ಅಫ್ಘಾನಿಸ್ತಾನದಲ್ಲಿ ಸೈನಿಕರ ಸಂಖ್ಯೆ ಇಳಿಸಲು ಸಮ್ಮತಿ
Team Udayavani, Jun 20, 2020, 6:47 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ವಾಷಿಂಗ್ಟನ್: ಅಫ್ಘಾನಿಸ್ತಾನದಲ್ಲಿರುವ ತಮ್ಮ ಸೈನಿಕರ ಸಂಖ್ಯೆಯನ್ನು 8600ಕ್ಕೆ ಇಳಿಸಲು ಅಮೆರಿಕ ನಿರ್ಧರಿಸಿದೆ.
ಫೆಬ್ರವರಿಯಲ್ಲಿ ತಾಲಿಬಾನ್ ಜತೆಗೆ ನಡೆಸಿದ್ದ ಶಾಂತಿ ಒಪ್ಪಂದದ ಪ್ರಕಾರವಾಗಿ ಅಮೆರಿಕ ಈ ನಿರ್ಣಯಕ್ಕೆ ಬಂದಿದೆ.
‘ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಅಫ್ಘಾನಿಸ್ತಾನದಲ್ಲಿನ ಸೇನೆಯನ್ನು ಹಿಂತೆಗೆದುಕೊಳ್ಳಲು ಉತ್ಸುಕರಾಗಿದ್ದಾರೆ. ಫೆಬ್ರವರಿಯ ಒಪ್ಪಂದದ ಪ್ರಕಾರವಾಗಿ 135 ದಿನಗಳಲ್ಲಿ ಸೈನಿಕರ ಸಂಖ್ಯೆಯನ್ನು 8600ಕ್ಕೆ ಇಳಿಸಲಾಗುತ್ತದೆ. ಜುಲೈ ಒಳಗೆ ಇದು ಸಂಪೂರ್ಣ ಸಾಧ್ಯವಾಗಬಹುದು’ ಎಂದು ನೌಕಾಪಡೆ ಜನರಲ್ ಫ್ರಾಂಕ್ ಮೆಕೆಂಝಿ ಸ್ಪಷ್ಟಪಡಿಸಿದ್ದಾರೆ.
ಸುಮಾರು 2 ದಶಕಗಳಿಂದ ಒಂದು ಲಕ್ಷಕ್ಕೂ ಅಧಿಕ ಸಂಖ್ಯೆಯ ಅಮೆರಿಕನ್ ಸೈನಿಕರು ಅಫ್ಘಾನಿಸ್ತಾನದ ಯುದ್ಧದಲ್ಲಿ ಭಾಗಿಯಾಗಿದ್ದರು. ಪ್ರಸ್ತುತ ಅಫ್ಘನ್‌ನಲ್ಲಿ 12 ಸಾವಿರ ಅಮೆರಿಕನ್ ಯೋಧರು ನಿಯೋಜನೆಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್ ಟನ್ ವಿವಿ ವಿದ್ಯಾರ್ಥಿನಿ ಬಂಧನ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Thailandನಲ್ಲಿ ಗುಜರಿ ಮಾಫಿಯಾದ ಕಿಂಗ್ ಪಿನ್ ರವಿ ಕಾನಾ, ಪ್ರಿಯತಮೆ ಕಾಜಲ್ ಜಾ ಬಂಧನ
ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