ಶ್ರೀಲಂಕಾ ಸ್ಪೋಟ ಪ್ರಕರಣ : 40 ಶಂಕಿತರ ಬಂಧನ

ಸಾವಿನ ಸಂಖ್ಯೆ 310ಕ್ಕೆ ಏರಿಕೆ ; ಗಾಯಾಳುಗಳಲ್ಲಿ ಹಲವರ ಸ್ಥಿತಿ ಇನ್ನೂ ಗಂಭೀರ

Team Udayavani, Apr 23, 2019, 12:22 PM IST

ದ್ವೀಪರಾಷ್ಟ್ರದಲ್ಲಿ ಇದೀಗ ಎಲ್ಲೆಲ್ಲೂ ದುಗುಡ, ದುಃಖ, ನೋವು ತುಂಬಿದ ಮುಖಗಳೇ ಕಾಣಿಸುತ್ತಿವೆ.

ಕೊಲಂಬೋ: ಈಸ್ಟರ್‌ ರವಿವಾರ ಶ್ರೀಲಂಕಾ ದ್ವೀಪರಾಷ್ಟ್ರದ ರಾಜಧಾನಿ ಕೊಲಂಬೋದ ವಿವಿಧೆಡೆಗಳಲ್ಲಿ ಸಂಭವಿಸಿದ ಬಾಂಬ್‌ ಸ್ಫೋಟದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 310ಕ್ಕೆ ಏರಿಕೆಯಾಗಿದೆ. ಘಟನೆಗೆ ಸಂಬಂಧಿಸಿದಂತೆ 40 ಜನ ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ದೇಶವನ್ನೇ ತಲ್ಲಣಗೊಳಿಸಿದ ಈ ದುರಂತ ಘಟನೆಯ ಬಳಿಕ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆ ಅವರು ದೇಶಾದ್ಯಂತ ತುರ್ತುಸ್ಥಿತಿ ಘೋಷಿಸಿದ್ದು ದೇಶದ ಮಿಲಿಟರಿಗೆ ತಾತ್ಕಾಲಿಕ ಪೊಲೀಸ್‌ ಅಧಿಕಾರವನ್ನು ನೀಡಲಾಗಿದೆ. ಕೆಲವೊಂದು ಸಾಮಾಜಿಕ ಜಾಲತಾಣ ಸೈಟ್‌ ಗಳನ್ನೂ ಮುಚ್ಚಲಾಗಿದೆ. ರಾಷ್ಟ್ರ ರಾಜಧಾನಿಯ ಜನನಿಬಿಡ ಪ್ರದೇಶಗಳಲ್ಲಿ ಸಶಸ್ತ್ರ ಯೋಧರು ಪಥಸಂಚಲನ ನಡೆಸುತ್ತಿದ್ದಾರೆ. ಕರ್ಫ್ಯೂ ಸ್ಥಿತಿಯನ್ನು ಎರಡನೇ ದಿನಕ್ಕೆ ಮುಂದುವರೆಸಲಾಗಿದೆ.

2009ರಲ್ಲಿ ನಾಗರಿಕ ಯುದ್ಧಕ್ಕೆ ಅಂತ್ಯ ಹಾಡಿದ್ದ ಬಳಿಕ ಮೊನ್ನೆ ರವಿವಾರ ನಡೆದ ಈ ಆತ್ಮಾಹುತಿ ಬಾಂಬ್‌ ದಾಳಿಗಳೇ ದ್ವೀಪರಾಷ್ಟ್ರದಲ್ಲಿ ಸಂಭವಿಸಿದ ಅತೀದೊಡ್ಡ ದುರಂತವಾಗಿದೆ. ಇನ್ನು ಸೋಮವಾರದಂದು ಕೊಲಂಬೋದ ಪ್ರಮುಖ ಬಸ್‌ ನಿಲ್ದಾಣವೊಂದರಲ್ಲಿ 87 ಬಾಂಬ್‌ ಡಿಟೋನೇಟರ್‌ ಗಳು ಪತ್ತೆಯಾಗಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿತ್ತು.

ಈ ಭೀಕರ ಬಾಂಬ್‌ ಸ್ಪೋಟದಲ್ಲಿ ಎಂಟು ಭಾರತೀಯರೂ ಸೇರಿದಂತೆ 31 ವಿದೇಶಿ ನಾಗರಿಕರು ಸಾವಿಗೀಡಾಗಿದ್ದಾರೆ. ಗಾಯಗೊಂಡವರಲ್ಲಿ ಹಲವರ ಸ್ಥಿತಿ ಚಿಂತಾಜನಕವಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...

  • ಪುಣೆ: ಭಾರತೀಯ ಕ್ರಿಕೆಟ್‌ ತಂಡ ಏಕದಿನ ವಿಶ್ವಕಪ್‌ಗಾಗಿ ಇಂಗ್ಲೆಂಡ್‌ಗೆ ತೆರಳುವ ಮೊದಲು ಭಾರತ ತಂಡದ ಕೋಚ್‌ ರವಿಶಾಸ್ತ್ರಿ ಮಹಾರಾಷ್ಟ್ರದಲ್ಲಿರುವ ಶಿರ್ಡಿ ಸಾಯಿಬಾಬಾ...

  • ಕುಂದಾಪುರ: ಮಳೆ ನೀರಿಂಗಿಸುವ ಮೂಲಕ ನೀರನ್ನು ಕಾದಿಟ್ಟು ಕೊಳ್ಳಿ. ಪ್ರತಿಯೊಬ್ಬರೂ ನೀರುಳಿ ಸುವ ನಿಟ್ಟಿನಲ್ಲಿ ನಿಮ್ಮದೇ ಆದ ಕೊಡುಗೆಗಳನ್ನು ನೀಡಿ. ನೀರು ಎಂದರೆ...