು, ಹಲವು ಕ್ಷೇತ್ರಗಳಲ್ಲಿ...

  • "ಅಕ್ಕಾ, ಪ್ಲಾಸ್ಟಿಕ್‌ ಕೊಡ್ರಿ, ಅಣ್ಣಾ, ಪ್ಲಾಸ್ಟಿಕ್‌ ಕೊಡ್ರಿ' ಅಂತ ಮನೆ ಮನೆ ಸುತ್ತುವ ಈ ಹುಡುಗಿ, ಗುಜರಿ ಆಯುವವಳಲ್ಲ. ಇವಳು, ಪ್ಲಾಸ್ಟಿಕ್‌ ವಿರುದ್ಧ ಸಮರ ಸಾರಿರುವ...