ಪುದುಚೇರಿ ಪ್ರದೇಶ ಸಣ್ಣದು; ಲೆಕ್ಕಾಚಾರ ದೊಡ್ಡದು

Team Udayavani, Mar 17, 2021, 6:20 AM IST

ಪುದುಚೇರಿ ಪ್ರದೇಶ ಸಣ್ಣದು; ಲೆಕ್ಕಾಚಾರ ದೊಡ್ಡದು

ಭಾರತೀಯ ಜನತಾ ಪಾರ್ಟಿಗೆ ದೊಡ್ಡ ಊರು, ಸಣ್ಣ ಊರೆಂಬ ಲೆಕ್ಕವಿಲ್ಲ. ಅದಕ್ಕೀಗ ಎಲ್ಲೆಲ್ಲೂ ಪಕ್ಷದ ಬಾವುಟ ಹಾರಿಸುವ ಉಮೇದು. ಅದ‌ಕ್ಕಾಗಿ ಕಾಂಗ್ರೆಸ್‌ ಮುಕ್ತ ಭಾರತ ಎನ್ನುತ್ತಾ ಎಲ್ಲೆಲ್ಲಿ ಸಾಧ್ಯವೋ ಅಲ್ಲಲ್ಲಿ ಹೊಸ ತಂತ್ರಗಳಿಂದ ಜನರನ್ನು ಸೆಳೆಯುವ ಪ್ರಯತ್ನ ಮಾಡುತ್ತಲೇ ಇದೆ.

ಪುದುಚೇರಿ ಒಂದು ಕೇಂದ್ರಾಡಳಿತ ಪ್ರದೇಶ. ಚುನಾಯಿತ ಮುಖ್ಯಮಂತ್ರಿ ಮತ್ತು ಜನಪ್ರತಿನಿಧಿಗಳ ವ್ಯವಸ್ಥೆ ಜಾರಿಯಲ್ಲಿದೆ. ಫ್ರೆಂಚ್‌ ವಸಾಹತು ಶೈಲಿಯ ಪ್ರಭಾವ ಇನ್ನೂ ಅಲ್ಲಿ ಸ್ವಲ್ಪ ಇದೆ. ಯೋಗಿ ಶ್ರೀ ಅರವಿಂದರು ನೆಲೆಗೊಂಡ ಸ್ಥಳ. ಕಡಲ ಕಿನಾರೆಗೆ ಅಂಟಿಕೊಂಡ ಈ ಪುಟ್ಟ ಪ್ರದೇಶದಲ್ಲಿ ಚುನಾವಣೆಯ ಕಾವು ಜೋರಾಗತೊಡಗಿದೆ.

ಎಐಎಡಿಎಂಕೆ, ಡಿಎಂಕೆ ಸಹಿತ ಇನ್ನಿತರ ಪಕ್ಷಗಳು ಹಳೆ ಹುಲಿಗಳು. ಆದರೆ ಕಾಂಗ್ರೆಸ್‌ ಹಳೆಯ ರಾಷ್ಟ್ರೀಯ ಹುಲಿ (ರಾಷ್ಟ್ರೀಯ ಪಕ್ಷ ). ಇಲ್ಲಿನ ಮತದಾರರಿಗೆ ಕಾಂಗ್ರೆಸ್‌ ಮೇಲೆ ಒಂದು ಬಗೆಯ ಮಮಕಾರವಿದೆ. ಈ ಬಾರಿ ಯಾರಿಗೆ ಲಾಭವಾಗು ತ್ತದೋ ಗೊತ್ತಿಲ್ಲ, ನಮಗೆ ನಷ್ಟವಾಗ ಬಾರದೆಂಬುದು ಕಾಂಗ್ರೆಸ್‌ನ ಲೆಕ್ಕಾ ಚಾರ. ಆದರೆ ಬಿಜೆಪಿಯದ್ದು ಯಾರು ಗೆಲ್ಲದಿದ್ದರೂ ಪರವಾಗಿಲ್ಲ,

ಕಾಂಗ್ರೆಸ್‌ ಸೋಲಬೇಕೆಂಬ ಲೆಕ್ಕಾಚಾರ. ಕಾಂಗ್ರೆಸ್‌ನ ಪಾಳಯದಲ್ಲಿ ಡಿಎಂಕೆ ಮತ್ತಿತರ ಪಕ್ಷಗಳಿದ್ದರೆ, ಎಐಎನ್‌ಆರ್‌ಸಿ, ಎಐಎಡಿಎಂಕೆ, ಬಿಜೆಪಿ ಮತ್ತೂಂದು ತುದಿಯಲ್ಲಿವೆ.

