ಬಾಲಕಿಗೆ ಲೈಂಗಿಕ ಕಿರುಕುಳ: ಭಾರತ ಮೂಲದ ವೈದ್ಯ ಸೆರೆ
Team Udayavani, Aug 7, 2017, 8:15 AM IST
ನ್ಯೂಯಾರ್ಕ್: ವಿಮಾನದಲ್ಲಿ ತನ್ನ ಪಕ್ಕದ ಆಸನದಲ್ಲಿ ಕುಳಿತಿದ್ದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಭಾರತ ಮೂಲದ ವೈದ್ಯನೊಬ್ಬನನ್ನು ಎಫ್ಬಿಐ ಬಂಧಿಸಿದೆ. ಬಂಧಿತನನ್ನು ವಿಜಯ್ಕುಮಾರ್ ಕೃಷ್ಣಪ್ಪ (28) ಎಂದು ಗುರುತಿಸಿದ್ದು, ಈತನ ಮೂಲ ಕರ್ನಾಟಕ, ತಮಿಳುನಾಡು ಅಥವಾ ಆಂಧ್ರ ಇರಬಹುದು ಎನ್ನಲಾಗಿದೆ.
ಜು.23ರಂದು ಸೀಟಲ್ನಿಂದ ನ್ಯೂಜೆರ್ಸಿಗೆ ಹೊರಟಿದ್ದ ಯುನೈಟೆಡ್ ಏರ್ಲೈನ್ಸ್ ವಿಮಾನದಲ್ಲಿ ಘಟನೆ ನಡೆದಿದೆ. ವಾಷಿಂಗ್ಟನ್ ಮೂಲದ 16 ವರ್ಷದ ಬಾಲಕಿ, ಪ್ರಯಾಣದ ನಡುವೆ ನಿದ್ದೆಗೆ ಜಾರಿದ್ದಳು. ಈ ವೇಳೆ ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿ ಬಾಲಕಿ ತೊಡೆ ಮೇಲೆ ಕೈ ಇರಿಸಿದ್ದಾನೆ. ತಕ್ಷಣ ಬಾಲಕಿಗೆ ಎಚ್ಚರವಾಗಿದ್ದು, ಕೈ ತೆಗೆದುಕೊಂಡಿದ್ದಾನೆ.
ವಿಷಯವನ್ನು ವಿಮಾನ ಸಿಬಂದಿಗೆ ತಿಳಿಸಿದ ಬಾಲಕಿ ಆಸನ ಬದಲಿಸಿಕೊಂಡಿದ್ದಾಳೆ. ನೇವಾಕ್ಗೆ ಬಂದಿಳಿಯುತ್ತಿದ್ದಂತೆ ಪೋಷಕರಿಗೆ ಬಾಲಕಿ ವಿಷಯ ತಿಳಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆಯದೆ ಬಿಟ್ಟ ಯುನೈಟೆಡ್ ಏರ್ಲೈನ್ಸ್ ವಿರುದ್ಧ ಬಾಲಕಿ ಪೋಷಕರು ಎಫ್ಬಿಐಗೆ ದೂರು ನೀಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