ಯುಎಇ: ಮುಂದಿನ ಒಂದು ತಿಂಗಳ ಕಾಲ ಡ್ರೋನ್‌ಗೆ ನಿಷೇಧ
Team Udayavani, Jan 23, 2022, 8:45 PM IST
ಅಬುಧಾಬಿ: ಮುಂದಿನ ಒಂದು ತಿಂಗಳ ಕಾಲ ಯುಎಇ ವ್ಯಾಪ್ತಿಯಲ್ಲಿ ಡ್ರೋನ್ ಬಳಕೆ ಮಾಡುವುದನ್ನು ಅಲ್ಲಿನ ಸರ್ಕಾರ ನಿಷೇಧಿಸಿದೆ.
ಕೆಲ ದಿನಗಳ ಹಿಂದಷ್ಟೇ ಯೆಮೆನ್ ಹೌತಿ ಬಂಡುಕೋರರು ಅಬುಧಾಬಿಯ ತೈಲ ಸಂಗ್ರಹಾಗಾರಗಳ ಮೇಲೆ ಡ್ರೋನ್ ದಾಳಿ ನಡೆಸಿ ದ್ದರಿಂದ, ಇಬ್ಬರು ಭಾರತೀಯರು ಸೇರಿದಂತೆ ಮೂವರು ಅಸುನೀಗಿದ ಘಟನೆ ಬಳಿಕ ಈ ತೀರ್ಮಾನ ಕೈಗೊಳ್ಳಲಾಗಿದೆ.
ಆದರೆ, ಸರ್ಕಾರದ ನಿರ್ಧಾರಕ್ಕೆ ಸಂಬಂಧಿಸಿದಂತೆ ಇರುವ ಅಧಿಕೃತ ಆದೇಶದಲ್ಲಿ ದಾಳಿಯ ಅಂಶವನ್ನು ಉಲ್ಲೇಖಿಸಲಾಗಿಲ್ಲ.
ಇದನ್ನೂ ಓದಿ:ಸೋಡಿಗದ್ದೆ ದೇವಿಯ ವಾರ್ಷಿಕ ಜಾತ್ರೆ ಆರಂಭ : ಭಕ್ತರ ಸಂಖ್ಯೆಯಲ್ಲಿ ಭಾರೀ ಇಳಿಮುಖ