1974ರಿಂದ ಇಲ್ಲಿಯವರೆಗೆ ಲೆಕ್ಕ ಹಾಕಿದರೆ, ಒಮ್ಮೆ ಮಾತ್ರ (1977) ಕಾಂಗ್ರೆಸ್‌ ಗೆ ಕೇವಲ ಎರಡು ಸ್ಥಾನಗಳು ಸಿಕ್ಕಿವೆ. ಬಹುತೇಕ ಬಾರಿ ಏಕೈಕ ದೊಡ್ಡ ಪಕ್ಷವಾಗಿ ಹೊಮ್ಮಿ ಬಂದು ಸ್ವತಂತ್ರವಾಗಿ ಹಾಗೂ ಮಿತ್ರ ಪಕ್ಷಗಳೊಡಗೂಡಿ ಅಧಿಕಾರ ಹಿಡಿದಿದೆ. ಒಟ್ಟು 33 ವಿಧಾನಸಭಾ ಕ್ಷೇತ್ರಗಳುಳ್ಳ ಕೇಂದ್ರಾಡಳಿತ ಪ್ರದೇಶ. ಈ ಪೈಕಿ 3 ಸ್ಥಾನಗಳಿಗೆ ನಾಮ ನಿರ್ದೇಶನ ಮಾಡಲಾಗುತ್ತದೆ. ಉಳಿದ 30 ಕ್ಷೇತ್ರಗಳಲ್ಲಿ ಮಾತ್ರ ಸ್ಪರ್ಧೆ.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 15 ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿಯಿತು. ಜತೆಗೆ ಮೈತ್ರಿ ಪಕ್ಷಗಳೂ ಇದ್ದವು. ಈ ಬಾರಿ ಕಾಂಗ್ರೆಸ್‌ಗೆ ಅಧಿಕಾರ ಕಳೆದುಕೊಳ್ಳುವ ದುಃಸ್ವಪ್ನ ಈಗಲೇ ಕಾಡತೊಡಗಿದೆ. ಒಂದು ತಿಂಗಳ ಹಿಂದೆ ವಿ. ನಾರಾಯಣಸ್ವಾಮಿ ನೇತೃತ್ವದ ಕಾಂಗ್ರೆಸ್‌ ಸರಕಾರ ಇಕ್ಕಟ್ಟಿಗೆ ಸಿಲುಕಿತು. ಆಡಳಿತ ಪಕ್ಷ ಕಾಂಗ್ರೆಸ್‌ನ ಹಲವಾರು ಶಾಸಕರು ರಾಜೀನಾಮೆ ಕೊಟ್ಟರು. ಇದರಿಂದ ಪಕ್ಷ ಸಂಖ್ಯಾ ಬಲಾಬಲ ಏರುಪೇರಾಯಿತು. ಕೊನೆಗೂ ಅಸಹಾಯಕರಾಗಿ ಮುಖ್ಯಮಂತ್ರಿ ರಾಜೀನಾಮೆ ನೀಡಿದರು. ಕಾಂಗ್ರೆಸ್‌ ದೂರುವಂತೆ ಬಿಜೆಪಿ ಈ ಶಾಸಕರನ್ನೆಲ್ಲ ತನ್ನತ್ತ ಸೆಳೆದುಕೊಂಡಿದೆ.

