ಭಾರತ-ಪಾಕ್ ಯುದ್ಧಕ್ಕೆ ಮುಹೂರ್ತ ನಿಗದಿಪಡಿಸಿದ ಪಾಕಿಸ್ತಾನ! ಸಚಿವ ರಶೀದ್ ಘೋಷಿಸಿದ್ದೇನು?
Team Udayavani, Aug 28, 2019, 5:01 PM IST
ರಾವಲ್ಪಿಂಡಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಗೊಳಿಸಿರುವ ಭಾರತದ ವಿರುದ್ಧ ಕಿಡಿಕಾರುತ್ತಿದ್ದ ಪಾಕಿಸ್ತಾನ ಎಲ್ಲಾ ವಿಧದ ಕಸರತ್ತು ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಮುಖಭಂಗ ಅನುಭವಿಸಿದ ಬೆನ್ನಲ್ಲೇ ಇದೀಗ ಪಾಕ್ ಮತ್ತು ಭಾರತದ ನಡುವೆ ಅಕ್ಟೋಬರ್ ಅಥವಾ ಸೆಪ್ಟೆಂಬರ್ ನಲ್ಲಿ ಯುದ್ಧ ನಡೆಯಲಿದೆ ಎಂದು ಪಾಕಿಸ್ತಾನದ ರೈಲ್ವೆ ಸಚಿವ ಶೇಕ್ ರಶೀದ್ ಅಹ್ಮದ್ ಬುಧವಾರ ಭವಿಷ್ಯ ನುಡಿದಿದ್ದಾರೆ.
ತವರು ನಗರ ರಾವಲ್ಪಿಂಡಿಯಲ್ಲಿ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ರಶೀದ್ ಅಹ್ಮದ್, ಕಾಶ್ಮೀರದ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಅಂತಿಮ ಕಾಲಘಟ್ಟ ಬಂದು ಬಿಟ್ಟಿದೆ. ಈ ನಿಟ್ಟಿನಲ್ಲಿ ಭಾರತದ ಜತೆ ಯುದ್ಧ ನಡೆಸುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಫ್ಯಾಸಿಸ್ಟ್ ಪ್ರಧಾನಿ ನರೇಂದ್ರ ಮೋದಿಯ ನಿರ್ಧಾರದಿಂದಾಗಿ ಕಾಶ್ಮೀರ ಸರ್ವನಾಶದ ಅಂಚಿನಲ್ಲಿದೆ. ಈ ವಿಚಾರದಲ್ಲಿ ಪಾಕಿಸ್ತಾನ ಮಾತ್ರ ಮುಂದೆ ನಿಂತು ವಿರೋಧಿಸುತ್ತಿದೆ. ಜಮ್ಮು-ಕಾಶ್ಮೀರದ ವಿಚಾರದಲ್ಲಿ ಭಾರತ ಕೈಗೊಂಡ ನಿರ್ಧಾರದ ಬಗ್ಗೆ ಜಗತ್ತಿನ ಉಳಿದ ಇಸ್ಲಾಂ ರಾಷ್ಟ್ರಗಳು ಯಾಕೆ ತುಟಿ ಬಿಚ್ಚುತ್ತಿಲ್ಲ ಎಂದು ರಶೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಶಕಗಳ ಹಿಂದೆಯೇ ಭಾರತದ ಮುಸ್ಲಿಂ ವಿರೋಧಿ ಮನಸ್ಥಿತಿಯ ಬಗ್ಗೆ ಮಹಮ್ಮದ್ ಅಲಿ ಜಿನ್ನಾ ವಿಶ್ಲೇಷಿಸಿದ್ದಾರೆ. ಆ ನಿಟ್ಟಿನಲ್ಲಿ ಭಾರತದ ಜತೆ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಯುತ್ತದೆ ಎಂದು ಈಗಲೂ ಆಲೋಚಿಸುವವರು ಮೂರ್ಖರು ಎಂದು ರಶೀದ್ ವಾಗ್ದಾಳಿ ನಡೆಸಿರುವುದಾಗಿ ವರದಿ ವಿವರಿಸಿದೆ.
