“ಒಡೆಯದ ಗಾಜು’ ಚೂರು ಚೂರಾದಾಗ!

Team Udayavani, Nov 22, 2019, 11:03 PM IST

ಕ್ಯಾಲಿಫೋರ್ನಿಯಾ: ಅಮೆರಿಕದ ವಾಹನೋದ್ಯಮ ಸಂಸ್ಥೆ ಟೆಸ್ಲಾ, ಮಾರುಕಟ್ಟೆಗೆ ಬಿಡುಗಡೆ ಮಾಡಲಿರುವ ಸೈಬರ್‌ ಟ್ರಕ್‌ನ ಮೊದಲ ಪ್ರಾಯೋಗಿಕ ಪ್ರದರ್ಶನದಲ್ಲೇ ಮುಖಭಂಗಕ್ಕೆ ಒಳಗಾಗಿದೆ. ಈ ವಿದ್ಯುತ್‌ಚಾಲಿತ ಸೈಬರ್‌ಟ್ರಕ್‌ನ ಗಾಜುಗಳು ಅತ್ಯಂತ ಬಲಿಷ್ಠವಾಗಿದೆ ಎಂದು ತೋರಿಸಲು ಹೋಗಿ ಟೆಸ್ಲಾ ಸಹ ಸಂಸ್ಥಾಪಕ ಮತ್ತು ಸಿಇಒ ಇಲಾನ್‌ ಮಸ್ಕ್ ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ.

ಲಾಸ್‌ ಏಂಜಲೀಸ್‌ನಲ್ಲಿ ಬಿಡುಗಡೆ ವೇಳೆ ವಿನ್ಯಾಸಕ ಫ್ರಾಂಝ್ ವೊನ್‌ ಹೊಲಾlಸೆನ್‌ರನ್ನು ಆಹ್ವಾನಿಸಿದ ಮಸ್ಕ್, ಲೋಹದ ಚೆಂಡನ್ನು ಸೈಬರ್‌ ಟ್ರಕ್‌ನ ಕಿಟಕಿಗೆ ಗುರಿಯಿಟ್ಟು ಎಸೆಯಲು ಸೂಚಿಸಿದರು. ಫ್ರಾಂಝ್ ಅದನ್ನು ಎಸೆದಾಗ ಗಾಜು ಪುಡಿ ಪುಡಿಯಾಗಿದೆ. “ಗಾಜು ಪುಡಿಯಾಗಲು ಸಾಧ್ಯವೇ ಇಲ್ಲ’ ಎಂದು ಇಲಾನ್‌ ಮಸ್ಕ್ ಹೇಳಿಕೊಂಡಿದ್ದರು. ಪ್ರಯಾಣಿಕರು ಕೂರುವ ಭಾಗದ ಗಾಜಿಗೂ ಲೋಹದ ಬಾಲ್‌ ಎಸೆದಾಗ ಅದೂ ಪುಡಿಯಾಯಿತು. “ಓ ದೇವರೇ!

ಬಹುಶ: ಲೋಹದ ಚೆಂಡು ಅತ್ಯಂತ ಗಟ್ಟಿಯಾಗಿರಬೇಕು’ ಎಂದು ಉದ್ಗರಿಸಿದ ಅವರು, ಈ ಹಿಂದೆ ಪರೀಕ್ಷೆಗೆ ಒಳಪಡಿಸಿದ ಸಂದರ್ಭಗಳಲ್ಲಿ ಗಾಜುಗಳು ಒಡೆದಿರಲಿಲ್ಲ ಎಂದಿದ್ದಾರೆ. ಜತೆಗೆ ಎಲ್ಲಿ ತಪ್ಪಾಗಿದೆಯೋ ಅದನ್ನು ಸರಿಪಡಿಸಲಾಗುತ್ತದೆ ಎಂದು ಹೇಳಿದ್ದಾರೆ.

ಸೈಬರ್‌ ಟ್ರಕ್‌ ವೈಶಿಷ್ಟé: ಮೂರು ಮಾದರಿಗಳಲ್ಲಿ ಸೈಬರ್‌ ಟ್ರಕ್‌ ಬಿಡುಗಡೆಯಾಗಲಿದ್ದು, ಟಾಪ್‌ ಎಂಡ್‌ ಮಾಡೆಲ್‌ ಒಂದು ಬಾರಿ ಚಾರ್ಜ್‌ ಮಾಡಿದರೆ, 800 ಕಿಮೀ ದೂರ ಪ್ರಯಾಣಿಸುವ ಸಾಮರ್ಥ್ಯ ಹೊಂದಲಿದೆ. ವಾಹನ ಚಾಲನೆ ಮಾಡಲು ಶುರು ಮಾಡಿದ 3 ಸೆಕೆಂಡ್‌ಗಳಲ್ಲಿ 100 ಕಿಮೀ ವರೆಗೆ ವೇಗ ಪಡೆದುಕೊಳ್ಳಲಿದೆ. ಅದಕ್ಕೆ 6,350 ಕೆಜಿ ಭಾರ ಹೊರುವ ಸಾಮರ್ಥ್ಯ ಇರಲಿದ್ದು, 69,000 ಡಾಲರ್‌ ಬೆಲೆ ನಿಗದಿ ಮಾಡಲಾಗಿದೆ. 2021ರ ಅಂತ್ಯ ಭಾಗದಲ್ಲಿ ಸೈಬರ್‌ ಟ್ರಕ್‌ಗಳ ಉತ್ಪಾದನೆ ಶುರುವಾಗಲಿದ್ದು, 2022ರ ಆರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