ಕೇಂದ್ರದಿಂದ ಎಚ್ಚರಿಕೆಯ ನಡೆ
ಕೇಂದ್ರ ಸರಕಾರವೂ ಕೊಂಚ ಎಚ್ಚ ರದ ನಡೆಯನ್ನು ಇಟ್ಟಿತು. ಸರಕಾರ ಉರುಳುವ ಮುನ್ನ (ರಾಜೀನಾಮೆ ನೀಡುವ) ಗವರ್ನರ್‌ ಕಿರಣ್‌ ಬೇಡಿ ಯವರನ್ನು ಸ್ಥಾನದಿಂದ ತೆಗೆಯಿತು. ಇದಕ್ಕೆ ಕಾರಣ, ಕಾಂಗ್ರೆಸ್‌ ನೇತೃತ್ವದ ಸರಕಾರಕ್ಕೂ ರಾಜ್ಯಪಾಲರಿಗೂ ಬಹಳ ದಿನಗಳಿಂದ ಸಂಬಂಧ ಹಳಸಿತ್ತು. ಚುನಾವಣೆ ಹತ್ತಿರ ಬಂದಾಗ ಇಂಥ ಗೊಂದಲಗಳು ಮುಂದುವರಿದರೆ ಕಷ್ಟ ಎಂದುಕೊಂಡು ಮೊದಲು ತೆಗೆ ದದ್ದು ರಾಜ್ಯಪಾಲರನ್ನು. ಯಾವುದೇ ಕಾರಣಕ್ಕೂ ತಮಗೆ ಅಭಿವೃದ್ಧಿ ಕಾರ್ಯ ನಡೆಸಲು ಗವರ್ನರ್‌ ಬಿಡಲಿಲ್ಲ ಎಂದು ಕಾಂಗ್ರೆಸ್‌ ಚುನಾವಣ ವೇದಿಕೆಗಳಲ್ಲಿ ಹೇಳಬಾರದು. ಆ ಮೂಲಕ ಅನುಕಂಪದ ಮತ ಅತ್ತ ತಿರುಗಬಾರದೆಂಬುದು ಬಿಜೆಪಿ ತಂತ್ರ. 2011ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದ ರಂಗಸ್ವಾಮಿ ಕಟ್ಟಿಕೊಂಡಿದ್ದು ಎಐಎನ್‌ಅರ್‌ಸಿ. ಆ ಚುನಾವಣೆಯಲ್ಲೇ 15 ಸ್ಥಾನಗಳನ್ನು ಗಳಿಸಿ ಅಧಿಕಾರ ಗಳಿಸಿತು. ಅವರು ಸೆಳೆದುಕೊಂಡಿದ್ದು ಕಾಂಗ್ರೆಸ್‌ನ ಮತಗಳನ್ನೇ. ಅದೇ ರಂಗಸ್ವಾಮಿ ಈಗ ಎನ್‌ಡಿಎ ನೇತೃತ್ವ ವಹಿಸಿದ್ದಾರೆ ಪುದುಚೇರಿಯಲ್ಲಿ. 16 ಸೀಟುಗಳಲ್ಲಿ ಎಐಎನ್‌ಆರ್‌ಸಿ ಸ್ಪರ್ಧಿಸಿದರೆ, 14 ಸ್ಥಾನಗಳಲ್ಲಿ ಬಿಜೆಪಿ, ಎಐಎಡಿಎಂಕೆ ಸ್ಫರ್ಧಿಸುತ್ತಿದೆ.

ಈಗಿರುವ ರಣರಂಗದಲ್ಲಿ ಇತ್ತೀಚಿನ ಸಮೀಕ್ಷೆ ಪ್ರಕಾರ ಎನ್‌ಡಿಎ 23-27 ಸ್ಥಾನಗಳನ್ನು ಗೆಲ್ಲುವ ಲೆಕ್ಕ ಇದೆ. ಕಾಂಗ್ರೆಸ್‌ ನೇತೃತ್ವದ ಯುಪಿಎ ಕೂಟಕ್ಕೆ 3-7 ಸ್ಥಾನಗಳ ನಿರೀಕ್ಷೆಯಿದೆ. ಕಾದು ನೋಡಬೇಕು.

– ಅಶ್ವಘೋಷ

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನುಗ್ಗೇಕಾಯಿಯ ಊರಿನಲ್ಲಿ ಚುನಾವಣೆಯ ಘಮಘಮ

ನುಗ್ಗೇಕಾಯಿಯ ಊರಿನಲ್ಲಿ ಚುನಾವಣೆಯ ಘಮಘಮ

ಕಾಂಗ್ರೆಸ್‌ನಿಂದ ಹೊರ ಹೋದವರೆಲ್ಲ ಒಡೆಯರೇ!

ಕಾಂಗ್ರೆಸ್‌ನಿಂದ ಹೊರ ಹೋದವರೆಲ್ಲ ಒಡೆಯರೇ!

ತಮಿಳುನಾಡು ಚುನಾವಣೆ: ಅಣ್ಣಾಮಲೈ ನಾಮಪತ್ರ ಸಲ್ಲಿಕೆ, ತೇಜಸ್ವಿ ಸೂರ್ಯ, ಮುನಿರತ್ನ ಸಾಥ್

ತಮಿಳುನಾಡು ಚುನಾವಣೆ: ಅಣ್ಣಾಮಲೈ ನಾಮಪತ್ರ ಸಲ್ಲಿಕೆ, ತೇಜಸ್ವಿ ಸೂರ್ಯ, ಮುನಿರತ್ನ ಸಾಥ್

ಕೇರಳ ಕಾಂಗ್ರೆಸ್‌ನ ಅರ್ಧ ಕಥೆ; ಉಳಿದದ್ದು ನಾಳೆ

ಕೇರಳ ಕಾಂಗ್ರೆಸ್‌ನ ಅರ್ಧ ಕಥೆ; ಉಳಿದದ್ದು ನಾಳೆ

kamal haasan

ತಮಿಳುನಾಡು: ಚುನಾವಣಾ ಪ್ರಚಾರ ಮುಗಿಸಿ ವಾಪಾಸಾಗುತ್ತಿದ್ದ ಕಮಲ್ ಹಾಸನ್ ಮೇಲೆ ದಾಳಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.