ಭಾರತ-ಪಾಕ್ ವಾಯು ಮಾರ್ಗ ಆಗಸ್ಟ್ 28ರಿಂದ 30ರವರೆಗೆ ಬಂದ್:
ಕಾಶ್ಮೀರ ವಿಚಾರದಲ್ಲಿ ಒಳಗೊಳಗೆ ಕುದಿಯುತ್ತಿರುವ ಪಾಕಿಸ್ತಾನ ಇದೀಗ ಭಾರತದ ವಿಮಾನ ಸಂಚಾರಕ್ಕೆ ಅಡ್ಡಿಪಡಿಸುವ ನಿಟ್ಟಿನಲ್ಲಿ ಪ್ರಮುಖ ಮೂರು ಅಂತಾರಾಷ್ಟ್ರೀಯ ವಾಯು ಮಾರ್ಗವನ್ನು ಆಗಸ್ಟ್ 28ರಿಂದ 30ರವರೆಗೆ ಪೂರ್ಣ ಪ್ರಮಾಣದಲ್ಲಿ ಬಂದ್ ಮಾಡಿರುವುದಾಗಿ ಪಾಕಿಸ್ತಾನ ನಾಗರಿಕ ವಿಮಾನಯಾನ ಅಧಿಕಾರಿಗಳು ಘೋಷಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪಾಕಿಸ್ತಾನ ಸಚಿವ, ಭಾರತ ಅಫ್ಘಾನಿಸ್ತಾನಕ್ಕೆ ವಾಣಿಜ್ಯ ಸರಕು ಸಾಗಣೆಗೆ ಬಳಸುವ ಪಾಕಿಸ್ತಾನದ ರಸ್ತೆ ಮಾರ್ಗವನ್ನೂ ಸಂಪೂರ್ಣ ಬಂದ್ ಮಾಡಿರುವುದಾಗಿ ತಿಳಿಸಿದ್ದು, ಸಚಿವ ಸಂಪುಟದ ಸಲಹೆಯಂತೆ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಇತ್ತೀಚೆಗೆ ಫ್ರಾನ್ಸ್ ಸೇರಿದಂತೆ ವಿದೇಶ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ವಾಯುಮಾರ್ಗವನ್ನು ಬಳಸಿಕೊಂಡಿರುವುದಕ್ಕೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಆಕ್ಷೇಪ ವ್ಯಕ್ತಪಡಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅಂತಿಮ ಗಡುವು:ಅಪಾರ ಬೆಂಬಲಿಗರೊಂದಿಗೆ ಇಸ್ಲಾಮಾಬಾದ್ ಗೆ ಲಗ್ಗೆ ಇಟ್ಟ ಇಮ್ರಾನ್, ಸೇನೆ ನಿಯೋಜನೆ
ಭಾರತ ರಾಷ್ಟ್ರವೇ ಅಲ್ಲ ಎಂದ ರಾಹುಲ್ ಗಾಂಧಿಗೆ ಕೇಂಬ್ರಿಡ್ಜ್ ವಿಧ್ವಾಂಸರ ತರಾಟೆ!
ಟೆಕ್ಸಾಸ್ ಶೂಟೌಟ್ ಮರುದಿನವೇ ರೈಫಲ್ ಹಿಡಿದು ಶಾಲೆಗೆ ಬಂದ ಮತ್ತೋರ್ವ ವಿದ್ಯಾರ್ಥಿ
ಪ್ರಸಕ್ತ ವರ್ಷ ಅಮೆರಿಕದಲ್ಲಿ 10 ಶೂಟೌಟ್! ಶಸ್ತ್ರಾಸ್ತ್ರ ಕಾಯ್ದೆ ಮತ್ತೆ ಚರ್ಚೆಗೆ
ಜಾರ್ಜ್ ಡಬ್ಲ್ಯೂ ಬುಷ್ ಹತ್ಯೆಗೆ ಸ್ಕೆಚ್: ಅಮೆರಿಕದಲ್ಲಿ ಇರಾಕಿ ಪ್ರಜೆ ಬಂಧನ